ಕಿಚ್ಚ ಮಾತಿಗೆ ಮಾಡರ್ನ್ ಮಹಾಕವಿ ಹಾಗೂ ಶಾಸ್ತ್ರಿ ಗಡಗಡ…..                              

           ಈಗಾಗಲೇ ಬಿಗ್ ಬಾಸ್ ಕನ್ನಡ ಸೀಸನ್ 13 (Kiccha Sudeep) ಶುರುವಾಗಿದೆ. ಒಬ್ಬರಿಕಿಂತ ಒಬ್ಬರು ಜಗಳ ಆಡೋದ್ರಲ್ಲಿ ನಂಬರ್ ಒನ್ ಇದ್ದಾರೆ. ಬಿಗ್ ಬಾಸ್ ಅಭಿಮಾನಿಗಳಿಗಂತೂ ಯಾರನ್ನ ಸಪೋರ್ಟ್ ಮಾಡೋದು ಯಾರನ್ನ ಬಿಡೋದು ಅಂತ ಸಿಕ್ಕಾಪಟ್ಟೆ ಕನ್ಫ್ಯೂಷನ್ ಆಗಿದ್ದಾರೆ. ಇನ್ನು ಹೇಳಬೇಕಾದರೆ ಎಲ್ಲರಿಗೂ ಕೂಡ ಈಗೋ ಕ್ಲಾಶ್ ಸಿಕ್ಕಾಪಟ್ಟೆ ಆಗ್ತಾ ಇದೆ. ಇಷ್ಟು ವರ್ಷದ ಬಿಗ್ ಬಾಸ್ ಸೀಸನ್ (Kannada bigg Boss) ಗಳಲ್ಲಿ ಒಂದೊಂದು ರೀತಿಯ ಕ್ಯಾರೆಕ್ಟರ್ಗಳು ಇರ್ತಿದ್ರು. ಬೆಸ್ಟ್ ಎಕ್ಸಾಂಪಲ್ ಕಾಮಿಡಿ ವಿಷಯಕ್ಕೆ ಬಂದರೆ ಗಿಲ್ಲಿ ಆಗಿರಬಹುದು, ಕುರಿ ಪ್ರತಾಪ್ ಆಗಿರಬಹುದು, ರಕ್ಷಿತಾ ಶೆಟ್ಟಿ ಆಗಿರಬಹುದು, 

ಇದು ರಗಡ್ ವಿಷಯಕ್ಕೆ ಬಂದರೆ ವಿನಯ್ ಆಗಿರಬಹುದು, ಲಾಯರ್ ಜಗದೀಶ್ ಆಗಿರಬಹುದು , ಅಶ್ವಿನಿ ಗೌಡ ಆಗಿರಬಹುದು ಹೀಗೆ ಬಿಗ್ ಬಾಸ್ (Kannada bigg Boss) ಮನೆಯಲ್ಲಿ ಒಂದೊಂದು ರೀತಿಯ ಡಿಫ್ರೆಂಟ್ ಕ್ಯಾರೆಕ್ಟರ್ಗಳು ಜೊತೆ ಸೇರಿ ಮಿಕ್ಸ್ ಅಪ್ ಆಗಿತ್ತು, ಒಬ್ಬೊಬ್ಬರು ಒಂದೊಂದು ರೀತಿಯ ಡಿಫರೆಂಟ್ ಕ್ಯಾರೆಕ್ಟರ್ ಗಳನ್ನ ಬಿಗ್ ಬಾಸ್ ಮನೆಯಲ್ಲಿ ನೋಡಬಹುದು. ಆದರೆ ಈ ಬಾರಿಯ ಬಿಗ್ ಬಾಸ್ ನಲ್ಲಿ ಆಟಕ್ಕಿಂತ ಜಾಸ್ತಿ ಬರೆ ಈಗೋ ಕ್ಲಾಶ್, ಫೈಟಿಂಗ್ ಗಳೇ ನಡಿತಾ ಇದೆ. 

ಇವರೆಲ್ಲರಿಗಿಂತ ಒಂದು ಕೈ ಮೇಲೆ ಅನ್ನೋ ಹಾಗೆ ಈ ಮಾಡ್ರನ್ ಕವಿ ಮಂಜ. ಮಾತೆತ್ತಿದರೆ ನಿನಗೆ 50 ಪೈಸೆ ಬೆಲೆ ಇಲ್ಲ 10 ಪೈಸೆಗೆ ಬೆಲೆ ಬಾಳಲ್ಲ ಅಂತಲ್ಲ ಸಿಕ್ಕಾಪಟ್ಟೆ ಬೈತಾ ಇದ್ರು. ಮಂಜ ಹಾಗೂ ಕಿರಣ್ ಶಾಸ್ತ್ರಿಗೆ ಬುದ್ಧಿ ಕಲಿಸಲು ಕೊನೆಯಲ್ಲಿ ಫೇಕ್ ಡಬಲ್ ಎಲಿಮಿನೇಷನ್ ಮಾಡಿಬಿಟ್ಟರು. 

ಮಂಜ, ಶಾಸ್ತ್ರಿ ಎಲಿಮಿನೇಟ್ ಆಗಿದ್ದಿದ್ರೆ ಬಿಗ್ ಬಾಸ್ ನೋಡೋಕೆ ಬೋರ್ ಆಗಬಹುದಾ…!? (Kiccha Sudeep)

Kiccha Sudeep

              ವಾರದ ಕಥೆ ಕಿಚ್ಚನ ( kiccha Sudeep) ಜೊತೆಯಲ್ಲಿ ವೇಳೆ, ವೈಷ್ಣವಿ, ಅವಿನಾಶ್, ಮಾಡರ್ನ್ ಮಹಾಕವಿ ಕವಿಮಂಜ, ಕಿರಣ್ ಶಾಸ್ತ್ರಿ ಯನ್ನು ಕನ್ನಡಿ ಎದುರು ನಿಂತು ನಿಮ್ಮೊಂದಿಗೆ ನೀವು ಮಾತನಾಡುವಂತೆ ಬಿಗ್ಬಾಸ್ ಸೂಚಿಸಿದ್ದರು. ಹೀಗೆ ಮಾತನಾಡುವಾಗ ಯಾರ ಕನ್ನಡಿ ಒಡೆಯುತ್ತದೆಯೋ ಅವರು ಮನೆಯಿಂದ ಹೊರಹೋಗ್ತಾರೆ ಎಂದು ಹೇಳಲಾಗಿತ್ತು. ಮೊದಲಿಗೆ ಅವಿನಾಶ್ ಮಾತಾಡಿ ಸೇಫ್ ಆಗ್ತಾರೆ, ನಂತರ ವೈಷ್ಣವಿ ಮಾತಾಡ್ತಾರೆ ಅವರು ಕೂಡ ಸೇಫ್ ಆಗ್ತಾರೆ, ನಂತರ ಮಂಜು ಹಾಗೂ ಶಾಸ್ತ್ರಿಯನ್ನ ಇಬ್ಬರನ್ನ ಮಾತಾಡಲು ಹೇಳಿ ಕನ್ನಡಿ ಒಡೆಯುತ್ತೋ ಇಲ್ಲವೋ ಅಂತ ಇಬ್ಬರಿಗೂ ಒಟ್ಟಿಗೆ ನಿಲ್ಲಲು ಹೇಳುತ್ತಾರೆ, ಒಂದೇ ಬಾರಿ ಇಬ್ಬರ ಕನ್ನಡಿ ಕೂಡ ಒಡೆದು ಹೋಗುತ್ತೆ. ಬಿಗ್ ಬಾಸ್ ಮನೆಮಂದಿಗೆಲ್ಲ ಶಾಕ್ ಆಗುತ್ತೆ, ಮಾಡರ್ನ್ ಮಹಾಕವಿ ಮಂಜ ಮತ್ತು ಕಿರಣ್ ಶಾಸ್ತ್ರಿ ಅವರನ್ನ ಮನೆಯಿಂದ ಹೊರಗೆ ಕಳಿಸುತ್ತಿರುವುದಾಗಿ ತೋರಿಸಲಾಗಿದೆ. ಕೊನೆಗೆ ಸುದೀಪ(Kiccha Sudeep)ಅವರೇ ಕರ್ನಾಟಕ ಜನತೆಗೆ ಹೇಳುತ್ತಾರೆ ಫೇಕ್ ಡಬ್ಬಲ್ ಎಲಿಮಿನೇಷನ್ ಮಾಡಿದ್ದೇವೆ, ಇಬ್ಬರಿಗೂ ಕೂಡ ಈ ರೀತಿಯಾಗಿ ಸ್ವಲ್ಪ ಬುದ್ಧಿ ಹೇಳಬೇಕಿತ್ತು ಅಂತ ಹೇಳುವ ಮೂಲಕ ಫೇಕ್ ಡಬಲ್ ಎಲಿಮಿನೇಷನ್ ಎಂದು ಕನ್ಫರ್ಮ್ ಮಾಡಿದರು, ಆದರೆ ಬಿಗ್ ಬಾಸ್ ಮನೆ ಒಳಗಿರುವವರಿಗೆ ಈ ವಿಷಯ ಗೊತ್ತೇ ಇರಲ್ಲ, ಮಾಡ್ರನ್ ಕವಿ ಮಂಜ ಹೊರಗೆ ಹೋಗುವಾಗ ತನ್ನ ಗೆಳೆಯನಾದ ಲಿಖಿತ್ ನೀನೇ ಈ ಸೀಸನ್ ವಿನ್ ಆಗಬೇಕು ಅಂತ ಹೇಳಿ ಹೊರಗೆ ಹೋಗ್ತಾರೆ. ಕಿರಣ್ ಶಾಸ್ತ್ರಿ ಮಾತ್ರ ಎಲ್ಲರಿಗೂ ವಿಶ್ ಮಾಡಿ ವಿದಾಯ ಹೇಳಿ ಹೊರಗೆ ಹೋದರೆ. ಮಂಜ ಬಿಗ್ ಬಾಸ್ ನಾನು ನನ್ನ ತಪ್ಪನ್ನ ತಿದ್ದಿಕೊಳ್ತೀನಿ ಮತ್ತೆ ಬರ್ತೀನಿ ಅಂತ ಹೇಳಿ, ಮನೆಯವರಿಗೆ ಏನು ಹೇಳಿದೆ ಸೀದಾ ಹೊರಗೆ ಹೋಗ್ತಾರೆ. 

ಶಾಸ್ತ್ರಿ ಮಂಜ ಮನೆಯಿಂದ ಹೊರಗೆ ಹೋಗಬೇಕಾ….! ಬೇಡ್ವಾ…!(Kiccha Sudeep)

          ಕಿರಣ್ ಶಾಸ್ತ್ರಿ ಹಾಗೂ ಮಾಡರ್ನ್ ಮಹಾಕವಿ ಕವಿಮಂಜ ಮನೆಯಲ್ಲಿ ಎಷ್ಟೇ ಕಿರ್ಚಾಡಿದರು ಎಷ್ಟೇ ಜಗಳ ಮಾಡಿದ್ರು ಕೂಡ ಇವರಿಂದ ಬಿಗ್ ಬಾಸ್ ಮನೆಯಲ್ಲಿ (bigg Boss Kannada season 13) ಎಂಟರ್ಟೈನ್ಮೆಂಟ್ ಸಿಕ್ತಾ ಇದೆ ಅನ್ನೋದು ನಿಜ.. ಒಂದು ವೇಳೆ ಮಂಜ ಹಾಗೂ ಕಿರಣ್ ಶಾಸ್ತ್ರಿ ಅನ್ನುವಂತಹ ಕ್ಯಾರೆಕ್ಟರ್ ಮನೆ ಒಳಗೆ ಇರದೇ ಇದ್ದಿದ್ದರೆ ಈ ಬಾರಿಯ ಬಿಗ್ ಬಾಸ್ ಗೆ ಇಷ್ಟೊಂದು ಹೈಪ್ ಸಿಕ್ತಾ ಇರಲಿಲ್ಲ ಅನ್ಸುತ್ತೆ. ಯಾಕಂದ್ರೆ ಉಳಿದವರೆಲ್ಲರೂ ಕೂಡ ಒಬ್ಬರನ್ನೊಬ್ಬರು ಮೆಚ್ಚಿಸಿಕೊಂಡು ಸೇಫ್ ಗೇಮ್ ಆಡ್ತಾ ಇದ್ದಾರೆ. ಹೊರಗಡೆ ನಾವು ಹೇಗೆ ಕಾಣ್ತೀವಿ ಅನ್ನೋದು ತುಂಬಾ ತಲೆಲಿಟ್ಕೊಂಡು ಕ್ಯಾಲ್ಕುಲೇಟ್ ಆಗಿ ಬಿಹೇವ್ ಮಾಡ್ತಾ ಇದ್ದಾರೆ. 

Kiccha Sudeep

           ಆದರೆ ಕಿರಣ್ ಶಾಸ್ತ್ರಿ (bigg Boss contestant Kiran Shastri) ಹಾಗೂ ಮಾಡರ್ನ್ ಮಹಾಕವಿ ಕವಿಮಂಜ ಯಾವುದಕ್ಕೂ ಕೇರ್ ಮಾಡಿದೆ ನಾವಿರೋದೆ ಹೀಗೆ ಅಂತ ಮನೆಯನ್ನೇ ರೊಚ್ಚಿಗೆಬ್ಬಿಸಿದ್ದಾರೆ. ಒಂದು ರೀತಿಯಲ್ಲಿ ಮನೆಯವರ ನೆಮ್ಮದಿ ಹಾಳಾಗಲು ಕೂಡ ಇವರೇ ಕಾರಣ. ಸ್ವತಹ ಮಂಜಾನೆ ಹೇಳಿದ್ದಾನೆ ನಾನು ನಿಮ್ಮೆಲ್ಲರ ನೆಮ್ಮದಿ ಕೆಡಿಸಲೇ ಬಂದಿದ್ದು ಅಂತ. ಕಿರಣ್ ಶಾಸ್ತ್ರಿ ಹಾಗೂ ಮಾಡರ್ನ್ ಮಹಾಕವಿ ಕವಿಮಂಜ (modern mahakavi manja) ಒಂದು ವೇಳೆ ಬಾಯನ್ನ ಕಂಟ್ರೋಲ್ ನಲ್ಲಿ ಇಟ್ಟುಕೊಂಡು , ಇನ್ನೊಬ್ಬರಿಗೆ ಕೆಟ್ಟ ಪದಗಳನ್ನು ಬಳಸದೆ ಆಟ ಆಡಿದ್ರೆ ಇವರಿಂದ ಬಿಗ್ ಬಾಸ್ ಮನೆಗೆ ಎಂಟರ್ಟೈನ್ಮೆಂಟ್ ಸಿಕ್ಕೋದಂತೂ ಪಕ್ಕ. ಆದರೆ ಇವರಿಬ್ಬರ ಬಾಯೇ ಇವರಿಗೆ ದೊಡ್ಡ ದುಶ್ಮನ್ ಆಗಿದೆ. ಕಿರಣ್ ಶಾಸ್ತ್ರಿ ಹಾಗೂ ಮಾಡರ್ನ್ ಮಹಾಕವಿ ಕವಿಮಂಜ ಬಗ್ಗೆ ಅಭಿಮಾನಿಗಳಿಗೆ ಎರಡು ರೀತಿಯ ಅಭಿಪ್ರಾಯ ಇದೆ. ಒಂದು ವರ್ಗದ ಜನರಿಗೆ ಇವರಿಬ್ರು ಮನೆಯಲ್ಲಿ ಇರೋದ್ರಿಂದಾನೇ ಎಂಟರ್ಟೈನ್ಮೆಂಟ್ ಸಿಕ್ತಾ ಇದೆ ಅಂತ ಒಂದು ವರ್ಗದ ಜನರು ಹೇಳ್ತಾ ಇದ್ದಾರೆ.

ಇನ್ನೊಂದು ವರ್ಗದ ಜನರು, ಮಾಡರ್ನ್ ಮಹಾಕವಿ ಮಂಜ ಮತ್ತು ಕಿರಣ್ ಶಾಸ್ತ್ರಿ ಇಬ್ಬರ ವರ್ತನೆ ಬಗ್ಗೆ ವೀಕ್ಷಕರೂ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇವರಿಬ್ಬರನ್ನೂ ಮೊದಲು ಮನೆಯಿಂದ ಹೊರಹಾಕಿ. ಅಗ್ನಿಪರೀಕ್ಷೆಯ ಮೂಲಕ ಸಾಮಾನ್ಯ ಜನರು ಎಂದು ಇವರಿಗೆಲ್ಲ ಅವಕಾಶ ಕೊಟ್ಟಿದ್ದೇ ತಪ್ಪಾಯ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಾರದ ಕಥೆ ಕಿಚ್ಚನ ಜೊತೆಯಲ್ಲಿ ಕಿಚ್ಚ ಸುದೀಪ್ ಅವರೂ ಕಿರಣ್ ಶಾಸ್ತ್ರಿ ಹಾಗೂ ಮಾಡರ್ನ್ ಮಹಾಕವಿ ಕವಿ ಮಂಜ ಅವರಿಗೆ ಸಿಕ್ಕಾಪಟ್ಟೆ ಬೈದಿದ್ದಾರೆ. ಉಳಿದವರಿಗೆ 10 ಪೈಸೆಗೆ ಬೆಲೆಬಾಳಲ್ಲ, 50 ಪೈಸೆಗೆ ಬೆಲೆಬಾಳಲ್ಲ ಅಂತ ಹೇಳ್ತಿರಲ್ಲ ನೀವು ಎಷ್ಟು ಪೈಸೆಗೆ ಬೆಲೆ ಬಾಳ್ತೀರ, ಮಾತಿನ ಮೇಲೆ ನಿಗಾ ಇರಲಿ, ಇನ್ನೊಬ್ಬರಿಗೆ ಗೌರವ ಕೊಡುವುದನ್ನು ಕಲಿಯಿರಿ ಅಂತೆಲ್ಲ ಹೇಳಿ ಕಿಚ್ಚ ಸುದೀಪ್ (kiccha Sudeep)ಕ್ಲಾಸ್ ತೆಗೆದುಕೊಂಡಿದ್ದಾರೆ. ಈಗಾಗಲೇ ಫೇಕ್ ಎಲಿಮಿನೇಷನ್ ಮೂಲಕ ಡಬಲ್ ಎಲಿಮಿನೇಷನ್ ಮಾಡಿ ಇವರಿಬ್ಬರನ್ನ ಹೊರಗೆ ಕಳಿಸುವ ಹಾಗೆ ಮಾಡಿದ್ದಾರೆ ಮತ್ತೆ ವಾಪಸ್ ಬಂದಮೇಲೆ ಇವರಿಬ್ಬರೂ ಈ ವಾರವಿಡೀ ಹೇಗೆ ವರ್ತಿಸುತ್ತಾರೆ ಅಂತ ನೋಡಬೇಕು ಎಂದು ಬಿಗ್ ಬಾಸ್ ಅಭಿಮಾನಿಗಳು ಕಾಯ್ತಾ ಇದ್ದಾರೆ.

Leave a Comment