ಫಿಕ್ಸ್ ಆಯ್ತು ತಾಂಡವ್ ರೀ ಎಂಟ್ರಿ ಸೂಚನೆ ಕೊಟ್ರು ಸುದೀಪ್…!

            ಈ ವರ್ಷದ ಬಿಗ್ ಬಾಸ್ (Bigg Boss) ಸೀಸನ್ ನಲ್ಲಿ ಸಿಕ್ಕಾಪಟ್ಟೆ ಬೇಸರ ತಂದು ಕೊಟ್ಟ ಒಂದು ವಿಷಯ ಅಂದ್ರೆ. ಅದು ತಾಂಡವ್ ರಾಮ್ ಎಲಿಮಿನೇಷನ್. ಸಿಕ್ಕಾಪಟ್ಟೆ ಸ್ಟ್ರಾಂಗ್ ಕಂಟೆಸ್ಟೆಂಟ್ ಆಗಿದ್ದ ತಾಂಡವ ರಾಮ್ ಬಿಗ್ ಬಾಸ್ ಮನೆಯಿಂದ ಹೊರಗೆ ಹೋದದ್ದು ಎಲ್ಲರಿಗೂ ಕೂಡ ಶಾಕ್ ನೀಡಿತ್ತು. ಬಿಗ್ ಬಾಸ್ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ನೋವು ಕೊಟ್ಟದ್ದು ಕೂಡ , ಆತ ಮನೆಯಿಂದ ಹೊರಗೆ ಹೋಗುವಾಗ ಮನಸ್ಸು ತುಂಬಾ ನೋವಿದ್ರು ಕೂಡ ಎಲ್ಲರೊಂದಿಗೆ ನಗಾಡಿಕೊಂಡು. ಎಲ್ಲರಿಗೂ ಚೆನ್ನಾಗಿ ಆಡಿ ಅಂತ ಹೇಳಿ ಮನೆಯಿಂದ ಹೊರಗೆ ಹೋಗ್ತಾರೆ. ಆದ್ರೆ ಈ ವಾರದ ಕಿಚ್ಚನ ಪಂಚಾಯಿತಿಯ ಪ್ರಮೋದಲ್ಲಿ. ತಾಂಡವ್ ರಾಮ್ ಮತ್ತೆ ಎಂಟ್ರಿ ಕೊಡ್ತಾರಾ ಅಂತ ಹೇಳಿ ಚಿಕ್ಕದಾಗಿ ಒಂದು ಹಿಂಟ್ ಕೊಟ್ಟಿದ್ದಾರೆ. ಇದನ್ನು ನೋಡಿ ಬಿಗ್ ಬಾಸ್ ಅಭಿಮಾನಿಗಳಿಗೆ 99% ಅಷ್ಟು ನಂಬಿಕೆ ಹುಟ್ಟಿದೆ ಪಾಂಡವ ಮತ್ತೆ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟೆ ಕೊಡ್ತಾರೆ ಅಂತ. 

ಸ್ಟ್ರಾಂಗ್ ಕಂಟೆಸ್ಟಂಟ್ ತಾಂಡವ್ ಗೆ ಹಿನ್ನಡೆಯಾದದ್ದು ಎಲ್ಲಿ..!? Bigg Boss

Bigg Boss

                  ಟಾಸ್ಕ್ ಆಡಿ ಸೂಪರ್ ಪವರ್ ಪಡೆದುಕೊಂಡಿದ್ದ ಧನುಷ್ ಮಾಡಿದ ಒಂದೇ ಒಂದು ಚಿಕ್ಕ ಎಡವಟ್ಟಿನಿಂದ ತಾಂಡವ ರಾಮ್ ನ ಬಿಗ್ ಬಾಸ್ ಮನೆಯ ಜರ್ನಿಗೆ ಫುಲ್ ಸ್ಟಾಪ್ ಇಡಿಸುತ್ತೆ. ಅಷ್ಟಕ್ಕೂ ಧನುಷ್ ಮಾಡಿದ್ದೇನು ಅಂದ್ರೆ.. ಬಿಗ್ ಬಾಸ್ ನೀಡಿದಂತಹ ಮೊಟ್ಟೆ ರಕ್ಷಿಸುವ ಗೇಮ್ ಅನ್ನು ಆಸಿಯ ಜೊತೆಗೆ ಆಡಿ ಗೆದ್ದು ಧನುಷ್ ಮಿಡ್ ಡೇ ಎಲಿಮಿನೇಷನ್ ನಿಂದ ಪಾರಾಗುತ್ತಿರುತ್ತಾರೆ. ಈ ರೀತಿ ಬಿಗ್ ಬಾಸ್ ಮನೆಯ ಕಾವ್ಯ, ಕಿರಣ್ ಶಾಸ್ತ್ರಿ, ಆಶಿಯ ಹಾಗೂ ಧನುಷ್ ಸೇರಿ ನಾಲ್ಕು ಜನಕ್ಕೆ ಅವಕಾಶ ಸಿಗುತ್ತೆ. ಗೇಮ್ ವಿನ್ನ ಆಗಿ ಅವಕಾಶ ಪಡೆದುಕೊಂಡಂತಹ ಈ ನಾಲ್ಕು ಜನರಿಗೆ ಬಿಗ್ ಬಾಸ್ ಇನ್ನೊಂದು ಅವಕಾಶವನ್ನ ಕೊಡುತ್ತಾರೆ. ಅದೇನೆಂದರೆ ಬಿಗ್ ಬಾಸ್ ಮನೆಯಲ್ಲಿ ನಾಮಿನೇಟ್ ಆಗಿದ್ದಂತಹ ಬೇರೆ ಕಂಟೆಸ್ಟೆಂಟ್ಗಳ 50% ವೋಟ್ ಅನ್ನ ತಮಗೆ ಪಡೆದುಕೊಂಡು , ತಮ್ಮ ವೋಟನ್ನು ಹೆಚ್ಚಿಸಿಕೊಂಡು, ಈ ವಾರದ ಎಲಿಮಿನೇಷನ್ ನಿಂದ ಪಾರಾಗುವ ಅವಕಾಶ. 

Bigg Boss

               ಈ ಸಮಯದಲ್ಲಿ ಧನುಷ್ ತೆಗೆದುಕೊಂಡ ಹೆಸರೇ ತಾಂಡವ್ ರಾಮ್, ಅಭಿಮಾನಿಗಳು ಪ್ರೀತಿಯಿಂದ ತಮ್ಮ ನೆಚ್ಚಿನ ಕಂಟೆಸ್ಟೆಂಟಾದ ತಾಂಡವ ರಾಮ್ ನನ್ನು ಬಿಗ್ ಬಾಸ್ ಮನೆಯಲ್ಲೇ ಉಳಿಸಿಕೊಳ್ಳಲು ವೋಟ್ ಹಾಕಿದ್ರು. ಅದರ 50%. ವೋಟ್ ಧನುಷ್ ನ ಪಾಲಾಗುತ್ತೆ. ತಾಂಡವ್ ವೋಟನ್ನು ಪಡೆದುಕೊಂಡ ಧನುಷ್ ನೀಡಿದ ಕಾರಣ ಏನಂದ್ರೆ. ತಾಂಡವ್ ರಾಮ್ ಗೆ ಹೊರಗೆ ಸಿಕ್ಕಾಪಟ್ಟೆ ಫ್ಯಾನ್ಸ್ ಇರ್ತಾರೆ. ಅಷ್ಟೇ ಅಲ್ಲದೆ ಅವರು ಸಿಕ್ಕಾಪಟ್ಟೆ ಫೇಮಸ್ ಇದ್ದಾರೆ. ಬಿಗ್ ಬಾಸ್ ಮನೆಯ ಒಳಗೆ ಕೂಡ ಅವರು ಸಿಕ್ಕಾಪಟ್ಟೆ ಚೆನ್ನಾಗಿ ಗೇಮ್ ಆಡ್ತಾ ಇದ್ದಾರೆ. ಈ ಮನೆಯಲ್ಲಿರುವ ಸ್ಟ್ರಾಂಗ್ ಕಂಟೆಸ್ಟೆಂಟ್ ಕೂಡ ಹೌದು. ಹಾಗಾಗಿ ಅವರಿಗೆ ಹೊರಗಡೆ ಚೆನ್ನಾಗಿ ವೋಟ್ ಬಂದಿರುತ್ತೆ. ನಾನು ಅವರ ಬಳಿಯಿಂದ 50% ವೋಟ್ ತೆಗೆದುಕೊಂಡರೆ. ಅವರಿಗೆ ಯಾವುದೇ ರೀತಿಯ ತೊಂದರೆ ಆಗೋದಿಲ್ಲ ಅಂತ ನನಗೆ ಗೊತ್ತು. ಹಾಗಾಗಿ ನಾನು ತಾಂಡವ್ ರಾಮ್ ಅವರ ವೋಟನ್ನ ನಾನು ವಾರದ ಎಲಿಮಿನೇಷನ್ ಇಂದ ಪಾರಾಗಲು ತೆಗೆದುಕೊಳ್ತೀನಿ ಅಂತ ಹೇಳುತ್ತಾರೆ. ಸೌಂದರ್ಯ ಮಾಡಿದ ಎಡವಟ್ಟಿನಿಂದ ಮೊದಲೇ ಬೇಸರಗೊಂಡಿದ್ದ ತಾಂಡವ ರಾಮ್ ಗೆ ಇನ್ನಷ್ಟು ನೋವು ನೀಡುತ್ತೆ. 

ಸೌಂದರ್ಯ ಮಾಡಿದ ಎಡವಟ್ಟೇನು..!? Bigg Boss

Bigg Boss

      ಬಿಗ್ ಬಾಸ್ ಗುಲಾಬಿ ಹೂವು ನೀಡುವ ಗೇಮ್ ಒಂದನ್ನು ಇಟ್ಟಿದ್ದರು. ಈ ಆಟ ಹೇಗಿತೆಂದರೆ ಆಟ ಆಡಲು ಸೆಲೆಕ್ಟ್ ಆಗಿದ್ದಂತಹ ಪುರುಷ ಅಭ್ಯರ್ಥಿಗಳು, ತಾಂಡವ್ ರಾಮ್, ಗಗನ್ ಚಿನ್ನಪ್ಪ, ಯಶ್ವಂತ್ , ಲಿಖಿತ್ ಗೋಂದಿ, ಅವಿನಾಶ್ ಹಾಗೂ ಜಗದೀಶ್ ಕೈಗೆ ಬಿಗ್ ಬಾಸ್ ಒಂದೊಂದು ಗುಲಾಬಿ ಹೂವು ಕೊಟ್ಟಿದ್ದರು. ಈ ಆಟ ಆಡಲು ಆಯ್ಕೆ ಆದಂತಹ ಮಹಿಳಾ ಸ್ಪರ್ಧಿಗಳು ವೈಷ್ಣವಿ ಗೌಡ, ಆಸಿಯ ಹಾಗೂ ಸೌಂದರ್ಯ ಶೆಟ್ಟಿ ಈ ಮೂರು ಜನರು. ಬಿಗ್ ಬಾಸ್ ಮುಂದೆ ನೀಡುವ ಟಾಸ್ಕ್ ಒಂದಕ್ಕೆ ತಮ್ಮ ಜೊತೆ ಆಡಲು ಒಬ್ಬ ಪುರುಷ ಸದಸ್ಯ ನನ್ನ ಆಯ್ಕೆ ಮಾಡಿ, ಅವರ ಬಳಿ ಇದ್ದ ಗುಲಾಬಿ ಹೂವನ್ನ ಪಡೆದುಕೊಳ್ಳಬೇಕು. ಅದೇ ರೀತಿ ಈ ಆಟದಿಂದ ತಾವು ಯಾರನ್ನು ಹೊರಗಿಡುತ್ತೀರಾ ಎಂದು ಸೂಚಿಸಿ ಅವರ ಗುಲಾಬಿ ಹೂವನ್ನ ಕತ್ತರಿಯಿಂದ ಕತ್ತರಿಸಬೇಕಿತ್ತು. ಇಲ್ಲೇ ಸೌಂದರ್ಯ ತೆಗೆದುಕೊಂಡ ಒಂದು ದೊಡ್ಡ ನಿರ್ಧಾರ ತಾಂಡವ ರಾಮ್ ನ ಮುಂದಿನ ಆಟಕ್ಕೆ ತೊಂದರೆ ಆಗುತ್ತೆ. ಆಕೆ ಅಲ್ಲಿ ಏನು ಮಾಡಿದ್ರು ಅಂತ ಅಂದ್ರೆ, ಯಶ್ವಂತ್ನ ಗುಲಾಬಿ ಹೂವನ್ನು ಪಡೆದುಕೊಂಡು ನಾನು ಯಶ್ವಂತ್ ಜೊತೆ ಈ ಆಟವನ್ನು ಆಡಲು ಬಯಸುತ್ತೇನೆ ಎಂದು ಹೇಳುತ್ತಾಳೆ. ಅದೇ ರೀತಿ ನಾನು ಈ ಆಟದಿಂದ ಹೊರಗಿಡಲು ಬಯಸುವ ಕಂಟೆಸ್ಟೆಂಟ್ ಅಂದ್ರೆ ಅದು ತಾಂಡವ್ ರಾಮ್. ಯಾಕೆ ನಾನು ಅವರನ್ನು ಆಟದಿಂದ ಹೊರಗಿಡಲು ಬಯಸುತ್ತೇನೆ ಅಂತ ಅಂದ್ರೆ ಅವರು ತುಂಬಾ ಸ್ಟ್ರಾಂಗ್ ಆದ ಕಂಟೆಸ್ಟೆಂಟ್. ನೂರು ಜನ ಬಂದ್ರು ಕೂಡ ಅವರು ಎತ್ತಿ ಬಿಸಾಡ್ತಾರೆ. ಅಷ್ಟು ತಾಕತ್ತು ಅವರಲ್ಲಿದೆ. ಒಂದು ವೇಳೆ ನಾನು ಅವರನ್ನು ಆಟದಿಂದ ಹೊರಗಿಟ್ಟರೆ ಉಳಿದ ಅಷ್ಟೊಂದು ಸ್ಟ್ರಾಂಗ್ ಇಲ್ಲದ ಕಂಟೆಸ್ಟೆಂಟ್ ಗಳಿಗೆ ಸಹಾಯವಾಗುತ್ತದೆ ಎಂಬ ಕಾರಣ ನೀಡಿ ತಾಂಡವ್ ರಾಮ್ ಬಳಿ ಇದ್ದ ಗುಲಾಬಿ ಹೂವನ್ನು ಕತ್ತರಿಸುತ್ತಾಳೆ. ಇಲ್ಲಿ ತಾಂಡವ್ ರಾಮ್ ನ ಬ್ಯಾಡ್ ಲಕ್ ಶುರುವಾಗಿತ್ತು ಅಂದರೆ ತಪ್ಪಾಗಲ್ಲ. 

ತಾಂಡವ್ ಬಳಿ ಕ್ಷಮೆ ಕೇಳಿದ ಸೌಂದರ್ಯ..!Bigg Boss

Bigg Boss

ಗುಲಾಬಿ ಹೂವನ್ನು ಕತ್ತರಿಸಿ ತಾಂಡವ ರಾಮ್ ನನ್ನ ಆಟದಿಂದ ಹೊರಗಿಟ್ಟ ಬಳಿಕ. ತಾಂಡವ್ ತನ್ನ ಗೆಳೆಯನಾದ ಗಗನ್ ಬಳಿ ತುಂಬಾ ಬೇಸರದಿಂದ ಅವಳು ನನ್ನನ್ನ ಅವಳ ಜೊತೆ ಆಡಲು ಆಯ್ಕೆ ಮಾಡದಿದ್ದರೆ ಬೇಜಾರಿಲ್ಲ. ಆದರೆ ಸ್ಟ್ರಾಂಗ್ ಎನ್ನುವ ಕಾರಣ ನೀಡಿ ನನ್ನನ್ನ ಆಟದಿಂದ ಹೊರಗೆ ಇಟ್ಟಿದ್ದು ಸಿಕ್ಕಾಪಟ್ಟೆ ಬೇಜಾರ್ ಆಗ್ತಾ ಇದೆ ಅಂತ ಹೇಳ್ತಾನೆ. ಆಟ ಎಲ್ಲ ಮುಗಿದ ಮೇಲೆ ಸೌಂದರ್ಯ ಬಂದು ತಾಂಡವ್ ರಾಮ್ ಬಳಿ. ನಿಮ್ಮನ್ನ ಆಟದಿಂದ ಹೊರಗೆ ಇಟ್ಟದ್ದು ನಿಮಗೆ ಬೇಜಾರಾಯ್ತಾ ಅಂತ ಕೇಳ್ತಾಳೆ..! ಅದಕ್ಕೆ ತಾಂಡವ್ ರಾಮ್ ಹೌದು ಎನ್ನುತ್ತಾನೆ. ಆಗ ಸೌಂದರ್ಯ ನಿಮಗೆ ಬೇಜಾರಾಗಿದ್ದರೆ ಸಾರಿ..! ನಾನು ಯಾವ ರೀತಿ ಯೋಚಿಸಿದೆ ಅಂತ ಅಂದ್ರೆ ನಾನು ನನ್ನ ಜೊತೆ ಆಡಲು ಸೆಲೆಕ್ಟ್ ಮಾಡಿದಂತಹ ಕಂಟೆಸ್ಟೆಂಟ್ ಗೆ ಆಪೋಸಿಟ್ ಆಗಿ ಸ್ಟ್ರಾಂಗ್ ಯಾರಿದ್ದಾರೆ ಅಂತ ನೋಡಿದೆ.. ಆಗ ನೀವು ಸ್ಟ್ರಾಂಗ್ ಅಂತ ನನಗೆ ಗೊತ್ತಿತ್ತು ನನ್ನ ಆಟಕ್ಕೆ ತೊಂದರೆ ಆಗಬಾರದು ಅಂತ ನಾನು ನಿಮ್ಮನ್ನ ಆಟದಿಂದ ಹೊರಗಿಟ್ಟೆ. ಇನ್ನೊಂದು ಸಲಿ ನಾನು ನಿಮ್ಮನ್ನ ಸ್ಟ್ರಾಂಗ್ ಅಂತ ಯಾವತ್ತೂ ಕೂಡ ಆಟದಿಂದ ಹೊರಗಿಡಲ್ಲ ಅಂತ ಸಾರಿ ಕೇಳ್ತಾಳೆ. 

Bigg Boss

ಅಂತು ಇಂತು ಬಿಗ್ ಬಾಸ್ ಮನೆಯಿಂದ ತಾಂಡವ ರಾಮ್ ಅವರೇ ಮಿಡ್ ಡೇ ಎಲಿಮಿನೇಷನ್ ಮೂಲಕ ಮನೆಯಿಂದ ಹೊರಗೆ ಹೋಗ್ತಾರೆ. ಆದ್ರೆ ಹೆಚ್ಚಿನ ಬಿಗ್ ಬಾಸ್ ಅಭಿಮಾನಿಗಳಿಗೆ ಸ್ಟ್ರಾಂಗ್ ಆಗಿ ನಂಬಿಕೆ ಇದ್ದದ್ದೇ. ತಾಂಡವ್ ರಾಮ್ ಒಬ್ಬ ಸ್ಟ್ರಾಂಗ್ ಕಂಟೆಸ್ಟೆಂಟ್ ಅವರಿಷ್ಟು ಬೇಗ ಈ ಮನೆಯಿಂದ ಹೋಗಲು ಸಾಧ್ಯವೇ ಇಲ್ಲ. ಅವರನ್ನ ಸೀಕ್ರೆಟ್ ರೂಮಲ್ಲಿ ಇರಿಸಿದ್ದಾರೆ, ಖಂಡಿತವಾಗ್ಲೂ ಅವರು ಬಂದೇ ಬರ್ತಾರೆ ಅಂತ ಭರವಸೆಯಲ್ಲಿದ್ದರು. ಇದು ನಿಜವಾಗುವ ಸಮಯ ಬಂದೇ ಬಿಟ್ಟಿದೆ. ಯಾಕಂದ್ರೆ ಬಿಗ್ ಬಾಸ್ ವಾರದ ಕಥೆ ಕಿಚ್ಚನ ಜೊತೆ ಪ್ರಮೋದಲ್ಲಿ ಸುದೀಪ್ ಅವರು ಒಂದು ಮಾತನ್ನ ಹೇಳ್ತಾರೆ. ತಾಂಡವ ರಾಮ್ ನನ್ನ ಗಡಿಯಾರಕ್ಕೆ ಹೋಲಿಸಿ ನಿಂತಿ ಹೋಗಿರೋ ಗಡಿಯಾರಕ್ಕೆ ಮತ್ತೆ ಜೀವ ಬರುತ್ತಾ..! ಅನ್ನುವ ರೀತಿ ಮಾತನಾಡಿ ಬಿಗ್ ಬಾಸ್ ಅಭಿಮಾನಿಗಳಿಗೆ ತಾಂಡವ್ ರಾಮ್ ಮತ್ತೆ ಬರಬಹುದು ಅನ್ನುವಂತಹ ಹಿಂಟ್ ಕೊಟ್ಟಿದ್ದಾರೆ..! 

1 thought on “ಫಿಕ್ಸ್ ಆಯ್ತು ತಾಂಡವ್ ರೀ ಎಂಟ್ರಿ ಸೂಚನೆ ಕೊಟ್ರು ಸುದೀಪ್…!”

Leave a Comment