ನೀವು ನಿಜವಾದ ಹನುಮಂತನ (Hanumanta) ಭಕ್ತನಾಗಿದ್ದರೆ ಈ ಕಥೆಯನ್ನು ಕೇಳಿ ….!

Bigg Boss

Table of Contents

ಗಿಲ್ಲಿ ಆಗೋಕೆ ಟ್ರೈ ಮಾಡ್ತಿದ್ದಾರಾ ಪ್ರಶಾಂತ್..!?

        ಬಿಗ್ ಬಾಸ್ (Bigg Boss) ಮನೆಗೆ ಈಗ ವೈಟ್ ಕಾರ್ಡ್ ಎಂಟ್ರಿ ಮೂಲಕ ಎಂಟ್ರಿ ಕೊಟ್ಟ ಸ್ಪರ್ಧಿಗಳು ಅಂದ್ರೆ ಅದು ಘಾಟಿ ...
Darshan
Challenging star DarshanDarshan Pavithra Gowda AI videoDarshan Pavithra Gowda fake videoDarshan Pavithra Gowda generated videoDarshan Pavithra Gowda latest viral videoDarshan Pavithra Gowda pooja videoDarshan Pavithra Gowda real or fake videoDarshan Pavithra Gowda real videoDarshan Pavithra Gowda sitting together videoDarshan Pavithra Gowda social media videoDarshan Pavithra Gowda viral newsDarshan Pavithra Gowda viral pooja videoDarshan Pavithra Gowda viral videoDarshan Pavitra GowdaDarshan viral videoFilm News in KannadaKannada NewsPavithra Gowda viral videoದರ್ಶನ್ ಪವಿತ್ರಾ ಗೌಡ AI ವಿಡಿಯೋದರ್ಶನ್ ಪವಿತ್ರಾ ಗೌಡ ಇತ್ತೀಚಿನ ಸುದ್ದಿದರ್ಶನ್ ಪವಿತ್ರಾ ಗೌಡ ಎಐ ವಿಡಿಯೋದರ್ಶನ್ ಪವಿತ್ರಾ ಗೌಡ ಒಟ್ಟಿಗೆ ಕುಳಿತಿರುವ ವಿಡಿಯೋದರ್ಶನ್ ಪವಿತ್ರಾ ಗೌಡ ಜನರೇಟ್ ಮಾಡಿದ ವಿಡಿಯೋದರ್ಶನ್ ಪವಿತ್ರಾ ಗೌಡ ನಕಲಿ ವಿಡಿಯೋದರ್ಶನ್ ಪವಿತ್ರಾ ಗೌಡ ಪೂಜೆ ಮಾಡುತ್ತಿರುವ ವಿಡಿಯೋದರ್ಶನ್ ಪವಿತ್ರಾ ಗೌಡ ಪೂಜೆ ವಿಡಿಯೋದರ್ಶನ್ ಪವಿತ್ರಾ ಗೌಡ ಫೇಕ್ ವಿಡಿಯೋದರ್ಶನ್ ಪವಿತ್ರಾ ಗೌಡ ವಿಡಿಯೋ ನಿಜವೋ ಸುಳ್ಳೋದರ್ಶನ್ ಪವಿತ್ರಾ ಗೌಡ ವೈರಲ್ ವಿಡಿಯೋದರ್ಶನ್ ಪವಿತ್ರಾ ಗೌಡ ಸಾಮಾಜಿಕ ಜಾಲತಾಣ ವೈರಲ್ ವಿಡಿಯೋದರ್ಶನ್ ವೈರಲ್ ವಿಡಿಯೋಪವಿತ್ರಾ ಗೌಡ ವೈರಲ್ ವಿಡಿಯೋ

ದರ್ಶನ್ ಪವಿತ್ರ ವಿಡಿಯೋ ಫೇಕ್..! ಆದ್ರೆ ಫೋಟೋ ಫೇಕ್ ಅಂತೀರಾ…!?

           ದರ್ಶನ್ (Darshan) ಹಾಗೂ ದರ್ಶನ್ ಪ್ರಿಯತಮೆ ಪವಿತ್ರ ಗೌಡಳ ಇನ್ನೊಂದು ವಿಡಿಯೋ ವೈರಲ್. ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ...
Bigg Boss
Bigboss kannadaBigg Boss Kannada breaking newsBigg Boss Kannada ContestantsBigg Boss Kannada eliminationBigg Boss Kannada elimination predictionBigg Boss Kannada elimination todayBigg Boss Kannada evictionBigg Boss Kannada Latest NewsBigg Boss Kannada Latest UpdateBigg Boss Kannada Mid Day EliminationBigg Boss Kannada Mid Day Elimination | ಬಿಗ್ ಬಾಸ್ ಕನ್ನಡ ಮಿಡ್ ಡೇ ಎಲಿಮಿನೇಷನ್ | Who Will Be Eliminated | ಇಂದು ಯಾರು ಎಲಿಮಿನೇಟ್ | Bigg Boss Kannada Latest Update | ಬಿಗ್ ಬಾಸ್ ಕನ್ನಡ ಎಲಿಮಿನೇಷನ್ ಸುದ್ದಿBigg Boss Kannada mid day evictionBigg Boss Kannada today eliminationBigg Boss Kannada today episodeBigg Boss Kannada votingBigg Boss Kannada voting updateFilm News in KannadaKannada Newskiccha sudeepWho will be eliminated from Bigg Boss Kannadaಇಂದು ಯಾರು ಎಲಿಮಿನೇಟ್ಬಿಗ್ ಬಾಸ್ ಕನ್ನಡ ಇಂದಿನ ಸುದ್ದಿಬಿಗ್ ಬಾಸ್ ಕನ್ನಡ ಇವತ್ತಿನ ಎಪಿಸೋಡ್ಬಿಗ್ ಬಾಸ್ ಕನ್ನಡ ಎಲಿಮಿನೇಷನ್ಬಿಗ್ ಬಾಸ್ ಕನ್ನಡ ಬ್ರೇಕಿಂಗ್ ನ್ಯೂಸ್ಬಿಗ್ ಬಾಸ್ ಕನ್ನಡ ಮಿಡ್ ಡೇ ಎಲಿಮಿನೇಷನ್ಬಿಗ್ ಬಾಸ್ ಕನ್ನಡ ಯಾರು ಎಲಿಮಿನೇಟ್ಬಿಗ್ ಬಾಸ್ ಕನ್ನಡ ಲೇಟೆಸ್ಟ್ಬಿಗ್ ಬಾಸ್ ಕನ್ನಡ ವೋಟಿಂಗ್ಬಿಗ್ ಬಾಸ್ ಕನ್ನಡ ಸ್ಪರ್ಧಿಗಳು

ಬಿಗ್ ಬಾಸ್ ಮಿಡ್ ಡೇ ಎಲಿಮಿನೇಟ್ ಆದ ನಾಲ್ಕು ಕಂಟೆಸ್ಟೆಂಟ್ಗಳು ಇವರೇ..!

          ಈ ಬಾರಿಯ ಬಿಗ್ ಬಾಸ್ (Bigg Boss) ಟ್ವಿಸ್ಟ್ ಮೇಲ್ ಟ್ವಿಸ್ಟು, ಟ್ವಿಸ್ಟ್ ಮೇಲ್ ಟ್ವಿಸ್ಟು ಅನ್ನೋ ಹಾಗೆ ಇದೆ ...
Shankar Nag

ಶಂಕರ್ ನಾಗ್ ಗೆ ನಿಜವಾಗಿಯೂ ಆಕ್ಸಿಡೆಂಟ್ ಆದದ್ದ ಅಥವಾ ಕೊಲೆನಾ..!

          ಶಂಕರ್ ನಾಗ್ (Shankar Nag) ಕನ್ನಡ ಚಿತ್ರರಂಗ ಕಂಡಂತಹ ಒಬ್ಬ ಅದ್ಭುತ ನಟ ನಿರ್ದೇಶಕ  ಹಾಗೂ ನಿರ್ಮಾಪಕ , ಶಂಕರ್ ...
Big Boss13
Agni Pariksha ContestantAgni Pariksha ಅಗ್ನಿ ಪರೀಕ್ಷೆBBK 13BBK 13 ಕನ್ನಡBigboss kannadaBigg Boss Kannada 13Bigg Boss Kannada 13 Latest NewsBigg Boss Kannada ContestantsBigg Boss Kannada Latest UpdateBigg Boss Kannada NewsBigg Boss Kannada News ಕನ್ನಡBigg Boss Kannada UpdatesBigg Boss Kannada ಸೀಸನ್ 13Common Man ContestantsDhanushDhanush ಧನುಷ್Film News in KannadaKannada Bigg Boss Season 13Kannada NewsKannada Reality Showkiccha sudeepKiccha SudeepKiccha Sudeep ClassKiccha Sudeep ಕಿಚ್ಚ ಸುದೀಪ್Kiran ShastriKiran Shastri ಕಿರಣ್ ಶಾಸ್ತ್ರಿKota ContestantKota Contestant ಕೋಟಾ ಸ್ಪರ್ಧಿLikhithLikhith ಲಿಖಿತ್Modern Kavi ManjaModern Kavi Manja ಮಾಡರ್ನ್ ಕವಿ ಮಂಜSudeepSudeep Class ಸುದೀಪ್ ಕ್ಲಾಸ್Sudeep Takes Classಅಗ್ನಿ ಪರೀಕ್ಷೆ ಸ್ಪರ್ಧಿಕನ್ನಡ ರಿಯಾಲಿಟಿ ಶೋಕಾಮನ್ ಮ್ಯಾನ್ ಸ್ಪರ್ಧಿಗಳುಕಿಚ್ಚ ಸುದೀಪ್ಕಿಚ್ಚ ಸುದೀಪ್ ಕ್ಲಾಸ್ಕಿರಣ್ ಶಾಸ್ತ್ರಿಕೋಟಾ ಸ್ಪರ್ಧಿಧನುಷ್ಬಿಗ್ ಬಾಸ್ ಕನ್ನಡ 13ಬಿಗ್ ಬಾಸ್ ಕನ್ನಡ ಅಪ್ಡೇಟ್ಬಿಗ್ ಬಾಸ್ ಕನ್ನಡ ಲೇಟೆಸ್ಟ್ಬಿಗ್ ಬಾಸ್ ಕನ್ನಡ ಸೀಸನ್ 13ಬಿಗ್ ಬಾಸ್ ಕನ್ನಡ ಸೀಸನ್ 13 ಸುದ್ದಿಬಿಗ್ ಬಾಸ್ ಕನ್ನಡ ಸುದ್ದಿಬಿಗ್ ಬಾಸ್ ಕನ್ನಡ ಸ್ಪರ್ಧಿಗಳುಮಾಡರ್ನ್ ಕವಿ ಮಂಜಲಿಖಿತ್ಸುದೀಪ್ ಕ್ಲಾಸ್

ಬಿಗ್ ಬಾಸ್ ಮನೆಯಲ್ಲಿ ಈ ನಾಲ್ಕು ಕಾಮನ್ ಮ್ಯಾನ್ ಇಲ್ದಿದ್ರೆ…!

            ಸದ್ಯಕ್ಕೆ ಕನ್ನಡ ಬಿಗ್ ಬಾಸ್ ಸೀಸನ್ 13 (Big Boss13)  ಶುರುವಾಗಿದೆ.. ಈ ಮನೆಯಲ್ಲಿ ಸಿಕ್ಕಾಪಟ್ಟೆ ಕಿರಿಕ್ ಮಾಡೋರು ...

ನೀವು ನಿಜವಾದ ಹನುಮಂತನ (Hanumanta) ಭಕ್ತನಾಗಿದ್ದರೆ ಈ ಕಥೆಯನ್ನು ಕೇಳಿ ….!

             ಹನುಮಂತ (Hanumantha) ಎಷ್ಟು ಪವರ್ಫುಲ್ ಅಂತ ನಿಮಗೆಲ್ಲರಿಗೂ ಗೊತ್ತಿದೆ, ಆದರೆ ಐದು ತಲೆಯ ಹನುಮಂತ Panchmukhi Hanuman ಎಷ್ಟು ...

Panchamuki Hanumantha                 

 

ಹನುಮಂತ (Hanumantha) ಎಷ್ಟು ಪವರ್ಫುಲ್ ಅಂತ ನಿಮಗೆಲ್ಲರಿಗೂ ಗೊತ್ತಿದೆ. ಆದರೆ ಐದು ತಲೆಯ ಹನುಮಂತ ಎಷ್ಟು ಪವರ್ಫುಲ್ ಅಂತ ನಿಮಗೆ ಗೊತ್ತಾ…!? ಏನೂ…! ಹನುಮಂತನಿಗೆ ಐದು ತಲೆ ಇದೆಯಾ ಅಂತ ಅನ್ಕೊಂಡಿದ್ದೀರಾ… ಹೌದು, ಆತನನ್ನ ಪಂಚಮುಖಿ ಹನುಮಂತ ಅಂತ ಕರೀತಾರೆ. ಪಂಚಮುಖಿ ಹನುಮಂತನ ದರ್ಶನ ಪಡೆದರೆ ಹನುಮಂತನ ಆಶೀರ್ವಾದ ಮಾತ್ರವಲ್ಲದೆ, ಸಾಕ್ಷಾತ್ ಮಹಾ ವಿಷ್ಣುವಿನ ಆಶೀರ್ವಾದ ಕೂಡ ಸಿಗುತ್ತದೆ. ಯಾಕೆಂದರೆ ಈ ಅವತಾರದಲ್ಲಿ ಒಂದು ಹನುಮಂತನ ನಿಜರೂಪವಾದರೆ, ಇನ್ನು ನಾಲ್ಕು ತಲೆಗಳು ವಿಷ್ಣುವಿನ ಅವತಾರಗಳಾದ ವರಾಹ ಅವತಾರ, ಗರುಡಾವತಾರ, ಉಗ್ರ ನರಸಿಂಹ ಅವತಾರ ಹಾಗೂ ಹಯಗ್ರೀವನ ಅವತಾರದ ರೂಪದಲ್ಲಿ ಹನುಮಂತ ಕಾಣಿಸುತ್ತಾನೆ.

 

Panchamuki Hanumantha

ಪಂಚಮುಖಿ (Panchamuki Hanumantha) ಅವತಾರ ಎತ್ತಿದ ಘಟನೆಯ ಹಿಂದೆ ಒಂದು ಪವಿತ್ರವಾದ ಕಾರಣವಿದೆ :

ಸೀತಾಮಾತೆಯನ್ನು ರಾವಣ ಅಪಹರಿಸಿ ಲಂಕೆಯಲ್ಲಿ ಇಟ್ಟುಕೊಂಡಿದ್ದ ಕಥೆ ನಮಗೆಲ್ಲರಿಗೂ ಗೊತ್ತು. ಆ ಸಮಯದಲ್ಲಿ ಸೀತಾ ಮಾತೆಯನ್ನು ಕಾಪಾಡಲು ಹೋಗಿ ಜಟಾಯು ತನ್ನ ಒಂದು ರೆಕ್ಕೆಯನ್ನು ಕಳೆದುಕೊಂಡ. ಅದೇ ದಾರಿಯಲ್ಲಿ ರಾಮ – ಲಕ್ಷ್ಮಣ ಸೀತೆಯನ್ನು ಆರಿಸಿಕೊಂಡು ಬರುತ್ತಾರೆ. ಈ ಸಮಯದಲ್ಲಿ ಅಲ್ಲೇ ಬಿದ್ದಿದ್ದ ಜಟಾಯುವಿನಿಂದ ರಾವಣ ಸೀತಾ ಮಾತೆಯನ್ನ ಲಂಕೆಗೆ ಕರೆದುಕೊಂಡು ಹೋದ ಎನ್ನುವ ವಿಷಯ ತಿಳಿಯುತ್ತದೆ. ವಿಷಯ ತಿಳಿದ ರಾಮ ಲಕ್ಷ್ಮಣ, ಸೀತೆಯನ್ನ ಅರಸಿ ಲಂಕೆಯತ್ತ ಪ್ರಯಾಣಿಸುತ್ತಿರುವಾಗ ಹನುಮಂತ ಎದುರಾಗುತ್ತಾನೆ. ರಾಮ ಲಕ್ಷ್ಮಣರಿಂದ ವಿಷಯ ತಿಳಿದ ಹನುಮಂತ ನಾನು ಸೀತಾಮಾತೆಯನ್ನು ಕರೆದುಕೊಂಡು ಬರುವೆ ಎಂದು ಮಾತುಕೊಟ್ಟು ಲಂಕೆಗೆ ಪ್ರವೇಶಿಸುತ್ತಾನೆ.  

 

ನಂತರ ಹನುಮಂತನ ಹಾಗೂ ರಾವಣನ ಸೇನೆಯ ನಡುವೆ ಘೋರವಾದ ಯುದ್ಧ ಆಗುತ್ತದೆ. ಹನುಮಂತನ ಸೈನ್ಯ ಬಲಿಷ್ಠವಾಗಿದ್ದರಿಂದ ಈ ಯುದ್ಧದಲ್ಲಿ ರಾವಣನು ಸಹೋದರನಾದ ಕುಂಭಕರ್ಣ ಹಾಗು ಮಗನಾದ ಇಂದ್ರಜಿತುವನ್ನು ಕಳೆದುಕೊಳ್ಳುತ್ತಾನೆ. ರಾವಣನ ಸೇನೆ ಬಲಹೀನವಾಗುತ್ತಾ ಬರುತ್ತದೆ. ರಾವಣನಿಗೆ ತಾನು ಸೋಲುವೆನೆಂದು ಖಚಿತವಾಗುತ್ತದೆ. ಇದರಿಂದ ಭಯಗೊಂಡ ರಾವಣ ತಕ್ಷಣ ತನ್ನ ಸಂಬಂಧಿಯಾಗಿದ್ದ ಪಾತಾಳ ಲೋಕದ ಅಧಿಪತಿಯಾದಂತಹ ಅಹಿರಾವಣನನ್ನು ತನ್ನ ಸಹಾಯಕ್ಕಾಗಿ ಕರೆಸಿಕೊಳ್ಳುತ್ತಾನೆ. ರಾವಣ ಅಹಿ ರಾವಣನನ್ನು ಭೇಟಿಯಾಗಲು ಪಾತಾಳ ಲೋಕಕ್ಕೆ ಹೋಗಿದ್ದ ವಿಷಯ ರಾವಣನ ಸಹೋದರನಾದಂತಹ ವಿಭೀಷಣನ ಕಿವಿಗೆ ಬೀಳುತ್ತದೆ. ವಿಭೀಷಣ ರಾಕ್ಷಸ ಕುಲದಲ್ಲಿ ಹುಟ್ಟಿದರು ಕೂಡ ಆತನಿಗೆ ಒಳ್ಳೆಯ ಮನಸ್ಸಿತ್ತು. ಆತ ಧರ್ಮದಲ್ಲೇ ನಡೆಯಬೇಕೆಂದು ಯಾವಾಗಲೂ ಅಂದುಕೊಳ್ಳುತ್ತಿದ್ದ. ಈ ವಿಷಯ ತಿಳಿದ ವಿಭೀಷಣ ಈ ವಿಷಯವನ್ನು ಹನುಮಂತನಿಗೆ ಮುಟ್ಟಿಸಿ, ಹನುಮಂತನ ಬಳಿ ವಿಭಿಷಣ ” ಯಾವುದೇ ಕಾರಣಕ್ಕೂ ರಾಮ ಲಕ್ಷ್ಮಣರು ಅಹಿರಾವಣ ಹಾಗು ರಾವಣನ ಕಣ್ಣಿಗೆ ಬೀಳದಂತೆ ಎಚ್ಚರ ವಹಿಸು” ಎಂದು ಹೇಳುತ್ತಾನೆ. ಆಗ ಹನುಮಂತನು ತನ್ನ ಬಾಲದಿಂದಲೇ ದೊಡ್ಡದಾದ ಒಂದು ಕೋಟೆಯನ್ನು ಕಟ್ಟಿ ಅದರೊಳಗೆ ರಾಮ ಲಕ್ಷ್ಮಣರನ್ನು ಸುರಕ್ಷಿತವಾಗಿಡುತ್ತಾನೆ.

Panchamuki Hanumantha

 ಹನುಮಂತ ತನ್ನ ಬಾಲದಲ್ಲಿ ರಾಮ ಲಕ್ಷ್ಮಣರನ್ನ ಬಚ್ಚಿಟ್ಟ ವಿಷಯ ಅಹಿರಾವಣನಿಗೆ ತಿಳಿಯುತ್ತದೆ. ರಾಕ್ಷಸರಿಗೆ ರೂಪ ಬದಲಾಯಿಸುವ ವಿದ್ಯೆ ತಿಳಿದಿತ್ತು. ಬುದ್ಧಿವಂತನಾದ ಪಾತಾಳ ಲೋಕದ ರಾಜ ಅಹಿರಾವಣನು ವಿಭೀಷಣನ ರೂಪ ತಾಳಿ , ಹನುಮಂತನ ಬಳಿ ಹೋಗುತ್ತಾನೆ. ಹನುಮಂತನಿಗೆ ಅದು ಪಾತಾಳ ಲೋಕದ ರಾಜನಾದ ಅಹಿರಾವಣಾ ಅಂತ ಗೊತ್ತೇ ಆಗೋದಿಲ್ಲ , ಅಹಿರಾವಣನು “ ಹನುಮಂತ ಈಗಾಗಲೇ ಯುದ್ಧ ಶುರುವಾಗಲಿದೆ, ನನಗೆ ಯುದ್ಧ ಮಾಡುವುದಕ್ಕೂ ಮುಂಚೆ ರಾಮ ಲಕ್ಷ್ಮಣರ ಆಶೀರ್ವಾದ ಪಡೆದುಕೊಳ್ಳಬೇಕು ಹಾಗಾಗಿ ನನಗೆ ಒಳಗೆ ಹೋಗಲು ಅನುಮತಿ ನೀಡು’’ ಎಂದು ಹನುಮಂತನ ಬಳಿ ಅನುಮತಿ ಕೇಳುತ್ತಾನೆ. ಅಹಿರಾವಣನನ್ನು ವಿಭೀಷಣ ಎಂದು ಅಂದುಕೊಂಡ ಹನುಮಂತನು ಒಳಗೆ ಹೋಗಲು ಅನುಮತಿ ನೀಡುತ್ತಾನೆ. ಹನುಮಂತನ ಬಾಲದ ದೈತ್ಯವಾದ ಕೋಟೆ ಒಳಗೆ ಒಳಹೊಕ್ಕ ಅಹಿರಾವಣನು , ರಾಮ ಲಕ್ಷ್ಮಣರನ್ನ ಅಪಹರಿಸಿ ಪಾತಾಳ ಲೋಕಕ್ಕೆ ಕರೆದುಕೊಂಡು ಹೋಗುತ್ತಾನೆ. ಈ ವಿಷಯ ತಿಳಿದ ಹನುಮಂತನು ಅಹಿರಾವಣನ ಮೇಲೆ ಕ್ರೋದಗೊಂಡು, ಒಂದು ನಿಮಿಷ ತಡ ಮಾಡದೆ ರಾಮ ಲಕ್ಷ್ಮಣರನ್ನ ಆರಿಸಿ ಪಾತಾಳ ಲೋಕಕ್ಕೆ ಹೋಗುತ್ತಾನೆ. 

Panchamuki Hanumantha

ಕೋಪದಲ್ಲಿ ಹನುಮಂತ ಪಾತಾಳ ಲೋಕದ ಒಳಗೆ ಹೋಗುತ್ತಿರುವಾಗ, ಆತನನ್ನ ತಡೆದದ್ದೆ ಪಾತಾಳ ಲೋಕದ ದ್ವಾರಪಾಲಕ ಮಕರ ಧ್ವಜ. ಮಕರದ್ವಜನನ್ನ ನೋಡಿದಾಗ ಹನುಮಂತನ ದಿವ್ಯ ದೃಷ್ಟಿಗೆ ಗೋಚರವಾಗುತ್ತದೆ ಆತ ಬೇರಾರು ಅಲ್ಲ, ನನ್ನ ಬೆವರಿನಿಂದ ಹುಟ್ಟಿದ ನನ್ನ ಸ್ವಂತ ಮಗ ಮಕರದ್ವಜ ಎಂದು ತಿಳಿಯುತ್ತದೆ. ಹನುಮಂತ ಮಕರ ದ್ವಜನ ಬಳಿ “ನಿನ್ನ ರಾಜನಾದ ಅಹಿರಾವಣನು ನನ್ನ ರಾಮ ಲಕ್ಷ್ಮಣರನ್ನ ಅಪಹರಿಸಿದ್ದಾನೆ. ಅವನನ್ನ ಕರೆ ತರಲು ನನಗೆ ದಾರಿ ಬಿಡು ಎಂದು ಹೇಳುತ್ತಾನೆ. ಆಗ ಮಕರ ದ್ವಜನು “ನನ್ನ ಪರಾಕ್ರಮ, ಶಕ್ತಿಯನ್ನು ನೋಡಿ, ನನ್ನ ಮೇಲೆ ನಂಬಿಕೆ ಇಟ್ಟು ನನ್ನ ರಾಜನಾದ ಅಹಿರಾವಣನು ನನಗೆ ದ್ವಾರಪಾಲಕನಾಗಿ ಕೆಲಸ ನೀಡಿದ್ದಾನೆ. ಆ ಕೆಲಸವನ್ನು ನಿಷ್ಠೆಯಿಂದ ಮಾಡುವುದು ನನ್ನ ಕರ್ತವ್ಯ. ನೀವು ಒಳಗೆ ಹೋಗುವುದಾದರೆ ನನ್ನನ್ನ ಸೋಲಿಸಿಯೇ ಒಳಗೆ ಹೋಗಬೇಕು ಎಂದು ಮಕರ ಧ್ವಜ ಹನುಮಂತನಿಗೆ ಹೇಳುತ್ತಾನೆ. 

 

ಹನುಮಂತ ಕೋಪದಲ್ಲಿಯೇ ಸರಿಯೆಂದು ಯುದ್ಧ ಮಾಡಲು ಶುರು ಮಾಡ್ತಾನೆ. ತಂದೆ ಮಗನ ನಡುವೆ ಘೋರ ಯುದ್ಧ ನಡೆಯುತ್ತದೆ. ಆ ಯುದ್ಧದಲ್ಲಿ ಮಕರ ಧ್ವಜ ಸೋಲುತ್ತಾನೆ. ಅವನನ್ನ ಅಲ್ಲೇ ಹತ್ತಿರದಲ್ಲಿದ್ದ ಕಂಬಕ್ಕೆ ಕಟ್ಟಿಹಾಕಿ ಹನುಮಂತ ರಾಮ ಲಕ್ಷ್ಮಣರನ್ನ ಅರಸಿಕೊಂಡು ಪಾತಾಳ ಲೋಕದ ಒಳಗೆ ಹೋಗುತ್ತಾನೆ.  

Panchamuki Hanumantha

 ಪಾತಾಳ ಲೋಕದ ಒಳಗೆ ಹೋಗುತ್ತಿದ್ದಂತೆ ಹನುಮಂತನಿಗೆ ಐದು ದಿಕ್ಕಿನಲ್ಲಿ , ಐದು ದಿವ್ಯ ಜ್ಯೋತಿಗಳು ಉರಿಯುತ್ತಿರುವುದು ಕಾಣಿಸುತ್ತದೆ. ಈ ಜ್ಯೋತಿಯನ್ನ ನೋಡಿದ ಹನುಮಂತನಿಗೆ, “ಇದೇನಪ್ಪಾ ಈ ಜ್ಯೋತಿಗಳು ಇಷ್ಟು ವಿಚಿತ್ರವಾಗಿದೆ’’ ಎಂದು ಅನಿಸುತ್ತದೆ. ನಂತರ ಹನುಮಂತನಿಗೆ ತನ್ನ ದಿವ್ಯ ದೃಷ್ಟಿಯಿಂದ ತಿಳಿಯುತ್ತದೆ ಆ ಐದು ದಿವ್ಯ ಜ್ಯೋತಿಯಲ್ಲೆ ಪಾತಾಳ ಲೋಕದ ರಾಜನಾದ ಅಹಿರಾವಣನ ಪ್ರಾಣ ನಿಂತಿದೆ ಎಂದು. ಅಹಿರಾವಣನನ್ನ ಸಾಯಿಸುವುದು ಅಷ್ಟು ಸುಲಭದ ಮಾತಲ್ಲ. ಒಂದು ತಲೆ ಇರುವ ಯಾವುದೇ ವ್ಯಕ್ತಿಗೂ ಆತನನ್ನ ಸಾಯಿಸಲು ಸಾಧ್ಯವಿಲ್ಲ. ಯಾಕೆಂದರೆ, ಅಹಿರಾವಣನ ಸಾಯಿಸಬೇಕಾದರೆ ಯಾರು ಆ ಎಲ್ಲಾ ದಿವ್ಯ ಜ್ಯೋತಿಗಳನ್ನ ಒಂದೇ ಬಾರಿಗೆ ಬಾಯಿಯಲ್ಲಿ ಉರಿಸಿ ಆರಿಸುತ್ತಾರೋ ಆಗ ಮಾತ್ರ ಅವನನ್ನ ಸಾಯಿಸಲು ಸಾಧ್ಯ ಎಂದು ತಿಳಿಯುತ್ತದೆ. ಅದು ಅಲ್ಲದೆ ಒಂದು ತಲೆ ಇರುವ ಯಾರು ಕೂಡ ಈ ದೀಪಗಳನ್ನ ಆರಿಸಲು ಸಾಧ್ಯವೇ ಇಲ್ಲ. ಯಾಕೆಂದರೆ ಒಂದೊಂದು ದೀಪ ಒಂದೊಂದು ದಿಕ್ಕಿನಲ್ಲಿದೆ.

 

 ಹಾಗಾಗಿ ಹನುಮಂತನು ತನ್ನಿಷ್ಟದ ದೈವವಾದ ಶ್ರೀ ರಾಮನನ್ನು ಮನಸ್ಸಿನಲ್ಲಿಯೆ ನೆನೆಸಿಕೊಂಡು ಐದು ತಲೆ ಇರುವ ಪಂಚಮುಖಿ ಆಂಜನೇಯನ ಅವತಾರವನ್ನ ತಾಳುತ್ತಾನೆ. 

ಈ ಅವತಾರದ ಬಲಭಾಗದಲ್ಲಿ ವರಾಹ ರೂಪ ಹಾಗು ಗರುಡಾವತಾರ, ಮಧ್ಯದಲ್ಲಿರುವುದು ಹನುಮಂತನ ನಿಜ ರೂಪ, ಎಡಭಾಗದಲ್ಲಿ ನರಸಿಂಹ ಅವತಾರ ಹಾಗೂ ಹಯಗ್ರೀವನ ಅವತಾರ ಹೀಗೆ ಈ ಐದು ತಲೆಗಳು ಸೇರಿ ಪಂಚಮುಖಿ ಆಂಜನೇಯ ಅವತಾರದಲ್ಲಿ ಹನುಮಂತ ಕಾಣಿಸಿಕೊಳ್ಳುತ್ತಾರೆ. 

Panchamuki Hanumantha

ಆ ದೀಪಗಳನ್ನು ಹನುಮಂತನು ಪೂರ್ವಕ್ಕೆ ತಿರುಗಿ, ಗರುಡಾವತಾರ ಪಶ್ಚಿಮಕ್ಕೆ ತಿರುಗಿ, ನರಸಿಂಹ ಅವತಾರ ಉತ್ತರಕ್ಕೆ ತಿರುಗಿ, ವರಾಹ ಅವತ್ತಾರ ದಕ್ಷಿಣಕ್ಕೆ ತಿರುಗಿ ಹಾಗು ಹಯಗ್ರೀವ ಅವತ್ತಾರ ಮೇಲಕ್ಕೆ ಮುಖಮಾಡಿ ಆ ಎಲ್ಲಾ ಐದು ದೀಪಗಳನ್ನು ಒಂದೇ ಸಮಯದಲ್ಲಿ ನಂದಿಸುತ್ತಾರೆ. ನಂತರ ಹನುಮಂತ ತನ್ನ ಆಯುಧದಿಂದ ಅಹಿರಾವಣನನ್ನು ಒಂದೇ ವೇಗದ ಹೊಡೆತದಿಂದ ಹೊಡೆದು ಸಾಯಿಸುತ್ತಾನೆ. ಹೀಗೆ ಹನುಮಂತನು ರಾಮ ಲಕ್ಷ್ಮಣರನ್ನು ಅಹಿರಾವಣನಿಂದ ಕಾಪಾಡಿ ಮರಳಿ ಕರೆತರುತ್ತಾನೇ. ಪವಾಡ ಪುರುಷ ಶ್ರೀ ರಾಘವೇಂದ್ರ ಸ್ವಾಮಿ ಕೂಡ ಇದೆ ಪಂಚಮುಖಿ ಹನುಮಂತನ ಆರಾಧಕರಾಗಿದ್ದರು ಅವರು ಪಂಚಮುಖಿ ಹನುಮಂತನ ದೇವಸ್ಥಾನದಲ್ಲೇ ಧ್ಯಾನಕ್ಕೆ ಕುಳಿತುಕೊಳ್ಳುತ್ತಿದ್ದರು ಈಗಲೂ ಕೂಡ ಆ ದೇವಸ್ಥಾನ ಮಂತ್ರಾಲಯದ ಬಳಿಯೇ ಇದೆ. ಪಂಚಮುಖಿ ಆಂಜನೇಯ ನನ್ನ ಯಾರು ಭಕ್ತಿಯಿಂದ ಆರಾಧಿಸುತ್ತಾರೋ ಅವರಿಗೆ ಯಾವುದೇ ಮಾಟ ಮಂತ್ರ ತಾಗುವುದಿಲ್ಲ ಎಂಬ ನಂಬಿಕೆ ಕೂಡ ಇದೆ.