ಬಿಗ್ ಬಾಸ್ ಮಿಡ್ ಡೇ ಎಲಿಮಿನೇಟ್ ಆದ ನಾಲ್ಕು ಕಂಟೆಸ್ಟೆಂಟ್ಗಳು ಇವರೇ..!

          ಈ ಬಾರಿಯ ಬಿಗ್ ಬಾಸ್ (Bigg Boss) ಟ್ವಿಸ್ಟ್ ಮೇಲ್ ಟ್ವಿಸ್ಟು, ಟ್ವಿಸ್ಟ್ ಮೇಲ್ ಟ್ವಿಸ್ಟು ಅನ್ನೋ ಹಾಗೆ ಇದೆ. ಬಿಗ್ ಬಾಸ್ ಶುರುವಾಗ್ತಾ ಇದ್ದ ಹಾಗೆ ಫ್ಲೈಟ್ ಕಾನ್ಸೆಪ್ಟ್ ತಂದು ಒಬ್ಬ ಕಂಟೆಸ್ಟೆಂಟ್ ಅನ್ನ ಮನೆಯ ಒಳಗೆ ಎಂಟ್ರಿ ಕೊಡಲು ಬಿಡದೆ, ಫ್ಲೈಟ್ ನಿಂದಲೇ ಮೊದಲ ವಾರದಲ್ಲೇ ಎಲಿಮಿನೇಷನ್ ಮಾಡಿ ಮನೆಗೆ ಕಳಿಸಿಬಿಡುತ್ತಾರೆ.

         ಎಲಿಮಿನೇಟ್ ಆದವರು ಖ್ಯಾತ ನಟಿ ವಿನಯ ಪ್ರಸಾದ್ ಅವರ ಮಗಳಾದ ಪ್ರಥಮ. ಅಲ್ಲಿಂದಾನೆ ಬಿಗ್ ಬಾಸ್ ಕಂಟೆಸ್ಟೆಂಟ್ ಗಳಿಗೆ ಭಯ ಶುರುವಾಗಿತ್ತು, ಯಾರು ಬೇಕಾದರೂ..! ಹೇಗೆ ಬೇಕಾದರೂ ..!? ಯಾವಾಗ ಬೇಕಾದರೂ…! ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಹೊರಗೆ ಹೋಗಬಹುದು ಅಂತ. ಇದಾದ ಬಳಿಕ ನೆಕ್ಸ್ಟ್ ಫೇಕ್ ಎಲಿಮಿನೇಷನ್ ಗೆ ಗುರಿಯಾದದ್ದೆ ಮಾಡ್ರನ್ ಮಹಾಕವಿ ಮಂಜ ಹಾಗೂ ಕಿರಣ್ ಶಾಸ್ತ್ರಿ. ಮನೆಯಲ್ಲಿ ಇವರಿಬ್ಬರ ಅಬ್ಬರ , ಜಗಳ ಕಿರುಚಾಟ , ಬೇರೆ ಕಂಟೆಸ್ಟೆಂಟ್ಗಳಿಗೆ ಬಾಯಿ ಬಂದಾಗ ಬಯ್ಯೋದು, ಕೆಟ್ಟ ಕೆಟ್ಟ ಪದಗಳನ್ನು ಬಳಸುವುದು, ಇದನ್ನೆಲ್ಲಾ ನೋಡಲಾಗದೆ ಫೇಕ್ ಎಲಿಮಿನೇಷನ್ ಇಟ್ಟಿದ್ದರು. 

Table of Contents

ಫೇಕ್ ಎಲಿಮಿನೇಷನ್ ಮೂಲಕ ಬಿಗ್ ಬಾಸ್ ಮನೆಯಿಂದ ಔಟ್ Bigg Boss

Bigg Boss

        ಫೇಕ್ ಎಲಿಮಿನೇಷನ್ ಮೂಲಕ ಮಾಡ್ರನ್ ಕವಿ ಮಂಜ ಹಾಗೂ ಕಿರಣ್ ಶಾಸ್ತ್ರಿ, ಬಿಗ್ ಬಾಸ್ ಮನೆಯಿಂದ ಹೊರಗೆ ಹೋದಾಗ ಒಂದಷ್ಟು ಕಂಟೆಸ್ಟೆಂಟ್ ಗಳಿಗೆ ಸಿಕ್ಕಾಪಟ್ಟೆ ಖುಷಿಯಾಗಿತ್ತು. ಅಷ್ಟೇ ಅಲ್ಲದೆ ಸ್ವಲ್ಪ ಜನಕ್ಕೆ ಬೇಸರ ಕೂಡ ತಂದಿತ್ತು. ಆದರೆ ಅವರಿಬ್ಬರನ್ನ ಕಣ್ಣು ಪಟ್ಟಿ ಕಟ್ಟಿಸಿಕೊಂಡು ಬಿಗ್ ಬಾಸ್ ಮನೆಯ ಸೀಕ್ರೆಟ್ ರೂಮ್ ಗೆ ಕರೆಸಿಕೊಂಡು ಬಂದು, ಇವರ ಬಳಿ ಬಿಗ್ ಬಾಸ್ ” ಈ ವಾರ ಯಾವುದೇ ಎಲಿಮಿನೇಷನ್ ಇರಲಿಲ್ಲ. ಫೇಕ್ ಎಲಿಮಿನೇಷನ್ ಮಾಡಿ ನಿಮ್ಮನ್ನ ಇಲ್ಲಿಗೆ ಕರೆಸಿಕೊಂಡಿದ್ದೇವೆ. ನಿಮಗೆ ಇನ್ನೂ ಕೂಡ ಈ ಮನೆಯಲ್ಲಿ ಆಟ ಆಡುವ ಅವಕಾಶ ಇದೆ. ನಿಮ್ಮಿಬ್ಬರಿಗೆ ಸ್ವಲ್ಪ ಬುದ್ಧಿ ಹೇಳುವುದಕ್ಕಾಗಿ ಈ ರೀತಿ ಮಾಡಲಾಗಿದೆ. 

           ಲೈಫಲ್ಲಿ ತಪ್ಪು ಎಲ್ಲರೂ ತಪ್ಪು ಮಾಡ್ತಾರೆ ಅದು ಸಹಜ, ಆದರೆ ತಪ್ಪು ಮಾಡಿದ ಎಲ್ಲರಿಗೂ ಕೂಡ ಎರಡನೇ ಅವಕಾಶ ಸಿಗೋದಿಲ್ಲ, ಅದು ಬಿಗ್ ಬಾಸ್ ಮನೆಯಲ್ಲಿ ಅಂತೂ ಎರಡನೇ ಅವಕಾಶ ಸಿಗೋದು ತುಂಬಾ ಕಷ್ಟ. ಆದರೆ ಇಂದು ನಿಮ್ಮಿಬ್ಬರಿಗೆ ಈ ಬಿಗ್ ಬಾಸ್ ಮನೆಯಲ್ಲಿ ಎರಡನೇ ಅವಕಾಶ ಸಿಕ್ಕಿದೆ. ಇನ್ನಾದರೂ ನೀವು ನಿಮ್ಮ ತಪ್ಪುಗಳನ್ನ ತಿದ್ದುಕೊಂಡು, ಚೆನ್ನಾಗಿ ಆಟ ಆಡಿ ಅಂತ ಹೇಳಿ ಬಿಗ್ ಬಾಸ್ ಸೀಕ್ರೆಟ್ ರೂಮ್ ನಿಂದ ಅವರಿಬ್ಬರನ್ನ ಮತ್ತೆ ಬಿಗ್ ಬಾಸ್ ಮನೆಯೊಳಗೆ ಕಳಿಸಿಕೊಡುತ್ತಾರೆ. 

ಬಿಗ್ ಬಾಸ್ ಬಳಿ ತಪ್ಪನ್ನು ತಿದ್ದು ಕೊಳ್ಳುತ್ತೇವೆ ಎಂದು ಹೇಳಿದ ಮಂಜ ಹಾಗೂ ಶಾಸ್ತ್ರಿ Bigg Boss

Bigg Boss

          ಮಾಡ್ರನ್ ಮಹಾಕವಿ ಮಂಜ ಹಾಗೂ ಕಿರಣ್ ಶಾಸ್ತ್ರಿ ಅವರು ಇನ್ನು ಮೇಲೆ ಈ ತಪ್ಪನ್ನ ಮಾಡೋಲ್ಲ. ನಮಗೆ ಎರಡನೇ ಅವಕಾಶ ಕೊಟ್ಟದ್ದಕ್ಕಾಗಿ ಧನ್ಯವಾದಗಳು. ನಮ್ಮ ತಪ್ಪನ್ನು ತಿದ್ದುಕೊಂಡು ಇನ್ನು ಮೇಲೆ ಎಲ್ಲರಿಗೂ ಗೌರವ ಕೊಟ್ಟು ಆಟ ಆಡ್ತೀವಿ ಅಂತ ಹೇಳಿ, ಇಬ್ಬರು ಬಿಗ್ ಬಾಸ್ ಮನೆಯೊಳಗೆ ಮತ್ತೆ ಎಂಟ್ರಿ ಕೊಡ್ತಾರೆ. ಆದರೆ ಮಾಡ್ರನ್ ಮಹಾಕವಿ ಮಂಜನ ದುರಾದೃಷ್ಟವೋ ಏನೋ, ಮತ್ತೆ ಮನೆ ಒಳಗೆ ಎಂಟ್ರಿ ಕೊಟ್ಟಾಗ ಇನ್ನು ಮೇಲೆ ತಪ್ಪು ಮಾಡಬಾರದು ಎಂದು ಎಲ್ಲರ ಬಳಿ ಚೆನ್ನಾಗೆ ಮಾತಾಡ್ಕೊಂಡು ಇದ್ದ. ಅಷ್ಟೇ ಅಲ್ಲದೆ ಇನ್ನು ಮೇಲಿಂದ ನಾನು ನನ್ನ ಕಂಟ್ರೋಲ್ ನಲ್ಲಿ ಇಟ್ಟುಕೊಂಡು ಆಡಬೇಕಂತನೆ ಬಂದಿದ್ದ. ಆದರೆ ಆ ದಿನವೇ ಎಲಿಮಿನೇಷನ್ ಆಗಲು ನಾಮಿನೇಷನ್ ಪ್ರಕ್ರಿಯೆ ನಡೆಯುತ್ತದೆ. 

ಮತ್ತೆ ರೌದ್ರಾವತಾರ ಎತ್ತಿದ ಮಾಡ್ರನ್ ಕವಿ ಮಂಜ Bigg Boss

        ಎಲಿಮಿನೇಷನ್ ಪ್ರಕ್ರಿಯೆ ಶುರುವಾದದ್ದೆ ಆದದ್ದು, ಬಿಗ್ ಬಾಸ್ ಮನೆಯಲ್ಲಿದ್ದಂತಹ ಹೆಚ್ಚಿನ ಕಂಟೆಸ್ಟೆಂಟ್ಗಳು ಮತ್ತೆ ಮಾಡ್ರನ್ ಕವಿ ಮಂಜನ ಹೆಸರನ್ನೇ ತೆಗೆದುಕೊಂಡು ಅದೇ ಹಳೆ ಕಾರಣ ಕೊಟ್ಟು ಎಲಿಮಿನೇಷನ್ ಗೆ ಸೆಲೆಕ್ಟ್ ಮಾಡುತ್ತಾರೆ. ಮಾಡ್ರನ್ ಕವಿ ಮಂಜುನಾಥ್ ನ ಪಿತ್ತ ನೆತ್ತಿಗೇರುತ್ತೆ . ನನಗೆ ಮತ್ತೊಂದು ಅವಕಾಶ ಬೇಕು , ನನ್ನನ್ನು ನಾನು ಸರಿಪಡಿಸಿಕೊಳ್ಳಬೇಕು ಅಂತ ಅಂದುಕೊಂಡಿದ್ದೇನೆ, ಅಷ್ಟೇ ಅಲ್ಲದೆ ತಿದ್ದುಕೊಳ್ಳಬೇಕೆಂದು ಇಲ್ಲಿಗೆ ಬಂದರೆ ಮತ್ತೆ ನೀವೆಲ್ಲರೂ ಸೇರಿ ನನ್ನನ್ನು ಮತ್ತೆ ಅದೇ ಹಳೆ ವಿಷಯಕ್ಕೆ ನಾಮಿನೇಟ್ ಮಾಡ್ತಾ ಇದ್ದೀರಾ. ನಾನು ಸರಿಯಾಗುವುದಾದರೂ ಹೇಗೆ ನೀವು ನನಗೆ ಅವಕಾಶವೇ ನೀವು ಕೊಡದಿದ್ದರೆ ಎಂದು ಸಿಕ್ಕಾಪಟ್ಟೆ ಮನೆ ಮಂದಿಯ ಮೇಲೆ ಕೂಗಡ್ತಾನೆ. 

      ಅಲ್ಲಿಂದ ಮಾಡ್ರನ್ ಮಹಾ ಕವಿ ಮಂಜ ನೇರವಾಗಿ ಅತಿ ಹೆಚ್ಚು ನಾಮಿನೇಷನ್ ಗೆ ಸೂಚಿಸಲ್ಪಟ್ಟ ಕಂಟೆಸ್ಟಂಟ್ ಎಂದು ನಾಮಿನೇಷನ್ನಿಂದ ಪಾರಾಗುವ ಆಟದಿಂದ ಹೊರಗೆ ಉಳಿಯುತ್ತಾನೆ. ಮಾಡ್ರನ್ ಕವಿ ಮಂಜ ನನ್ನ ಬಿಗ್ ಬಾಸ್ ಆಟಗಳನ್ನು ನಡೆಸುವ ಉಸ್ತುವಾರಿ ಆಗಿ ಆಯ್ಕೆ ಮಾಡಿ ಅಲ್ಲಿ ಉಸ್ತುವಾರಿಯನ್ನಾಗಿ ವಹಿಸುತ್ತಾರೆ.

 

ಗುಲಾಬಿ ಕೊಡುವ ಟಾಸ್ಕ್ ನಿಂದ ಹೊರಗುಳಿದ ನಾಲ್ವರು..! Bigg Boss

Bigg Boss

           ಬಿಗ್ ಬಾಸ್ ಮನೆಯಲ್ಲಿರುವ ಹೆಣ್ಣು ಮಕ್ಕಳಿಗೆ ಒಂದು ಅವಕಾಶವನ್ನು ಕೊಡುತ್ತಾರೆ. ಅದೇನೆಂದರೆ ತಮ್ಮ ಜೊತೆ ಆಡಲು ಸೂಕ್ತವಾದ ಒಬ್ಬ ಪುರುಷ ಸದಸ್ಯನ ಆಯ್ಕೆ ಮಾಡುವ ಪ್ರಕ್ರಿಯೆ. ಈ ಪ್ರಕ್ರಿಯೆಯಲ್ಲಿ ಪುರುಷರ ವಿಭಾಗದಲ್ಲಿ ಯಶಸ್, ಧನುಷ್, ಲಿಖಿತ್, ಗಗನ್ ಚಿನ್ನಪ್ಪ , ತಾಂಡವ್ ರಾಮ್, ಅವಿನಾಶ್ ಹಾಗೂ ಜಗ್ಗಿ ಸ್ಪರ್ಧೆಯಲ್ಲಿದ್ದರೂ. 

             ಇತ್ತ ಕಡೆ ಮಹಿಳಾ ಸದಸ್ಯರ ವಿಭಾಗದಲ್ಲಿ ಸೌಂದರ್ಯ ಶೆಟ್ಟಿ, ಆಶಿಯ, ವೈಷ್ಣವಿ ಮಾತ್ರ ಆಟ ಆಡಬಹುದಿತ್ತು. ಈ ಮೂರು ಜನ ಮಹಿಳಾ ಸದಸ್ಯರು ಮೂರು ಪುರುಷರನ್ನ ಆಯ್ಕೆ ಮಾಡಬೇಕಿತ್ತು, ಹಾಗೂ ಮೂರು ಪುರುಷರನ್ನ ಈ ಆಟದಿಂದ ಹೊರಗಿಡುವ ಅವಕಾಶ ಕೂಡ ಇವರಿಗೆ ಇದ್ದಿತು. ಮೊದಲಿಗೆ ಬಂದ ಸೌಂದರ್ಯ ಯಶಸ್ ಅನ್ನು ಆಯ್ಕೆ ಮಾಡ್ತಾಳೆ ಹಾಗೂ ತಾಂಡವ ರಾಮನ್ನು ನೀವು ತುಂಬಾ ಸ್ಟ್ರಾಂಗ್ ಆಗಿದ್ದೀರಾ, ಹಾಗಾಗಿ ಉಳಿದವರಿಗೆ ಆಡಲು ಅವಕಾಶ ಬೇಕು. ಅದಕ್ಕಾಗಿ ನಾನು ನಿಮ್ಮನ್ನು ಈ ಆಟದಿಂದ ಹೊರಗಿಡಲು ಇಚ್ಛೆ ಪಡುತ್ತೇನೆ ಅಂತ ತಾಂಡವ್ ಬಳಿ ಇದ್ದ ಗುಲಾಬಿ ಹೂವನ್ನು ಕತ್ತರಿಸಿ ಆಟದಿಂದ ಹೊರಗಿಡುತ್ತಾಳೆ. ನಂತರ ಬಂದ ವೈಷ್ಣವಿ, ಗಗನ್ ಚಿನ್ನಪ್ಪ ನನ್ನು ಆಯ್ಕೆಮಾಡುತ್ತಾಳೆ ಹಾಗೂ ಲಿಖಿತ್ ನನ್ನು ಈ ಆಟದಿಂದ ಗುಲಾಬಿ ಕತ್ತರಿಸುವ ಮೂಲಕ ಹೊರಗಿಡುತ್ತಾಳೆ.

  Bigg Boss

         ನಂತರ ಆಶಿಯ ಧನುಷ್ ನನ್ನು ಆಯ್ಕೆ ಮಾಡಿ, ಧನುಷ್ ತುಂಬಾ ಸ್ಟ್ರಾಂಗ್ ಆದ ಕಂಟೆಸ್ಟೆಂಟ್, ಈ ಹಿಂದೆ ಕೂಡ ಅವರು ನನಗೆ ತುಂಬಾ ಸಪೋರ್ಟ್ ಮಾಡಿದ್ದಾರೆ. ಹಾಗಾಗಿ ನಾನು ಅವರನ್ನ ನನ್ನ ಜೊತೆ ಆಟ ಆಡಲು ಆಯ್ಕೆ ಮಾಡುತ್ತೇನೆ. ನಾನು ಈ ಆಟದಿಂದ ಹೊರಗಿಡಲು ಇಚ್ಚಿಸುವ ಸ್ಪರ್ಧೆ ಎಂದರೆ ಅದು ಜಗ್ಗಿ. ಇವರಿಗೆ ಆಟ ಆಷ್ಟು ಅರ್ಥ ಆಗಲ್ಲ ಅನ್ನೋ ಒಂದು ಕಾರಣ ಅಷ್ಟೇ, ಬೇರೇನೂ ಇಲ್ಲ ಎಂದು ಅವರನ್ನು ಆಟದಿಂದ ಹೊರಗಿಡುತ್ತಾರೆ. ಯಾರಿಂದಲೂ ಆಯ್ಕೆಯಾಗದೆ ಉಳಿದುಕೊಂಡ ಅಭ್ಯರ್ಥಿ ಎಂದರೆ ಅದು ಅವಿನಾಶ್. ಹಾಗಾಗಿ ಬಿಗ್ ಬಾಸ್ ಅವರು ಕ್ಯಾಪ್ಟನ್ ಆದಂತಹ ಸಂಗೀತ ಅವರಿಗೆ ಒಂದು ಅವಕಾಶವನ್ನು ಕೊಡುತ್ತಾರೆ. ಈಗಾಗಲೇ ಮಹಿಳಾ ಸದಸ್ಯರು ಆಯ್ಕೆ ಮಾಡಿದಂತಹ ಪುರುಷ ಸ್ಪರ್ಧಿಗಳ ಪೈಕಿ ಯಾರಾದರೂ ಒಬ್ಬ ಪುರುಷ ಸ್ಪರ್ಧಿ ನಿಮಗೆ ಇಲ್ಲಿ ಆಟ ಆಡಲು ಯೋಗ್ಯವಿಲ್ಲ, ಅವಿನಾಶ್ ನನ್ನು ಅವರ ಜೊತೆ ಸೇರಿಸಬಹುದು ಅಂತ ನಿಮಗೆ ಅನಿಸಿದರೆ ನೀವು ಎಕ್ಸ್ಚೇಂಜ್ ಮಾಡಬಹುದು. ಇಲ್ಲದಿದ್ದರೆ ಅವಿನಾಶ್ ಅವರ ಗುಲಾಬಿ ಹೂವನ್ನು ಕತ್ತರಿಸುವ ಮೂಲಕ ಆಟದಿಂದ ಹೊರಗಿಡಬಹುದು ಅನ್ನುವ ಅವಕಾಶವನ್ನ ಕ್ಯಾಪ್ಟನ್ ಸಂಗೀತ ಅವರಿಗೆ ಕೊಡುತ್ತಾರೆ. ಆಗ ಕ್ಯಾಪ್ಟನ್ ಸಂಗೀತವರು ನಾನು ಯಾರೊಂದಿಗೂ ಅವಿನಾಶ್ ಅವರನ್ನ ಎಕ್ಸ್ಚೇಂಜ್ ಮಾಡಲು ಬಯಸುವುದಿಲ್ಲ ಎಂದು, ಅವಿನಾಶ್ ಅವರ ಗುಲಾಬಿ ಹೂವನ್ನ ಕತ್ತರಿಸುವ ಮೂಲಕ ಆಟದಿಂದ ಹೊರಗಿಡುತ್ತಾರೆ. 

ಮೊಟ್ಟೆ ರಕ್ಷಿಸುವ ಸ್ಪರ್ಧೆಯಲ್ಲಿ ಗೆದ್ದ ಆಶಿಯ ಧನುಷ್ Bigg Boss

Bigg Boss

     ಆಟಕ್ಕೆ ಆಯ್ಕೆಯಾದಂತಹ ಸೌಂದರ್ಯ – ಯಶಸ್ ಜೋಡಿ, ವೈಷ್ಣವಿ – ಗಗನ್ ಜೋಡಿ ಹಾಗೂ ಆಶೀಯ-ಧನುಷ್ ಜೋಡಿಗೆ ಮೊಟ್ಟೆ ರಕ್ಷಿಸುವ ಟಾಸ್ಕ್ ಒಂದನ್ನ ನೀಡುತ್ತಾರೆ. ಈ ಟಾಸ್ಕ್ ಮೂಲಕ ಟ್ರಯಂಗಲ್ ಮಧ್ಯಭಾಗದಲ್ಲಿ ಒಂದು ಮೊಟ್ಟೆಯನ್ನು ಇಟ್ಟಿರುತ್ತಾರೆ . ಅದನ್ನ ಮೊದಲಿಗೆ ಮಹಿಳಾ ಸದಸ್ಯರು ಫೈಟಿಂಗ್ ಮಾಡುವ ಮೂಲಕ ತಮ್ಮ ಗೂಡಿನಲ್ಲಿ ಇಡಬೇಕು. ಇದೇ ರೀತಿ ಪುರುಷ ಸದಸ್ಯರು ಮಾಡಿ ಮೊಟ್ಟೆಯನ್ನು ತಮ್ಮ ಗೂಡಿನಲ್ಲಿ ಇಡಬೇಕಾದಂತಹ ಟಾಸ್ಕ್ ಇರುತ್ತೆ. ಇದರಲ್ಲಿ ಧನುಷ ಹಾಗೂ ಆಶಿಯ ಗೆಲ್ಲುತ್ತಾರೆ.

ಶಾಕಿಂಗ್ ಮಿಡ್ ಡೇ ಎಲಿಮಿನೇಷನ್ ಪ್ರೊಮೋ Bigg Boss
         ಈಗಾಗಲೇ ಬಿಟ್ಟಿರುವ ಪ್ರೊಮೋ ಪ್ರಕಾರ ಈ ವಾರ ಮಿಡ್ ಡೇ ಎಲಿಮಿನೇಷನ್ ಮೂಲಕ ಮನೆಯಿಂದ ಹೊರಗೆ ಹೋಗಲು ಆಯ್ಕೆಯಾಗಿರುವುದು ನಾಲ್ಕು ಜನ ಪುರುಷ ಸ್ಪರ್ಧಿಗಳು ಹಾಗೂ ಒಬ್ಬಳು ಮಹಿಳಾ ಸ್ಪರ್ಧಿ. ಅವರು ಬೇರಾರು ಅಲ್ಲ ಪ್ರಮೋದಲ್ಲಿ ನೋಡಿದ ಹಾಗೆ ಪುರುಷ ಸ್ಪರ್ಧಿಗಳ ಪೈಕಿ ಲಿಖಿತ್, ಧನುಷ್ ,ತಾಂಡವ್ , ಜಗ್ಗಿಯನ್ನ ತೋರಿಸಲಾಗಿದೆ. ಹಾಗೂ ಮಹಿಳಾ ಸ್ಪರ್ಧಿಯ ಪೈಕಿ ಸೌಂದರ್ಯವರನ್ನು ತೋರಿಸಲಾಗಿದೆ. ಹಾಗಾದ್ರೆ ಈ ನಾಲ್ಕು ಜನರಲ್ಲಿ ಒಬ್ಬ ಸ್ಪರ್ಧಿ ಮಿಡ್ ಡೇ ಎಲಿಮಿನೇಷನ್ ಮೂಲಕ ಮನೆಯಿಂದ ಹೊರಗೆ ಹೋಗ್ತಾರೆ. ಯಾರು ಹೊರಗೆ ಹೋಗ್ತಾರೆ ಅನ್ನುವುದೇ ಈಗ ಬಿಗ್ ಬಾಸ್ ಅಭಿಮಾನಿಗಳಿಗೆ ತಲೆಕೆಡಿಸಿಕೊಳ್ಳುವಂತೆ ಮಾಡಿದೆ. ಯಾಕೆಂದರೆ ಈ ನಾಲ್ಕು ಜನರು ಕೂಡ ಬಿಗ್ ಬಾಸ್ ಮನೆಯಲ್ಲಿ ಸ್ಟ್ರಾಂಗ್ ಕಂಟೆಸ್ಟೆಂಟ್ ಗಳು. ಅವರದೇ ಆದ ಫ್ಯಾನ್ ಬೇಸ್ ಹೊಂದಿದ್ದಾರೆ. 

Leave a Comment