ದರ್ಶನ್ (Darshan) ಹಾಗೂ ದರ್ಶನ್ ಪ್ರಿಯತಮೆ ಪವಿತ್ರ ಗೌಡಳ ಇನ್ನೊಂದು ವಿಡಿಯೋ ವೈರಲ್. ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿರುವ ಒಂದು ವಿಡಿಯೋ ಅಂದರೆ ಅದು ದರ್ಶನ್ ಹಾಗೂ ಪವಿತ್ರ ಗೌಡ ಅವರು ಪೂಜೆ ಒಂದರಲ್ಲಿ ಕುಳಿತುಕೊಂಡು ಹಾರ ಬದಲಾಯಿಸಿಕೊಳ್ಳುತ್ತಾ ಇರುವಂತಹ ಒಂದು ವಿಡಿಯೋ. ಈ ವಿಡಿಯೋ ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಾ ಇದೆ. ಯಾಕಂತ ಅಂದ್ರೆ ಈ ವಿಡಿಯೋ ನಿಜಾನಾ ಅಥವಾ ಫೇಕ್ ವಿಡಿಯೋನಾ ಅಂತ ಸಿಕ್ಕಾಪಟ್ಟೆ ಕನ್ಫ್ಯೂಷನ್ ಕ್ರಿಯೇಟ್ ಮಾಡಿದೆ. ಆ ವಿಡಿಯೋ ನಿಜಾನೇ ಆಗಿರಲಿ ಅಥವಾ ಫೇಕ್ ಅಂದರೆ ಆರ್ಟಿಫಿಶಿಯಲ್ ಇಂಟಲಿಜೆನ್ಸಿ (Ai) ಆಗಿರಲಿ ಸಮರ್ಥಿಸಿಕೊಳ್ಳುವವರು ತಿಳಿದುಕೊಳ್ಳಬೇಕಾದಂತಹ ವಿಷಯ ಬೇರೆನೇ ಇದೆ..! ಅದೇನಂತ ತಿಳಿಬೇಕಾದ್ರೆ ಕೊನೆವರೆಗೂ ಓದಿ.
ದರ್ಶನ್ ಪವಿತ್ರ ಗೌಡ ವೈರಲ್ ವಿಡಿಯೋದಲ್ಲಿ ಅಂತದೇನಿದೆ..! Darshan
ಸಿಕ್ಕಾಪಟ್ಟೆ ಸೆನ್ಸೇಷನಲ್ ಕ್ರಿಯೇಟ್ ಮಾಡಿದಂತಹ ದರ್ಶನ್ ಹಾಗೂ ಪವಿತ್ರ ಗೌಡ ಒಟ್ಟಿಗೆ ಇರುವ ವಿಡಿಯೋದಲ್ಲಿ ಏನಿದೆ ಅಂತ ಅಂದ್ರೆ. ಈ ವಿಡಿಯೋ ಪವಿತ್ರ ಗೌಡ ಅವರ ಮನೆ ಗ್ರಹಪ್ರವೇಶದ ವಿಡಿಯೋ ಎಂದು ಹೇಳಲಾಗುತ್ತಿದೆ. ಈ ವಿಡಿಯೋದಲ್ಲಿ ದರ್ಶನ್ ಹಾಗೂ ಪವಿತ್ರ ಗೌಡ ಇಬ್ಬರು ಒಟ್ಟಿಗೆ ಕುಳಿತುಕೊಂಡು ಪೂಜೆ ಮಾಡ್ತಾ ಇದ್ದಾರೆ. ಅಷ್ಟೇ ಅಲ್ಲದೆ ಇಬ್ಬರು ಕೂಡ ಹಾರವನ್ನು ಬದಲಾಯಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಪವಿತ್ರ ಗೌಡ ಅವರ ಮಗಳು ಕೂಡ ಈ ವಿಡಿಯೋದಲ್ಲಿ ಕುಳಿತುಕೊಂಡಿದ್ದಾರೆ. ಈ ವಿಡಿಯೋ ಚಿತ್ರೀಕರಿಸುವ ಸಮಯದಲ್ಲಿ ಪವಿತ್ರ ಗೌಡ ಅವರ ಮಗಳು ತುಂಬಾ ಚಿಕ್ಕ ಹುಡುಗಿ ಎಂದು ತಿಳಿಯುತ್ತಿದೆ. ಹಾಗಾಗಿ ಇದು ತುಂಬಾ ವರ್ಷದ ಹಿಂದಿನ ವಿಡಿಯೋ ಎಂದು ನೋಡಿದಾಗ ತಿಳಿಯುತ್ತೆ. ಅಷ್ಟೇ ಅಲ್ಲದೆ ತುಂಬಾ ಕುತೂಹಲಕಾರಿ ಮೂಡಿಸಿದಂತಹ ಸಂಗತಿಯೇನೆಂದರೆ ಈ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ ದರ್ಶನ್ ಅವರ ತಾಯಿ ಮೀನಾ ತೂಗುದೀಪ್. ಎಲ್ಲರಿಗೂ ಸಿಕ್ಕಾಪಟ್ಟೆ ಶಾಕ್ ತಂದುಕೊಟ್ಟದ್ದೇ ಈ ವಿಡಿಯೋದಲ್ಲಿ ಕಾಣಿಸಿಕೊಂಡಿರುವ ದರ್ಶನ್ ತಾಯಿ, ಮೀನಾ ತೂಗುದೀಪ್..!
ಪವಿತ್ರ ಗೌಡ ಮನೆ ಗ್ರಹಪ್ರವೇಶ ಪೂಜೆಯಲ್ಲಿ ದರ್ಶನ್ ತಾಯಿ…! Darshan

ದರ್ಶನ್ ಹಾಗೂ ಪವಿತ್ರ ಗೌಡ ಪೂಜೆ ಮಾಡುತ್ತಾ ಹಾರ ಬದಲಾಯಿಸುವ ಈ ವಿಡಿಯೋದಲ್ಲಿ ಎಲ್ಲರಿಗೂ ಆಶ್ಚರ್ಯ ಮೂಡಿಸಿದ್ದೆ ದರ್ಶನ್ ತಾಯಿ ಆ ವಿಡಿಯೋದಲ್ಲಿ ಇರುವುದು. ಪವಿತ್ರ ಗೌಡ ಹಾಗೂ ದರ್ಶನ್ ಅಕ್ಕ ಪಕ್ಕದಲ್ಲಿ ಕುಳಿತುಕೊಂಡು ಪೂಜೆ ಮಾಡ್ತಾ ಇರುತ್ತಾರೆ. ಅವರ ಹಿಂದೆ ದರ್ಶನ್ ಅವರ ತಾಯಿ ಮೀನಾ ತೂಗುದೀಪ್ ಕುಳಿತುಕೊಂಡಿದ್ದಾರೆ. ಈ ವಿಡಿಯೋದಲ್ಲಿ ದರ್ಶನವರ ತಾಯಿ ಮೀನಾ ತೂಗುದೀಪ್ ನೀಲಿ ಸೀರೆ ಉಟ್ಟಿದ್ದಾರೆ. ಅಷ್ಟೇ ಅಲ್ಲದೆ ಅವರು ಈ ವಿಡಿಯೋದಲ್ಲಿ ತನ್ನ ಮಗನಾದ ದರ್ಶನ್ ಹಾಗೂ ಪವಿತ್ರ ಗೌಡ ಪೂಜೆ ಮಾಡುತ್ತಿರುವುದನ್ನ ನೋಡುತ್ತಾ ಇದ್ದಾರೆ. ಈ ವಿಡಿಯೋದಲ್ಲಿ ಅವರ ಮುಖದ ಭಾವನೆಯನ್ನು ಗಮನಿಸಿದರೆ. ಅವರು ಬೇಜಾರಿನಲ್ಲಾಗಲಿ, ಕೋಪದಲ್ಲಾಗಲಿ, ತುಂಬಾ ಸಂತೋಷದಿಂದಾಗಲಿ ಅಥವಾ ಯಾರದ್ದೋ ಒತ್ತಾಯಪೂರ್ವಕವಾಗಿ ಕುಳಿತುಕೊಂಡಿರುವಂತೆ ಕಾಣಿಸುತ್ತಿಲ್ಲ, ಅಂದರೆ ಸಹಜವಾಗಿದ್ದಾರೆ ಇದೇನು ದೊಡ್ಡ ವಿಷಯ ಅಲ್ಲ, ತನ್ನ ಮಗ ಬೇರೆಯವರೊಂದಿಗೆ ಪೂಜೆ ಮಾಡ್ತಾ ಇದ್ದಾನೆ ಅನ್ನೋ ರೀತಿ ಯಾವುದೇ ಭಾವನೆ ಅವರ ಮುಖದಲ್ಲಿ ಕಾಣ್ತಾ ಇಲ್ಲ. ಒಂದು ರೀತಿಯಲ್ಲಿ ಅವರ ಮುಖದ ಭಾವನೆ ಹೇಗಿದೆ ಅಂತ ಅಂದ್ರೆ ಮಗ ಸೊಸೆ ಇಬ್ಬರು ಕುಳಿತುಕೊಂಡು ಪೂಜೆ ಮಾಡುವುದನ್ನ ಅತ್ತೆ ಕುಳಿತುಕೊಂಡು ನೋಡ್ತಾ ಇರೋ ಹಾಗೆ ಅವರ ಮುಖದ ಭಾವನೆ ಇದೆ. ಈ ವಿಡಿಯೋ ಫೇಕ್ ಅಂತ ಅನಿಸಲು ಮುಖ್ಯವಾದ ಕಾರಣಗಳಲ್ಲಿ ಇದು ಕೂಡ ಒಂದು. ಆದರೆ ಕೆಲವೊಂದಷ್ಟು ಜನರು ದರ್ಶನ್ ಹಾಗೂ ಪವಿತ್ರ ಗೌಡ ಅವರ ಈ ಅಕ್ರಮ ಸಂಬಂಧದ ಬಗ್ಗೆ ದರ್ಶನ್ ತಾಯಿ, ಮೀನಾ ತೂಗುದೀಪ ಅವರಿಗೆ ಮೊದಲೇ ಗೊತ್ತಿತ್ತು. ಅವರು ಇವರಿಬ್ಬರ ಸಂಬಂಧವನ್ನು ಒಪ್ಪಿಕೊಂಡಿದ್ದರು ಅನ್ನುವಂತಹ ಪ್ರತಿಕ್ರಿಯೆ ಕೂಡ ಬಂದಿದೆ.
ಇದೊಂದು Ai ನಿರ್ಮಿತ ವಿಡಿಯೋ ಅನ್ನುವ ಒಂದಷ್ಟು ಮಂದಿ..! Darshan

ಒಂದಷ್ಟು ದರ್ಶನ್ ಅಭಿಮಾನಿಗಳು ಖಡಾ ಖಂಡಿತವಾಗಿ ಹೇಳ್ತಾ ಇದ್ದಾರೆ ಇದೊಂದು ಎಐ ಅಂದರೆ ಆರ್ಟಿಫಿಶಿಯಲ್ ಇಂಟಲಿಜೆನ್ಸಿ ಇಂದ ನಿರ್ಮಿತವಾದ ವಿಡಿಯೋ, ಇದು ಫೇಕ್ ವಿಡಿಯೋ ಅಂತ. ಈ ವಿಡಿಯೋವನ್ನು ಅಪ್ಲೋಡ್ ಮಾಡಿದಂತಹ ಕೆಲವೊಂದು ಪೇಜ್ ಗಳಿಗೆ ಕೂಡ ಸಿಕ್ಕಾಪಟ್ಟೆ ಕೆಟ್ಟದಾಗಿ ಕಮೆಂಟ್ ಮಾಡಿ ಈ ವಿಡಿಯೋ ಫೇಕ್ , ವಿಡಿಯೋದಲ್ಲಿರುವುದೆಲ್ಲವೂ ಶುದ್ಧ ಸುಳ್ಳು. ನಮ್ಮ ಡಿ ಬಾಸ್ ನ ಹೆಸರು ಹಾಳು ಮಾಡಲೆಂದೆ ಯಾರೋ ಕಿಡಿಗೇಡಿಗಳು ಈ ವಿಡಿಯೋವನ್ನು ಕ್ರಿಯೇಟ್ ಮಾಡಿ, ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ಆ ವಿಡಿಯೋದಲ್ಲಿರುವವರ ಚಲನ ವಲನ ಹಾಗೂ ಮುಖದ ಭಾವನೆಗಳನ್ನು ನೋಡಿದರೆ ಸ್ವಲ್ಪ ಡ್ರಾಮಾಟಿಕ್ ಅಂದರೆ ನಾಟಕೀಯವಾಗಿ ಇದೆ. ಅಂದರೆ ಆರ್ಟಿಫಿಶಿಯಲ್ ಇಂಟಲಿಜೆನ್ಸಿ ಮೂಲಕ ವಿಡಿಯೋವನ್ನು ಸೃಷ್ಟಿಸುವಾಗ ತುಂಬಾ ಯಾಂತ್ರಿಕವಾಗಿ ಚಲನ ವಲನಗಳು ಇರುತ್ತದೆ. ಇನ್ನು ಹೇಳಬೇಕಾದರೆ ಸ್ವಲ್ಪ ರೋಬೋಟಿಕ್ ಆಗಿ ಇರುತ್ತದೆ. ಅಷ್ಟೇ ಅಲ್ಲದೆ ಇದು ಆರ್ಟಿಫಿಶಿಯಲ್ ಇಂಟಲಿಜೆನ್ಸಿ ಜನರೇಟೆಡ್ ವಿಡಿಯೋ ಅಂತ ಡೌಟ್ ಬಂದದ್ದೇ ಅಲ್ಲಿ ದರ್ಶನ್ ತಾಯಿ ಕಂಡುಬಂದಿದ್ದು. ಹೌದು ಪವಿತ್ರ ಗೌಡ ಗೃಹಪ್ರವೇಶದಲ್ಲಿ ಈ ಪೂಜೆ ಮಾಡಲಾಯಿತು, ಈ ವೇಳೆ ದರ್ಶನ್, ಪವಿತ್ರ ಗೌಡ ಹಾಗೂ ಪವಿತ್ರ ಗೌಡ ಮಗಳು ಹಾಗೂ ಹಲವಾರು ನೆಂಟರಿಷ್ಟರನ್ನು ಆ ವಿಡಿಯೋದಲ್ಲಿ ತೋರಿಸಲಾಗಿದೆ ಅದರಲ್ಲಿ ಹೈಲೈಟ್ ಆದದ್ದೆ ದರ್ಶನವರ ತಾಯಿ ಮೀನಾ ತೂಗುದೀಪ್..!
ವಿಡಿಯೋ ಫೇಕ್ ಆದ್ರೆ ಅಲ್ಲಿರುವ ಫೋಟೋ ಫೇಕ್ ಖಂಡಿತ ಅಲ್ಲ..! Darshan
