ಸದ್ಯಕ್ಕೆ ಕನ್ನಡ ಬಿಗ್ ಬಾಸ್ ಸೀಸನ್ 13 (Big Boss13) ಶುರುವಾಗಿದೆ.. ಈ ಮನೆಯಲ್ಲಿ ಸಿಕ್ಕಾಪಟ್ಟೆ ಕಿರಿಕ್ ಮಾಡೋರು ಅಂತ ಗುರ್ತಿಸಿಕೊಂಡಿದ್ದ ಈ ಕಾಮನ್ ಕೋಟದಿಂದ ಬಂದಿದ್ದಂತಹ ಸ್ಪರ್ಧಿಗಳು , ಅವರು ಬೇರೆ ಯಾರು ಅಲ್ಲ ಮಾಡರ್ನ್ ಮಹಾಕವಿ ಕವಿಮಂಜ, ಕಿರಣ್ ಶಾಸ್ತ್ರಿ, ಲಿಖಿತ್ ಹಾಗೂ ಧನುಷ್. ಸೆಲೆಬ್ರಿಟಿಗಳಿಗೆಲ್ಲ ಗುಂಪು ಮಾಡ್ತಾರೆ ಅಂತ ಹೇಳಿ ಇವರೇ ಗುಂಪು ಮಾಡಿಕೊಂಡು ಜೇನುಗೂಡು ತರ ಒಟ್ಟಿಗೆ ಇದ್ದಿದ್ರು.
ನಿಜವಾಗಲೂ ಇವರು ಮನೆಯಿಂದ ಹೊರಗೆ ಹೋಗಬೇಕಾ..! (Bigg Boss13)
ಈ ನಾಲ್ಕು ಜನರನ್ನು ಬಿಟ್ಟು ಉಳಿದವರೆಲ್ಲರೂ ಕೂಡ ಗುಡ್ ಬುಕ್ ತರ ಬಿಹೇವ್ ಮಾಡ್ತಾರೆ. ತಮ್ಮ ಒಂದು ಸೈಡ್ ಮಾತ್ರ ತೋರಿಸ್ತಿದ್ದಾರೆ ಅಂತ ಅನ್ಸುತ್ತೆ… ಎಲ್ಲರೂ ಕೂಡ ನೈಸಾಗಿ ಪೀಸ್ ಫುಲ್ ಆಗಿ ಆಟ ಆಡಿಕೊಂಡು ಹೋದರೆ ನಿಜವಾಗ್ಲೂ ಬಿಗ್ ಬಾಸ್ ನೋಡೋಕೆ ಮನಸಾಗುತ್ತಾ. ಎಲ್ಲಾ ಸೀಸನ್ ನಲ್ಲಿ ಕೂಡ ಈ ತರಹದ ಒಂದೊಂದು ಕ್ಯಾರೆಕ್ಟರ್ ಇದ್ದೇ ಇರುತ್ತಿತ್ತು, ಕಳೆದ ಸೀಸನ್ನಲ್ಲಿ ಬಂದಂತಹ ಕೆಲವೊಂದು ಕಂಟೆಸ್ಟೆಂಟ್ಗಳ ಎದುರಿಗೆ ಇವರು ಏನು ಅಲ್ಲ ಅನ್ಸುತ್ತೆ, ಆದರೆ ಅವರೆಲ್ಲ ಸೆಲೆಬ್ರಿಟಿ ಆಗಿದ್ದರು. ಆದ್ರೆ ಹಿಂದಿನ ಸೀಸನ್ ಗಳಲ್ಲಿ ಒಂದು ಗಮನ ಮಾಡಬೇಕಾದ ಅಂಶ ಅಂತ ಅಂದ್ರೆ , ಒಬ್ಬರು ವಿಲ್ಲನ್ ಆದ್ರೆ ಮಾತ್ರ ಅಲ್ಲಿ ಇನ್ನೊಬ್ಬರು ಹೀರೋ ತರ ಕಾಣಿಸ್ತಾ ಇದ್ದರು. ಅವರು ಕೆಟ್ಟದಾಗಿ ನಡೆದುಕೊಂಡಕ್ಕೆ ಇನ್ನೊಬ್ಬರು ಹೈಲೈಟ್ ಆಗಿದ್ರು ಬೆಸ್ಟ್ ಎಕ್ಸಾಂಪಲ್ ಅಂತ ಅಂದ್ರೆ, ವಿನಯ್ ಗೌಡ ಇಂದ ಡ್ರೋನ್ ಪ್ರತಾಪ್ ಹೈಲೈಟ್ ಆಗಿದ್ದರು, ಕಳೆದ ಸೀಸನ್ ನಲ್ಲಿ ಅಶ್ವಿನಿ ಗೌಡ ಹಾಗೂ ಜಾನವಿಯಿಂದ ರಕ್ಷಿತಾ ಹಾಗೂ ಗಿಲ್ಲಿ ಹೈಲೈಟ್ ಆಗಿದ್ರು, ಆದ್ರೆ ಈ ಬಾರಿಯ ಸೀಸನ್ ನಲ್ಲಿ ವಿರನ್ ತರ ಬಿಹೇವ್ ಮಾಡುವವರು ಇದ್ದಾರೆ, ಆದರೆ ಇಲ್ಲಿ ಯಾರು ಕೂಡ ಹೀರೋ ಅಥವಾ ಹೀರೋಯಿನ್ ಆಗ್ತಾನೆ ಇಲ್ಲ. ಎಲ್ಲರೂ ಕೂಡ ಒಂದೇ ತರ ಬಿಹೇವ್ ಮಾಡ್ತಾ ಇದ್ದಾರೆ. ಯಾರನ್ನ ಸಪೋರ್ಟ್ ಮಾಡಬೇಕು ಬಿಡಬೇಕು ಅಂತ ಕೂಡ ಕನ್ಫ್ಯೂಷನ್ ಆಗ್ತಾ ಇದೆ ಬಿಗ್ ಬಾಸ್ ಅಭಿಮಾನಿಗಳಿಗೆ.

ಈ ಬಾರಿಯ ಸೀಸನ್‌ನಲ್ಲಿ ‘ಅಗ್ನಿಪರೀಕ್ಷೆ’ ಎಂಬ ವಿಶೇಷ ಆಯ್ಕೆ ಪ್ರಕ್ರಿಯೆಯ ಮೂಲಕ ಕಾಮನ್ ಮ್ಯಾನ್ಗಳನ್ನು ಕರೆಸಲಾಗಿತ್ತು. ಈ ಕೋಟಾದಲ್ಲಿ ಮನೆಗೆ ಎಂಟ್ರಿ ಕೊಟ್ಟಿದ್ದ ಮಂಜು, ಕಿರಣ್, ಧನುಷ್ ಹಾಗೂ ಲಿಖಿತ್ ಎಂಬ ನಾಲ್ವರು ಕಾಮನ್ ಕೋಟದಿಂದ ಬಂದಂತಹ ಸ್ಪರ್ಧಿಗಳು. ಇವರ ನಡೆ-ನುಡಿ ಪ್ರೇಕ್ಷಕರ ತಾಳ್ಮೆ ಕೆರಳಿಸಿದೆ, ಇವರನ್ನು ಮನೆಗೆ ಕಳಿಸಿ ಅಂತ ಒಂದಷ್ಟು ಕನ್ನಡ ಬಿಗ್ ಬಾಸ್ ಅಭಿಮಾನಿಗಳು ಅಂದುಕೊಂಡರೆ ಮತ್ತೊಂದುಷ್ಟು ಮಂದಿ ಇವರಿಂದಲೇ ಎಂಟರ್ಟೈನ್ಮೆಂಟ್ ಸಿಕ್ತಾ ಇದೆ, ಈ ಬಾರಿಯ ಬಿಗ್ ಬಾಸ್ ಸ್ವಲ್ಪ ಆದರೂ ನೋಡಬಹುದೇ ಎಂದರೆ ಅದು ಮಾರ್ಡೆನ್ ಕವಿ ಮಂಜು, ಕಿರಣ್ ಶಾಸ್ತ್ರಿ, ಧನುಷ್ ಹಾಗೂ ಲಿಖಿತ್ ಇವರಿಂದನೇ ಸ್ವಲ್ಪಮಟ್ಟಿಗೆ ಎಂಟರ್ಟೈನ್ಮೆಂಟ್ ಸಿಗುತ್ತಿದೆ ಎಂದು ಕೂಡ ಹೇಳುತ್ತಿದ್ದಾರೆ ಬಿಗ್ ಬಾಸ್ ಅಭಿಮಾನಿಗಳು.
ಕಾಮನರ್ಸ್‌ಗಳ ಈ ಅತಿಯಾದ ವರ್ತನೆಯಿಂದ ತೀವ್ರ ಬೇಸತ್ತ ಸುದೀಪ್ (Bigg Boss13)
=
ಅಗ್ನಿ ಪರೀಕ್ಷೆಯ ಮೂಲಕ ಬಂದ ಮಾರ್ಡೆನ್ ಕವಿ ಮಂಜ, ಕಿರಣ್ ಶಾಸ್ತ್ರಿ, ಲಿಖಿತ್ ಹಾಗೂ ಧನುಷ್ಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ ಈ ವಾರದ ವೀಕೆಂಡ್ ಶೋನಲ್ಲಿ ಕಿಚ್ಚ ಸುದೀಪ್. ನಿಮಗೆಲ್ಲಾ ಹೆಲ್ಪ್ ಆಗ್ಲಿ ಅಂತ ಅಗ್ನಿಪರೀಕ್ಷೆ ಅಂತ ಒಂದು ಕಾನ್ಸೆಪ್ಟ್ ಇತ್ತು ಕಾಮನ್ ಜನರಿಗೆ ಕೂಡ ಅವಕಾಶ ಸಿಗಲಿ ಅಂತ ನಿಮ್ಮನ್ನ ಕರೆಸಿಕೊಂಡರೆ ನೀವು ಈರೀತಿಯಾಗಿ ಬಿಗ್ ಬಾಸ್ ರೂಲ್ಸ್ ಗಳನ್ನ ಬ್ರೇಕ್ ಮಾಡಿ ಬೇಕಾಬಿಟ್ಟಿ ಬಿಹೇವ್ ಮಾಡ್ತಿದ್ದೀರಾ ಬಿಗ್ ಬಾಸ್ ವೇದಿಕೆಗೆ ಗೌರವ ಕೊಡುತ್ತಿಲ್ಲ ಅಂದಮೇಲೆ. ಮುಂದಿನ ಬಾರಿಯಿಂದ ಈ ಒಂದು ಕಾಮನ್ ಮ್ಯಾನ್ ಕೋಟವನ್ನ ತೆಗೆದು ಹಾಕಬೇಕು. ಒಂದು ವೇಳೆ ಕಾಮನ್ ಮ್ಯಾನ್ ಕೋಟವನ್ನು ತೆಗೆದು ಹಾಕಿದರೆ ಅದಕ್ಕೆ ನೇರ ಕಾರಣ ನೀವೇ ನಾಲ್ಕು ಜನ ನೆನಪಿಟ್ಟುಕೊಳ್ಳಿ ಅಂತ ಬಿಗ್ ಬಾಸ್ ಕನ್ನಡ ಹೋಸ್ಟ್ ಕಿಚ್ಚ ಸುದೀಪ್ ಅಗ್ನಿಪರೀಕ್ಷೆಯಿಂದ ಬಂದಂತಹ ಸ್ಪರ್ಧಿಗಳಿಗೆ ಖಡಕ್ಕಾಗಿ ಎಚ್ಚರ ಕೊಟ್ಟಿದ್ದಾರೆ.
ಫೇಕ್ ಎಲಿಮಿನೇಷನ್ ಮೂಲಕ ಪಾಠ ಕಲಿಸಿದ ಬಿಗ್ ಬಾಸ್ (Bigg Boss13)

ಮಾಡ್ರನ್ ಮಹಾ ಕವಿ ಮಂಜ ಹಾಗೂ ಕಿರಣ್ ಶಾಸ್ತ್ರಿಕ್ಕೆ ಪಾಠ ಕಲಿಸುವುದಕ್ಕಾಗಿ ವಾರದ ಕೊನೆಯಲ್ಲಿ ಫೇಕ್ ಡಬ್ಬಲ್ ಎಲಿಮಿನೇಷನ್ ಇಟ್ಟು ಕನ್ನಡಿ ನೋಡಿಕೊಂಡು ನಿಮ್ಮ ಬಗ್ಗೆ ನೀವು ಮಾತನಾಡಿಕೊಳ್ಳಿ ಎಂದು ಒಂದು ಕಾನ್ಸೆಪ್ಟ್ ಇಟ್ಟು ಇಬ್ಬರನ್ನು ಕೂಡ ಎಲಿಮಿನೇಟ್ ಮಾಡಿ ಹೊರಗೆ ಹಾಕುವ ಹಾಗೆ ಫೇಕ್ ಡಬಲ್ ಎಲಿಮಿನೇಷನ್ ಮಾಡಿದ್ದರು. ತನ್ನ ಕುಚಿಕು ಗೆಳೆಯನಾದ ಮಾಡರ್ನ್ ಮಹಾಕವಿ ಮಂಜ ಎಲಿಮಿನೇಟ್ ಆದದ್ದನ್ನು ನೋಡಿ ಲಿಖಿತ್ ಗೊಳೋ ಅಂತ ಅತ್ತು ಬಿಟ್ಟಿದ್ದರು. ಮಂಜ ಕೂಡ ಹೋಗುವಾಗ ಲಿಖಿತ್ ನೀನೇ ಗೆದ್ದು ಬರಬೇಕು ಅಂತ ಹೇಳಿ ಮನೆಯಿಂದ ಯಾರಿಗೂ ವಿದಾಯ ಹೇಳದೆ ಹೊರಟು ಹೋಗಿದ್ದರು. ನಂತರ ಇಬ್ಬರನ್ನು ಮತ್ತೆ ಮನೆಗೆ ವಾಪಸ್ ಕರೆ ತಂದಿದ್ದಾರೆ. ಈ ವಾರದ ಮೊದಲ ದಿನವೇ ಅಗ್ನಿಪರೀಕ್ಷೆಯಲ್ಲಿ ಬಂದಂತಹ ಮಂಜು ಕಿರಣ್ ಶಾಸ್ತ್ರಿ ಹಾಗೂ ಧನುಷ್ ನಡುವೆ ವೈ ಮನಸು ಉಂಟಾಗಿ ಮೂವರು ಕೂಡ ಸರಿಯಾಗಿ ಜಗಳ ಆಡಿಕೊಂಡಿದ್ದಾರೆ. ಇನ್ನಾದರೂ ತಿದ್ದುಕೊಳ್ಳಲಿ ಅಂತ ಮಾಡ್ರನ್ ಕವಿ ಮಂಜ ಹಾಗೂ ಕಿರಣ್ ಶಾಸ್ತ್ರಿಕ್ಕೆ ಹೊಸ ಒಂದು ಅವಕಾಶ ಕೊಟ್ಟರು. ಇನ್ನು ಮೇಲಿಂದ ಹಾಗೆ ಮಾಡಲ್ಲ ನನ್ನನ್ನು ನಾನು ಕಂಟ್ರೋಲ್ ನಲ್ಲಿ ಇಟ್ಟುಕೊಳ್ಳುತ್ತೇನೆ ಅಂತ ಮಾಡ್ರನ್ ಕವಿ ಮಂಜ ಹಾಗೂ ಕಿರಣ್ ಶಾಸ್ತ್ರಿ ಒಳಗೆ ಬರುತ್ತಾರೆ. ಆದರೆ ಮನೆಯವರು ಸುಮ್ನಿರಬೇಕಾ ಮತ್ತೆ ಬಿಗ್ ಬಾಸ್ ಅವರು ಯಾರು ಈ ಮನೆಯಲ್ಲಿ ಅರ್ಹತೆ ಇಲ್ಲ ಅವರ ಹೆಸರು ಹೇಳಿ ಬಾಟಲನ್ನು ತುಳಿದು ಬಿಸಾಕಬೇಕು ಅಂತ ಹೇಳ್ತಾರೆ. ಈ ಸುತ್ತಿನಲ್ಲಿ ಮಾತ್ರ ಇಡೀ ಮನೆಯಲ್ಲಿನ ಹೆಚ್ಚಿನವರು ಮತ್ತೆ ಮಾರ್ಡೆನ್ ಕವಿ ಮಂಜನ ಹೆಸರನ್ನೇ ತೆಗೆದುಕೊಂಡು ಈ ಮನೆಯಲ್ಲಿ ಇರಲು ಅರ್ಹತೆ ಇಲ್ಲದವನು ಮಾರ್ಡೆನ್ ಕವಿ ಮಂಜ, ಇವರು ಯಾರಿಗೂ ಕೂಡ ರೆಸ್ಪೆಕ್ಟ್ ಕೊಡಲ್ಲ ಬಾಯಿಗೆ ಬಂದಾಗ ಮಾತಾಡ್ತಾರೆ. ಇವರು ಈ ಶೋನಲ್ಲಿ ಇರಲು ಅರ್ಹತೆ ಇಲ್ಲ ಅಂತಾನೇ ಹೆಚ್ಚಿನವರು ಅದೇ ಒಪಿನಿಯನ್ ನೀಡಿ ಮತ್ತೆ ಮಾರ್ಡೆನ್ ಕವಿ ಮಂಜನ ಬಿಪಿ ಹೆಚ್ಚು ಮಾಡಿದ್ದಾರೆ. ಇದರ ಪರಿಣಾಮ ಮತ್ತೆ ಮಾರ್ಡೆನ್ ಕವಿ ಮಂಜ ಬಿಗ್ ಬಾಸ್ ಮನೆಯಲ್ಲಿ ರೌದ್ರಾವತಾರ ತಾಳುತ್ತಾನೆ ಅಂತ ಬಿಗ್ ಬಾಸ್ ಅಭಿಮಾನಿಗಳು ಹೇಳ್ತಾ ಇದ್ದಾರೆ. ಈ ವಾರದಲ್ಲಿ ಮತ್ತೆ ಮಾರ್ಡೆನ್ ಕವಿ ಮಂಜ ಹಳೆಯ ಮಂಜನ ಹಾಗೆ ಬಿಹೇವ್ ಮಾಡಿದರೆ ಹೊರಗೆ ಹೋಗುವುದಂತೂ ಕಂಫಾರ್ಮ್. ಒಂದು ಲೆಕ್ಕದಲ್ಲಿ ಇವರ ಫ್ರೆಂಡ್ಶಿಪ್ ಕಟ್ಟಾಗಿದೆ ಅನ್ನೋ ಹಾಗೆ ಕಾಣಿಸ್ತಾ ಇದೆ ಮುಂದಿನ ದಿನಗಳಲ್ಲಿ ಇವರು ಹೇಗೆ ಆಟ ಆಡ್ತಾರೆ ಅಂತ ನೋಡಬೇಕಾಗಿದೆ.
2 thoughts on “ಬಿಗ್ ಬಾಸ್ ಮನೆಯಲ್ಲಿ ಈ ನಾಲ್ಕು ಕಾಮನ್ ಮ್ಯಾನ್ ಇಲ್ದಿದ್ರೆ…!”