ಶಂಕರ್ ನಾಗ್ ಗೆ ನಿಜವಾಗಿಯೂ ಆಕ್ಸಿಡೆಂಟ್ ಆದದ್ದ ಅಥವಾ ಕೊಲೆನಾ..!

          ಶಂಕರ್ ನಾಗ್ (Shankar Nag) ಕನ್ನಡ ಚಿತ್ರರಂಗ ಕಂಡಂತಹ ಒಬ್ಬ ಅದ್ಭುತ ನಟ ನಿರ್ದೇಶಕ  ಹಾಗೂ ನಿರ್ಮಾಪಕ , ಶಂಕರ್ ನಾಗ್ ಬದುಕಿದ್ದು ಕೇವಲ 35 ವರ್ಷ ಅಷ್ಟೇ.  ಶಂಕರ್ ನಾಗ್ ಕಾರ್ ಆಕ್ಸಿಡೆಂಟ್ ನಲ್ಲಿ ಸತ್ತಿದ್ದರು ಕೂಡ ಅವರ ಸಾವಿನ ಬಗ್ಗೆ ಸಾಕಷ್ಟು ಊಹಾಪೋಹಗಳು ಎದ್ದಿದ್ದವು . ಕೆಲವರು ಇದನ್ನು ಕೇವಲ ಆಕ್ಸಿಡೆಂಟ್ ಅಂತ ಅಂದಿದ್ದರೆ ಇನ್ನೂ ಕೆಲವರು ಇದನ್ನ ಆಕ್ಸಿಡೆಂಟ್ ಅಲ್ಲ ಇದು ಯಾರೂ ಬೇಕೆಂತಲೇ ಕೊಲೆ ಮಾಡಿಸಿದ್ದು ಎಂದು ಕರ್ನಾಟಕದಾದ್ಯಂತ ಹರಿದಾಡ್ತಾ ಇತ್ತು. ಆ ಅನುಮಾನ ಬರಲು ಕಾರಣ ಅಲ್ಲಿ ಕೆಟ್ಟು ನಿಂತಿದ್ದಂತಹ ಒಂದು ಲಾರಿ…!

ಮೂರು ದಿನದಿಂದ ಹೊಂಚು ಹಾಕಿ ನಿಂತಿತ್ತ ಆ ಲಾರಿ…! Shankar Nag

    ಮೂರು ದಿನದಿಂದ ಒಂದು ಲಾರಿ ಅಲ್ಲೇ ಹೆದ್ದಾರಿಯಲ್ಲಿ ಕೆಟ್ಟು ನಿಂತಿತ್ತು. ಯಾರು ಕೂಡ ಬಂದು ಅದನ್ನ ಸರಿ ಮಾಡಿಸಿಕೊಂಡು ಹೋಗಿರಲಿಲ್ಲ , ಆದರೆ ಆಕ್ಸಿಡೆಂಟ್ ಆದಂತಹ ಎರಡು ದಿನಕ್ಕೆ ಬಂದು ಅದನ್ನು ಸರಿ ಮಾಡಿಕೊಂಡು ತೆಗೆದುಕೊಂಡು ಹೋಗಿದ್ದರು. ಇದು ಹೆಚ್ಚಿನವರಲ್ಲಿ ಸಂಶಯ ಹುಟ್ಟಿಸಲು ಕಾರಣವಾಗಿತ್ತು, ಎಲ್ಲರೂ ಕೂಡ ಇದನ್ನು ಒಂದು ಫ್ರೀ ಪ್ಲಾನ್ಡ್ ಮರ್ಡರ್ ಎಂದು ಹೇಳತೊಡಗಿದರು. ಆದರೆ ಇನ್ನೊಂದು ಇಂಟರೆಸ್ಟಿಂಗ್ ವಿಷಯ ಏನಪ್ಪಾ ಅಂತ ಅಂದ್ರೆ ಶಂಕರ್ ನಾಗ್ ಅದೇ ದಿನದಂದು ತೀರಿಕೊಳ್ಳುತ್ತಾನೆಂದು ಅವರ ತಾಯಿಗೆ  ಮಾತಾಜಿ ಒಬ್ಬರು ಮೊದಲೇ ಹಿಂಟ್ ಕೊಟ್ಟಿದ್ದರ ಬಗ್ಗೆ ನಿಮಗೆ ಗೊತ್ತಾ.

Table of Contents

ಮಾತಾಜಿ ಶಂಕರ್ ನಾಗ್ (Shankar Nag) ಅಮ್ಮನಿಗೆ ಹೇಳಿದ್ದೇನೆ…!

Shankar Nag

             ಇದು ನಾವು ಹೇಳುತ್ತಿರುವ ಅಥವಾ ಇನ್ಯಾರೋ ಹೇಳುತ್ತಿರುವ ಕಟ್ಟುಕಥೆ ಅಲ್ಲ ಇದನ್ನ ಸ್ವತಃ ಅನಂತ್ ನಾಗ್ ಅವರೇ ಇಂಟರ್ವ್ಯೂ ಒಂದರಲ್ಲಿ ಹೇಳಿದ್ದರು. ತಂದೆಯ ಮರಣದ ನಂತರ ಅವರ ತಾಯಿ ಆನಂದ  ಆಶ್ರಮದಲ್ಲಿ ಸೇವೆ ಮಾಡ್ತಾ ಇದ್ರು . 1988 ರಲ್ಲಿ  ಆಶ್ರಮದಲ್ಲಿದ್ದಂತಹ  ಮಾತಾಜಿ ಕೃಷ್ಣಬಾಯಿ ಶಂಕರ್ ನಾಗ್ ಅವರ ತಾಯಿಯ ಬಳಿ “ಆನಂದಿ ಇವತ್ತು ಯಾವ ದಿನ”  ಎಂದು ಕೇಳುತ್ತಾರೆ. ಆಗ ಅವರು ಇಂದು ದಶಮಿ ಎಂದು ಹೇಳುತ್ತಾರೆ.
ಆಗ ಮಾತಾಜಿಯವರು ಶಂಕರ್ ನಾಗ್ ತಾಯಿಯಾದ ಆನಂದಿ ಅವರ ಬಳಿ ” ನೀನು ಇಂದು ದಿನವಿಡಿ  ರಾಮ ಜಪವನ್ನ ಮಾಡುತ್ತ ಇರು”  ಎಂದು ಹೇಳ್ತಾರೆ. ಆಗ ಶಂಕರ್ ನಾಗ್ ತಾಯಿಯವರಿಗೆ ಸ್ವಲ್ಪ ಗಾಬರಿಯಾಗುತ್ತದೆ ಯಾಕೆಂದರೆ,   ಶಂಕರ್ ನಾಗ್ ಅವರ ತಂದೆ ತೀರಿದ ಒಂದು ವರ್ಷಕ್ಕೆ ಅವರ ಚಿಕ್ಕಪ್ಪ ಕೂಡ ತೀರಿಹೋಗ್ತಾರೆ. ನನ್ನ ಜೊತೆ ಇರುವುದು ಈಗ ಶಂಕರ್ ನಾಗ್ ಹಾಗೂ ಅನಂತನಾಗ್ ಮಾತ್ರ ಅವರಿಬ್ಬರಲ್ಲಿ ಯಾರು ಎಂದು ಗಾಬರಿಯಿಂದ ಕೇಳ್ತಾರೆ.  ಆಗ ಮಾತಾಜಿಯವರು ಶಂಕರ್ ನಾಗ್ ಅವರ ತಾಯಿಯ ಬಳಿ ”  ಈ ದಶಮಿಯಲ್ಲ ಮುಂದಿನ ದಶಮಿಯಲ್ಲ ಅದರ ಮುಂದಿನ ದಶಮಿ ಹಾಗಾಗಿ ನೀನು ಪ್ರತಿ ದಶಮಿಯಂದು  ರಾಮ ಜಪವನ್ನು ಮಾಡುವುದು ನಿಲ್ಲಿಸಬೇಡ ಎಂದು ಹೇಳುತ್ತಾರೆ.  ಆಗ ಮತ್ತೆ ಶಂಕರ್ ನಾಗ್ ಅವರ ತಾಯಿ ಇಬ್ಬರಲ್ಲಿ ಯಾರು ಎಂದು ಹೇಳಿ ಮಾತಾಜಿ ಎಂದು ಕೇಳುತ್ತಾರಂತೆ. ” ಅದೆಲ್ಲಾ ಬೇಡ ನೀನು ನಾನು ಹೇಳಿದ್ದನ್ನ ಮಾಡು ಎಂದು ಹೇಳುತ್ತಾರೆ.

                ಅಂದು ಮಾತಾಜಿಯವರು ಆಡಿದ ಮಾತಿನಿಂದ ಗಾಬರಿಗೊಂಡ ಶಂಕರ್ ನಾಗ್ ಅವರ ತಾಯಿ,  ಶೂಟಿಂಗಲ್ಲಿದ್ದಂತಹ ಶಂಕರ್ ನಾಗ್ ಹಾಗೂ ಅನಂತ್ ನಾಗ್ ಅವರನ್ನ ತಕ್ಷಣ ಆಶ್ರಮಕ್ಕೆ ಬರುವಂತೆ ಹೇಳುತ್ತಾರೆ . ಇವರಿಬ್ಬರೂ  ಶೂಟಿಂಗ್ ಇದೆ ಎಂದು ಹೇಳಿದ್ದಕ್ಕೆ ಅದೆಲ್ಲ ಗೊತ್ತಿಲ್ಲ ನೀವು ಬರಲೇಬೇಕು ಎಂದು ಹಠ ಹಿಡಿತಾರೆ. ಆಗ ತಾಯಿಯ ಮಾತಿಗೆ ಒಪ್ಪಿದ ಶಂಕರ್ ನಾಗ್ ಹಾಗೂ ಅನಂತನಾಗ್ ಅವರು ಫ್ಲೈಟ್ ಬುಕ್ ಮಾಡಿ ಆಶ್ರಮಕ್ಕೆ ಬರುತ್ತಾರೆ.  ಅದರ ಮುಂದಿನ ದಶಮಿಯಂದು ಸ್ವತಹ ಮಾತಾಜಿ ಕೃಷ್ಣ ಬಾಯಿಯವರೇ ತೀರಿಕೊಳ್ತಾರೆ.

               ಇದರ ನಂತರ ಮಾತಾಜಿ ಹೇಳಿದ ಮಾತು ಶಂಕರ್ ನಾಗ್ ಅವರ ತಾಯಿಗೆ ಮರೆತು ಹೋಗುತ್ತೆ. ಆದರೆ ದುರಾದೃಷ್ಟವಶಾತ್ ಮಾತಾಜಿ ಹೇಳಿದಂತೆ ಮುಂದಿನ ವರ್ಷ ದಶಮಿಯ ದಿನದಂದೇ ಶಂಕರ್ ನಾಗ್ ಅವರು ತೀರಿಕೊಳ್ತಾರೆ. ಎಲ್ಲವೂ ಕೈಮೀರಿ ಹೋದ ಮೇಲೆ  ಅವರ ತಾಯಿಗೆ ಮಾತಾಜಿ ಹೇಳಿದ ಮಾತು ನೆನಪಾಗಿ ಅನಂತ್ ನಾಗ್ ಅವರ ಬಳಿ ಮಾತಾಜಿ ಅಂದು ಹೀಗೆ ಆಗುತ್ತೆ ಎಂದು ಮೊದಲೇ ಸೂಚನೆ ನೀಡಿದ್ದರು ಆದರೆ ನನಗೆ ಮರೆತು ಹೋಯಿತು ಅಂತ ಹೇಳ್ತಾರೆ.

Shankar Nag


             
ಶಂಕರ್ ನಾಗ್  ಕುಟುಂಬ  ಚಿಕ್ಕವರಿರುವಾಗ  ಶಿರಾಲಿಯಲ್ಲಿದರು. ಆ ಊರಿನಲ್ಲಿ ದತ್ತಾತ್ರೇಯ ದೇವಸ್ಥಾನ ಒಂದಿತ್ತು.  ಆ ದೇವಸ್ಥಾನದ ಪಕ್ಕವೇ ಇವರ ಅಜ್ಜನ ಮನೆ ಇತ್ತು. ಇವರ ಅಜ್ಜನ ಮನೆಯ ಪಕ್ಕದಲ್ಲಿ ಒಬ್ಬರು ಸಂಜೀವ್ ಎನ್ನುವ ವಾರೆ ಮುಖದ ವ್ಯಕ್ತಿ ಒಬ್ಬರು ಇರುತ್ತಾರೆ. ಅವರು ಸುಂದರವಾಗಿ ಜಲ ತರಂಗವನ್ನು ಬಾರಿಸುತ್ತಿದ್ದರು. ಅವರಿಗೆ ಯಾರನ್ನಾದರೂ ಮುಖ ನೋಡಿದರೆ ಭವಿಷ್ಯ ಹೇಳುವಂತಹ ಗುಣವಿರುತ್ತೆ. ಒಂದು ದಿನ  ಆ ವ್ಯಕ್ತಿ ಶಂಕರ್ ನಾಗ್ ನನ್ನು ಮೇಲಿಂದ ಕೆಳಗೆ ನೋಡಿ ಇವನು ಮುಂದೆ ಸುಭಾಷ್ ಚಂದ್ರ ಬೋಸ್ ಆಗ್ತಾನೆ ಅಂತ ಭವಿಷ್ಯ ಹೇಳಿದ್ರಂತೆ,

       ಆಗ ಅನಂತ್ ನಾಗ್ ಅವರು ತನ್ನ ತಾಯಿಯ ಬಳಿ ಹೋಗಿ “ಅಮ್ಮ ದೇವಸ್ಥಾನದಲ್ಲಿದ್ದಾರಲ್ಲ ಅವರು ಶಂಕರ್ ನನ್ನು ನೋಡಿ ಇವನ ಮುಂದೆ ಸುಭಾಷ್ ಚಂದ್ರ ಬೋಸ್ ಆಗ್ತಾನೆ ಅಂತ ಹೇಳಿದರು ” ಅಂತ ಹೇಳ್ತಾರೆ. ಆಗ ಅವರ  ತಾಯಿ ಹೌದಾ ಹಾಗೆ ಹೇಳಿದರೆ ಯಾಕೆ ಹಾಗೆ ಹೇಳಿದರು ಎಂದು ತಲೆಕೆಡಿಸಿಕೊಳ್ಳುತ್ತಾರೆ.ಆಗ ಅವರಿಗೆ ಅದರ ಒಳಾರ್ಥ ಅರ್ಥವಾಗುವುದಿಲ್ಲ. ಬಹುಶಃ ಸುಭಾಷ್ ಚಂದ್ರ ಬೋಸ್ ತರಹ ಫೇಮಸ್ ಆಗ್ತಾನೆ ಅಂತ ಅಂದುಕೊಳ್ಳುತ್ತಾರೆ.
ಆದರೆ ಶಂಕರ್ ನಾಗ್ ಅವರು ತೀರಿಕೊಂಡ ಮೇಲೆ ಎಲ್ಲರಿಗೂ ಅರ್ಥವಾಗುತ್ತದೆ  ಅವರು ಹೇಳಿದ್ದು ಸುಭಾಷ್ ಚಂದ್ರ ಬೋಸ್ ನಂತೆ ಫೇಮಸ್ ಆಗ್ತಾನೆ , ಎಲ್ಲರಿಗೂ ನೆಚ್ಚಿನವನಾಗ್ತಾನೆ, ಹಾಗೆ ಬೇಗ ತೀರಿಕೊಳ್ಳುತ್ತಾನೆ.  ಸುಭಾಷ್ ಚಂದ್ರ ಬೋಸ್ ನನ್ನ ಹೇಗೆ ಎಲ್ಲರೂ ಆರಾಧಿಸ್ತಾರೆ ಅದೇ ರೀತಿ ಶಂಕರ್ ನಾಗ್ ನನ್ನು ಕೂಡ ಎಲ್ಲರೂ ಮನಸಲ್ಲಿ ಇಟ್ಕೊಂಡು ಪೂಜಿಸುತ್ತಾರೆ  ಅಂತ ಆ ಮಾತಿನ ಒಳಗಿದ್ದ ಮರ್ಮ ಅರ್ಥ ಆಗುತ್ತೆ.

ಸಾಯುವ ಸ್ವಲ್ಪ ತಿಂಗಳುಗಳ ಮುಂಚೆ ವಿಚಿತ್ರವಾಗಿ ಆಡುತ್ತಿದ್ದ ಶಂಕರ್ ನಾಗ್..! Shankar nag

     ಅನಂತ್ ನಾಗ್ ಅವರು ಇಂಟರ್ವ್ಯೂನಲ್ಲಿ ಹೇಳಿದ ಹಾಗೆ,  ಶಂಕರ್ ನಾಗ್ ಅವರು ಸಾಯುವ ಸ್ವಲ್ಪ ತಿಂಗಳುಗಳ ಹಿಂದೆ ವಿಚಿತ್ರವಾಗಿ ಆಡತೊಡಗಿದ್ದರಂತೆ ಅಂದ್ರೆ ಯಾವ ರೀತಿ ಅಂತ ಅಂದ್ರೆ,  ಎಲ್ಲಾ ಕೆಲಸವನ್ನು ಬೇಗನೆ ಪೂರ್ಣಗೊಳಿಸಬೇಕು ನಾಳೆ ನಾನು ಬದುಕಿರೋಲ್ಲ ಎನ್ನುವ ಹಾಗೆ. ಸಿಕ್ಕಾಪಟ್ಟೆ ಗಡಿಬಿಡಿ ಮಾಡ್ತಾ ಇದ್ದಾರಂತೆ. ಹತ್ತಿರಕ್ಕೆ ಬಂದ ಎಲ್ಲಾ ಸಿನಿಮಗಳಿಗೂ ಸೈನ್ ಹಾಕ್ತಾ ಇದ್ರು, ಪ್ರತಿದಿನ ರೆಸ್ಟ್ ತಗೊಳ್ಳದೆ ಸಿನಿಮಾ, ಸಿನಿಮಾ, ಸಿನಿಮಾ ಅಂತ ದಿನವಿಡೀ ಕೆಲಸ ಮಾಡುತ್ತಿದ್ದರು. ಅದು ಅಲ್ಲದೆ ಒಂದು ನಿಮಿಷ ಎಲ್ಲಿ ಲೇಟಾಗುತ್ತೋ ಅಂತ ಎಷ್ಟೋ ಬಾರಿ ಸ್ಪೀಡ್ ಆಗಿ  ಕಾರನ್ನು ಓಡಿಸಿಕೊಂಡು ಹೋಗುತ್ತಿದ್ದರಂತೆ.

              ಒಂದು ದಿನ ಎಮ್ಮೆಗೆ ಹೋಗಿ ಡಿಕ್ಕಿ ಹೊಡೆದಿದ್ದರಂತೆ. ಅಷ್ಟೇ ಅಲ್ಲ , ಒಂದು ಬಾರಿ ಸ್ನಾನಕ್ಕೆ ಹೋದಾಗ ಸಡನ್ನಾಗಿ ಹೀಟರ್ ಮುಟ್ಟಲು ಹೋಗಿ ಕುತ್ತಿಗೆ ಫುಲ್ ಸುಟ್ಟು ಹೋಗಿತ್ತು ಎಂದು, ಆ ದಿನಗಳಲ್ಲಿ ನನ್ನ ತಮ್ಮ ಹೇಗೆ ಚಡಪಡಿಸುತ್ತಿದ್ದ ಎಂದು ಅನಂತನಾಗ್ ಅವರು ಇಂಟರ್ವ್ಯೂನಲ್ಲಿ ಹೇಳಿ ಭಾವುಕರಾಗ್ತಾರೆ .
ಇದನ್ನೆಲ್ಲಾ ನೋಡ್ತಾ ಇದ್ರೆ ನಮಗೆ ಅನ್ಸುತ್ತೆ ಬಹುಶ ದೇವರೇ “ಶಂಕರ್ ನಾಗ್, ನೀನು ಇನ್ನು ಸ್ವಲ್ಪ ದಿನ ಭೂಮಿ ಮೇಲೆ ಇರುವುದು, ಅಷ್ಟರೊಳಗೆ ನಿನ್ನ ಕೆಲಸವನ್ನೆಲ್ಲ ಬೇಗನೆ ಪೂರ್ಣಗೊಳಿಸು”  ಎಂದು ಸೂಚನೆ ನೀಡಿದರ ಎಂದು ಬೇಸರ ಆಗ್ತದೆ. ಬರೇ 12 ವರ್ಷ ಶಂಕರ್ ನಾಗ್ ಸಿನಿಮಾ ರಂಗದಲ್ಲಿದ್ದರೂ ಕೂಡ ಅದೆಷ್ಟು ಜನರ ಹೃದಯದಲ್ಲಿ ಈಗಲೂ ಕೂಡ ಇದ್ದಾರೆ ಅಂತ ಅಂದ್ರೆ ಅವರ  ವ್ಯಕ್ತಿತ್ವ ಅಂತದ್ದು.

 ಅಣ್ಣ ಅನಂತ್ ನಾಗ್ ಎಂದರೆ ಸಿಕ್ಕಾಪಟ್ಟೆ ಹೆದ್ರುಕೊಳ್ಳುತ್ತಿದ್ದ ಶಂಕರ್ ನಾಗ್..! Shankar Nag

Shankar Nag            ಶಂಕರ್ ನಾಗ್ ಅವರು ಅನಂತನಾಗ್ ಅವರಿಗಿಂತ ಆರು ವರ್ಷ ಚಿಕ್ಕವರು. ಅಣ್ಣ ತಮ್ಮನ ನಡುವೆ ಬಾಂದವ್ಯ ಯಾವ ರೀತಿ ಇತ್ತು ಅಂತ ಅಂದ್ರೆ. ಅವರ ಆಪ್ತರಾದ ಚಿಕ್ಕ ವಯಸ್ಸಿನಿಂದ ಜೊತೆಗಿದ್ದ ಕನ್ನಡದ ಅದ್ಭುತ ಹಾಸ್ಯ ನಟ ಮನ್ ದೀಪ್ ರಾಯ್  ಅವರು ಹೇಳುವ ಪ್ರಕಾರ,  ಶಂಕರ್ ನಾಗ್ ಗೆ ಅಣ್ಣ ಅಂದರೆ ಬಹಳ ಪ್ರೀತಿ ಹಾಗೂ ತುಂಬಾ ಗೌರವದಿಂದ ಕಾಣುತ್ತಾರೆ. ಒಂದು ದಿನ ಶಂಕರ್ ನಾಗ್ ಮನ್ ದೀಪ್  ಅವರ ಜೊತೆ ಕುಳಿತುಕೊಂಡು ಫಸ್ಟ್ ಟೈಮ್ ಸಿಗರೇಟ್ ಸೇರುತ್ತಾರೆ .  ಶಂಕರ್ ನಾಗ್ ಅನಂತ್ ನಾಗ್ ಅವರಿಗೆ ಎಷ್ಟು ಹೆದ್ರಿಕೊಳ್ಳುತ್ತಿದ್ದಾರೆಂದರೆ,  ಈ ವಿಷಯ ಬೇಕಾದರೆ ಅಕ್ಕನಿಗೆ ಹೇಳು ಪರ್ವಾಗಿಲ್ಲ ಆದರೆ ಅಣ್ಣನಿಗೆ ಮಾತ್ರ ಹೇಳಬೇಡ ಅಂತ ಹೇಳ್ತಾರಂತೆ.  ಅಷ್ಟು ಅಣ್ಣನಿಗೆ ಗೌರವ ಕೊಡ್ತಾ ಇದ್ದರು.  ಒಂದು ರೀತಿಯಲ್ಲಿ ಹೇಳಬೇಕಾದರೆ ಅವರನ್ನು ತಂದೆಯ ಸ್ಥಾನದಲ್ಲಿ ಇಟ್ಟು ಗೌರವಿಸುತ್ತಿದ್ದರು.ಅಂತೂ ಇಂತೂ ಅನಂತ್ ನಾಗ್ ಅವರಿಗೆ ತನ್ನ ತಮ್ಮ ಸಿಗರೇಟ್ ಸೇದುತ್ತಿದ್ದ ವಿಷಯ ಗೊತ್ತಾಗುತ್ತೆ. ಆದರೆ ಅವರಿಗೆ ಏನು ಹೇಳುವುದಿಲ್ಲ. ಅಷ್ಟೇ ಅಲ್ಲದೆ ಅವರಿಬ್ಬರೂ ಒಳ್ಳೆಯ ಸ್ನೇಹಿತರಾಗಿದ್ದರು. ನಂತರದ ದಿನಗಳಲ್ಲಿ ಇಬ್ಬರೂ ಕೂಡ ಒಂದೇ ಸಿಗರೇಟ್ ಹಚ್ಚಿಕೊಂಡು   ಸೇದುತ್ತಿದ್ದರಂತೆ.
 
 ಅದೇನೇ ಆದ್ರೂ ಕೂಡ ಶಂಕರ್ ನಾಗ್ ಕನ್ನಡ ಚಿತ್ರರಂಗ ಕಂಡಂತಹ ಒಂದು ಅದ್ಭುತ ನಟ.  ಅವರು ಭೂಮಿ ಮೇಲೆ ಬದುಕಿದ್ದು ಸ್ವಲ್ಪ ಸಮಯವಾದರೂ ಕೂಡ ಅವರ ನೆನಪು ಮಾತ್ರ ಇಂದಿಗೂ ಎಲ್ಲರ ಮನಸ್ಸನ್ನು ಹಾಗೆ ಇದೆ.

2 thoughts on “ಶಂಕರ್ ನಾಗ್ ಗೆ ನಿಜವಾಗಿಯೂ ಆಕ್ಸಿಡೆಂಟ್ ಆದದ್ದ ಅಥವಾ ಕೊಲೆನಾ..!”

Leave a Comment