ಬಿಗ್ ಬಾಸ್ (Bigg Boss) ಮನೆಯಲ್ಲಿ ಮತ್ತೊಂದು ವಿಕೆಟ್ ಔಟ್. ಹೌದು ಅದು ಬೇರೆ ಯಾರು ಅಲ್ಲ ತಾಂಡವ್ ರಾಮ್. ಬಿಗ್ ಬಾಸ್ ಮನೆಯಿಂದ ಒಬ್ಬರಲ್ಲ ಒಬ್ಬರು ಹೊರಗೆ ಹೋಗೋದು ಕಾಮನ್. ಆದರೆ ಬೇಸರದ ಸಂಗತಿ ಎಂದರೆ ಒಬ್ಬ ” ಸ್ಟ್ರಾಂಗ್ ” ಎನ್ನುವ ಕಾರಣಕ್ಕೆ ಮನೆಯಿಂದ ಹೊರಗೆ ಕಳಿಸಲ್ಪಟ್ಟ ಪ್ರಥಮ ವ್ಯಕ್ತಿ ಅಂದ್ರೆ ಅದು ತಾಂಡವ್ ರಾಮ್.
ತಾಂಡವ್ ರಾಮ್ ನನ್ನು ನೋಡಿದರೆ ಪಾಪ ಅನ್ಸುತ್ತೆ. ಯಾಕಂದ್ರೆ ವ್ಯಕ್ತಿತ್ವದ ವಿಷಯಕ್ಕೆ ಬಂದರೆ ತಾಂಡವ್ ರಾಮ್ ಸಿಕ್ಕಾಪಟ್ಟೆ ಪ್ಯೂರ್ ಕ್ಯಾರೆಕ್ಟರ್ ಇರುವಂತಹ ವ್ಯಕ್ತಿ. ಇನ್ನು ಆಟದ ವಿಷಯಕ್ಕೆ ಬಂದರೂ ಕೂಡ ತಾಂಡವ್ ಸಿಕ್ಕಾಪಟ್ಟೆ ಚೆನ್ನಾಗಿ ಆಟ ಆಡ್ತಾ ಇದ್ರು. ಆದ್ರೆ ಇಂದು ಆ ಒಂದು “ಮುಗ್ಧತೆ” ಹಾಗೂ ” ಸ್ಟ್ರಾಂಗ್ ” ಎಂಬ ಹಣೆಪಟ್ಟಿಯೇ ತಾಂಡವ ರಾಮ್ ಗೆ ಇಂದು ಮುಳುವಾಯಿತು…
ಸೌಂದರ್ಯ, ಧನುಷ್ ಎಡವಟ್ಟಿನಿಂದ ತಾಂಡವ ರಾಮ್ ಎಲಿಮಿನೇಟ್..! Bigg Boss

ಮೊದಲಿನಿಂದಲೂ ಕೂಡ ತಾಂಡವ್ ತುಂಬಾ ಚೆನ್ನಾಗಿ ಗೇಮ್ ಆಡ್ಕೊಂಡು ಬಂದಿದ್ರು. ಅಷ್ಟೇ ಅಲ್ಲದೆ ಮನೆಯಲ್ಲಿ ಎಲ್ಲರೊಂದಿಗೂ ಕೂಡ ತುಂಬಾ ಚೆನ್ನಾಗಿದ್ದರು. ಒಂದು ರೀತಿ ಹೇಳಬೇಕಾದರೆ ತಾಂಡವ ರಾಮ್ ಮುಗ್ಧ ಮನಸ್ಸಿನ ವ್ಯಕ್ತಿ. ಯಾರಿಗೂ ಕೂಡ ಅಷ್ಟೊಂದು ಹರ್ಟ್ ಆಗಿ ಮಾತಾಡಲ್ಲ. ಹೆಚ್ಚಾಗಿ ತಾನಾಯಿತು, ತನ್ನ ಗೆಳೆಯ ಗಗನ್ ಆಯ್ತು ಅಂತಾನೆ ಇರ್ತಿದ್ರು. ಅಷ್ಟೇ ಅಲ್ಲದೆ ಮನೆಯಲ್ಲಿರುವ ಎಲ್ಲರೊಂದಿಗೂ ಕೂಡ ಬೆರಿತಾ ಇದ್ದರು. ಗೇಮ್ ನಲ್ಲೂ ಕೂಡ ಸಿಕ್ಕಾಪಟ್ಟೆ ಸ್ಟ್ರಾಂಗ್ ಅಂತ ಅನಿಸಿಕೊಂಡಿದ್ದರು.
ಸ್ಟ್ರಾಂಗ್ ಎಂಬ ಕಾರಣಕ್ಕೆ ತಾಂಡವನನ್ನು ಗೇಮ್ ನಿಂದ ಹೊರಗಿಟ್ಟ ಸೌಂದರ್ಯ Bigg Boss
ಬಿಗ್ ಬಾಸ್ ಒಂದು ಗೇಮ್ ಇಟ್ಟಿದ್ದರು ಅದರಲ್ಲಿ ಗೇಮ್ ಆಡಬೇಕಾಗಿದ್ದ ಮೂರು ಮಹಿಳಾ ಸದಸ್ಯರು ಅಂದರೆ ಸೌಂದರ್ಯ ಶೆಟ್ಟಿ, ವೈಷ್ಣವಿ ಗೌಡ, ಆಶಿಯಾಗೆ ಬಿಗ್ ಬಾಸ್ ಒಂದು ಅವಕಾಶ ನೀಡುತ್ತಾರೆ. ಅದೇನೆಂದರೆ ಗೇಮ್ ನಲ್ಲಿ ಪಾರ್ಟಿಸಿಪೇಟ್ ಮಾಡುವಂತಹ ಮನೆಯ ಪುರುಷ ಸದಸ್ಯರು, ಅಂದರೆ ಯಶ್ವಂತ್, ಗಗನ್ ಚಿನ್ನಪ್ಪ, ಲಿಖಿತ್, ತಾಂಡವ್ ರಾಮ್, ಜಗದೀಶ್ ಹಾಗೂ ಅವಿನಾಶ್ ಬಳಿ ಒಂದೊಂದು ಗುಲಾಬಿ ಹೂವನ್ನ ಕೊಟ್ಟಿರುತ್ತಾರೆ. ಸೌಂದರ್ಯ ಶೆಟ್ಟಿ, ವೈಷ್ಣವಿ ಗೌಡ, ಆಶಿಯಾ ತಮ್ಮ ಜೊತೆ ಆಡಲು ಸೂಕ್ತವಾದ ಒಬ್ಬ ಪುರುಷ ಪಟ್ಟಿಯನ್ನು ಆಯ್ಕೆ ಮಾಡುವಂತಹ ಸಂದರ್ಭ ಇರುತ್ತೆ.
ಹೇಗೆ ಆಯ್ಕೆ ಮಾಡಬೇಕು ಅಂತ ಅಂದ್ರೆ , ಯಾರ ಜೊತೆ ನಿಮಗೆ ಆಟ ಆಡಬೇಕು ಅಂತ ಅನಿಸುತ್ತದೊ , ಅವನ ಬಳಿ ಇದ್ದಂತಹ ಗುಲಾಬಿ ಹೂವನ್ನ ತೆಗೆದುಕೊಳ್ಳಬೇಕು. ಈ ಮೂಲಕ ನಾನು ನಿನ್ನ ಜೊತೆ ಆಟ ಆಡಲು ಬಯಸ್ತೀನಿ ಅಂತ ಸೂಚಿಸಬೇಕು. ಹಾಗೂ ಈ ಆಟದಿಂದ ಹೊರಗೆ ಇಡಲು ಬಯಸುವ ಒಬ್ಬ ಕಂಟೆಸ್ಟೆಂಟ್ ನ ಗುಲಾಬಿ ಹೂವನ್ನ ಕತ್ತರಿ ಮೂಲಕ ಕತ್ತರಿಸಿ, ಸೂಕ್ತ ಕಾರಣ ನೀಡಿ ಅವರನ್ನ ಆಟದಿಂದ ಹೊರಗೆ ಇಡಬೇಕು ಎನ್ನುವಂತಹ ಟಾಸ್ಕ್ ನೀಡಿರುತ್ತಾರೆ.
ಈ ಆಟದಲ್ಲಿ ಮೊದಲ ಚಾನ್ಸ್ ಸೌಂದರ್ಯಳಿಗೆ ಸಿಗುತ್ತದೆ. ಆಕೆ ಯಶ್ವಂತ್ ನನ್ನು ತನ್ನ ಜೊತೆ ಆಟ ಆಡಲು ಆಯ್ಕೆ ಮಾಡಿ ಅವನಿಂದ ಗುಲಾಬಿ ಪಡೆದುಕೊಳ್ಳುತ್ತಾಳೆ, ಹಾಗೂ ತಾಂಡವ ರಾಮ್ ನನ್ನು ಅವರ ಬಳಿ ಇದ್ದ ಗುಲಾಬಿ ಹೂವನ್ನು ಕಟ್ ಮಾಡುವ ಮೂಲಕ ಈ ಆಟದಿಂದ ಹೊರಗೆ ಇಡಲು ಬಯಸುತ್ತಾಳೆ. ಈ ಸಮಯದಲ್ಲಿ ಆಕೆ, “ತಾಂಡವ್ ರಾಮ್ ನನ್ನ ಯಾಕೆ ಆಟದಿಂದ ಹೊರಗೆ ಇಡಲು ಬಯಸುತ್ತೇನೆ ಅಂತ ಅಂದ್ರೆ, ತಾಂಡವ ರಾಮ್ ಸಿಕ್ಕಾಪಟ್ಟೆ ಸ್ಟ್ರಾಂಗ್ ಇರುವಂತಹ ಕಂಟೆಸ್ಟೆಂಟ್. ನೂರು ಜನ ಬಂದ್ರು ಕೂಡ ಅವರನ್ನ ಎತ್ತಿ ಬಿಸಾಡುವಂತಹ ಶಕ್ತಿ ತಾಂಡವ್ ರಾಮ್ ಗೆ ಇದೆ. ಹಾಗಾಗಿ ಅವರನ್ನ ಆಟದಿಂದ ಹೊರಗಿಡುವುದರಿಂದ, ಸ್ಟ್ರಾಂಗ್ ಇಲ್ಲದವರಿಗೆ ಆಟ ಆಡಲು ಸಹಾಯ ಆಗುತ್ತದೆ ಅನ್ನೋ ಒಂದೇ ಒಂದು ಕಾರಣಕ್ಕೆ ನಾನು ತಾಂಡವ್ ರಾಮ್ ನನ್ನ ಆಟದಿಂದ ಹೊರಗೆ ಇಡಲು ಬಯಸುತ್ತೇನೆ” ಎಂದು ಕಾರಣ ನೀಡುತ್ತಾಳೆ.
ಅರ್ಧಕಷ್ಟು ತಾಂಡವ್ ರಾಮ್ ನ ಗೇಮ್ ಹಾಳಾಗಲು ಮೊದಲ ರೀಸನ್ ಇದಾಗುತ್ತೆ. ಇದರಿಂದ ತಾಂಡವ್ ರಾಮ್ ಸಿಕ್ಕಾಪಟ್ಟೆ ಬೇಜಾರಾಗಿರ್ತಾರೆ. ಈ ಬಗ್ಗೆ ಗಗನ್ ಬಳಿ ಕೂಡ ಹೇಳಿಕೊಂಡಿರುತ್ತಾರೆ. ನನಗೆ ಅವಳು ನನ್ನನ್ನು ಅವಳ ಜೊತೆ ಆಟ ಆಡಲು ಸೆಲೆಕ್ಟ್ ಮಾಡದಿದ್ದರೂ ಬೇಜಾರಾಗ್ತಾ ಇರಲಿಲ್ಲ. ಸ್ಟ್ರಾಂಗ್ ಇದ್ದೇನೆ ಅನ್ನೋ ಕಾರಣಕ್ಕೆ ನನ್ನನ್ನ ಆಟದಿಂದಲೇ ಹೊರಗೆ ಇಟ್ಳಲ್ವಾ, ಅದು ನನಗೆ ತುಂಬಾ ಬೇಜಾರಾಗ್ತಾ ಇರೋದು ಅಂತ ತನ್ನ ಬೇಸರವನ್ನು ತನ್ನ ಗೆಳೆಯನಾದ ಗಗನ್ ಬಳಿ ಹೇಳಿ ಹೊರಗೆ ಹಾಕಿದ್ದ.
ತಾಂಡವ್ ವಿಷಯದಲ್ಲಿ ಎಡವಟ್ ಮಾಡಿಬಿಟ್ನಾ ಧನುಷ್..! Bigg Boss

ಎರಡನೇ ಬಾರಿ ದೊಡ್ಡದಾಗಿ ತಾಂಡವ ರಾಮ್ನ ಗೇಮ್ ಗೆ ಇಂಪ್ಯಾಕ್ಟ್ ಮಾಡಿದ್ದೆ ಧನುಷ್ ತೆಗೆದುಕೊಂಡ ಆ ಒಂದು ನಿರ್ಧಾರ. ಗೇಮ್ ಗಳನ್ನ ಆಟ ಆಡಿ ಮಿಡ್ ಡೇ ಎಲಿಮಿನೇಷನ್ ನಿಂದ ಪಾರಾಗಿದ್ದ ನಾಲ್ಕು ಕಂಟೆಸ್ಟೆಂಟ್ಗಳಾದ ಕಾವ್ಯ, ಕಿರಣ್ ಶಾಸ್ತ್ರಿ, ಆಶಿಯ ಹಾಗೂ ಧನುಷ್ ಗೆ ಬಿಗ್ ಬಾಸ್ ವಾರದ ಎಲಿಮಿನೇಷನ್ ನಿಂದ ಪಾರಾಗಲು ಒಂದು ಅವಕಾಶವನ್ನ ಕೊಡ್ತಾರೆ. ಅದೇನೆಂದರೆ ಮನೆಯಲ್ಲಿರುವ ಯಾರಾದರೂ ಒಬ್ಬ ಸದಸ್ಯನ ಬಳಿ ಇರುವಂತಹ ವೋಟು, ಅಂದರೆ ಅವರ ಅಭಿಮಾನಿಗಳು ಜಿಯೋ ಹಾಟ್ ಸ್ಟಾರ್ ಆಪ್ (Jio hotstar app) ನ ಮೂಲಕ ನೀಡಿದಂತಹ 50% ವೋಟನ್ನು ತಮಗೆ ಪಡೆದುಕೊಳ್ಳುವಂತಹ ಅವಕಾಶ. ನಾಲ್ಕು ಮಂದಿಗೆ ಕೂಡ ಒಬ್ಬೊಬ್ಬರ ಓಟನ್ನ ಕಸಿದುಕೊಳ್ಳುವ ಅವಕಾಶವಿತ್ತು. ಕಾವ್ಯ ಜಗ್ಗಿಯ 50% ವೋಟನ್ನು ಪಡೆದುಕೊಂಡರೆ, ಆಶಿಯ ಲಿಖಿತ್ ನ ವೋಟನ್ನು ಪಡೆದುಕೊಳ್ಳುತ್ತಾಳೆ, ಧನುಷ್ ತಾಂಡವ ರಾಮ್ ನ 50% ವೋಟನ್ನು ಪಡೆದುಕೊಳ್ಳುತ್ತಾರೆ.
ತಾಂಡವ್ ವೋಟನ್ನು ಕಸಿದುಕೊಂಡ ಧನುಷ್ ನೀಡಿದ ಕಾರಣ ಏನಪ್ಪಾ ಅಂತ ಅಂದ್ರೆ. ತಾಂಡವ್ ರಾಮ್ ಅವರು ಈ ಮನೆಯಲ್ಲಿರುವಂತಹ ಸ್ಟ್ರಾಂಗ್ ಆದಂತಹ ಕಂಟೆಸ್ಟಂಟ್. ಎಲ್ಲರೊಂದಿಗೆ ಕೂಡ ಬೆರೆತು ಚೆನ್ನಾಗಿ ಆಟ ಆಡ್ತಾ ಇದ್ದಾರೆ. ಅಷ್ಟೇ ಅಲ್ಲದೆ ಅವರಿಗೆ ಹೊರಗೆ ಕೂಡ ಸಿಕ್ಕಾಪಟ್ಟೆ ಫ್ಯಾನ್ಸ್ ಇರ್ತಾರೆ. ಹಾಗಾಗಿ ಅವರಿಗೆ ಸಿಕ್ಕಾಪಟ್ಟೆ ವೋಟ್ ಬಂದಿರುತ್ತೆ, ಹಾಗಾಗಿ ನಾನು ಅವರ 50% ವೋಟ್ ಅನ್ನು ನಾನು ಪಡೆದುಕೊಳ್ಳುತ್ತೇನೆ. ಇದರಿಂದ ಅವರಿಗೆ ಯಾವುದೇ ರೀತಿಯ ನಷ್ಟ ಆಗಲ್ಲ, ಖಂಡಿತವಾಗಲೂ ಸೇಫ್ ಆಗ್ತಾರೆ ಅನ್ನೋ ನಂಬಿಕೆ ನನಗಿದೆ ಅಂತ ಹೇಳಿ. ತಾಂಡವ್ ರಾಮ್ ನ 50% ವೋಟನ್ನು ಪಡೆದುಕೊಳ್ಳುತ್ತಾರೆ. ಇದು ತಾಂಡವ ರಾಮ್ ಗೆ ದೊಡ್ಡ ಹಿನ್ನಡೆಯಾಗುತ್ತದೆ.
ಪ್ರೀತಿ ತೋರಿಸಿದ್ದೆ ತಪ್ಪಾಯ್ತಾ ಎಂದ ತಾಂಡವ್ ರಾಮ್ ..!? Bigg Boss

ಮನೆಯಿಂದ ಮಿಡ್ ಡೇ ಎಲಿಮಿನೇಷನ್ ಮೂಲಕ ಹೊರ ಹೋಗಲು ಆಯ್ಕೆಯಾದಂತಹ ಕಂಟೆಸ್ಟೆಂಟ್ ಗಳಿಗೆ, ಪಂಚ್ ಮಾಡುವ ಮೂಲಕ ಇಬ್ಬರು ಕಂಟೆಸ್ಟೆಂಟ್ಗಳನ್ನು ಆಯ್ಕೆ ಮಾಡಿ ಅವರಿಗೆ ಪಂಚ್ ಮಾಡುತ್ತಾ ತಮ್ಮ ನೋವು, ಕೋಪವನ್ನು ಹೊರಗೆ ಹಾಕುವ ಅವಕಾಶವನ್ನು ಬಿಗ್ ಬಾಸ್ ನೀಡ್ತಾರೆ. ತಾಂಡವ್ ರಾಮ್ ಅವರು ಮೊದಲು ಧನುಷ್ ನನ್ನ ಕರೆದು ಪಂಚ್ ಮಾಡುತ್ತಾ. ನಾನು ನಿನಗೆ ಬಂದಾಗಿನಿಂದ ಸಪೋರ್ಟ್ ಮಾಡಿದ್ದೆ ತಪ್ಪಾಯ್ತಾ..!? ತಮ್ಮನ ತರ ನಿನ್ನನ್ನ ಕೇರ್ ಮಾಡಿದ್ನಲ್ಲ ಅದೇ ನಾನು ಮಾಡಿದ ತಪ್ಪಾ..! ಎಲ್ಲಾ ವಿಷಯದಲ್ಲೂ ನಾ ನಿನ್ನ ಜೊತೆ ಬಂದು ನಿಂತೆ ಅದೇ ನಾನು ಮಾಡಿದ್ದ ತಪ್ಪಾ..! ಅಂತ ಹೇಳಿ ಧನುಷ್ ಫೋಟೋಗೆ ಪಂಚ್ ಮಾಡ್ತಾ ತಮ್ಮ ನೋವನ್ನು ಹೊರಗೆ ಹಾಕ್ತಾರೆ. ಇದೇ ರೀತಿ ಸೌಂದರ್ಯಾಗೆ ಕೂಡ ನಾನು ಸ್ಟ್ರಾಂಗ್ ಎನ್ನುವಂತಹ ಒಂದು ಕಾರಣದಿಂದ ನೀನು ನನ್ನನ್ನ ಗೇಮ್ ನಿಂದ ಹೊರಗೆ ಇಟ್ಟು ಈ ಪರಿಸ್ಥಿತಿಗೆ ತಂದು ಬಿಟ್ಟಿಯಲ್ಲ. ನೀನು ಫ್ಲೈಟ್ ನಲ್ಲಿ ಇರುವಾಗ ಕೂಡ ನೀನು ಮನೆ ಒಳಗೆ ಬರಬೇಕಂತ ನಾ ನಿನ್ನ ಹೆಸರನ್ನು ತೆಗೆದುಕೊಂಡೆ ಅದೇ ನಾನು ಮಾಡಿದ ತಪ್ಪಾ..! ನೀವು ನನಗೆ ಕಲ್ಲನ್ನೇ ಬಿಸಾಡಿದ್ರು ನಾ ನಿಮಗೆ ಹೂವನ್ನ ಬಿಸಾಡ್ತಿನಿ ಅಂತ ಹೇಳಿ ತಮ್ಮ ಬೇಸರವನ್ನ ಹೊರಗೆ ಹಾಕ್ತಾರೆ.
ತಾಂಡವ್ ಹೊರಗೆ ಹೋದದ್ದು ಅನ್ ಫೇರ್ ಡಿಸಿಷನ್ ಅಂತಿದ್ದಾರೆ ಬಿಗ್ ಬಾಸ್ ಅಭಿಮಾನಿಗಳು…Bigg Boss

ತಾಂಡವ್ ರಾಮ್ ಸಿಕ್ಕಾಪಟ್ಟೆ ಚೆನ್ನಾಗಿ ಬಿಗ್ ಬಾಸ್ ಮನೆಯಲ್ಲಿ ಆಟ ಆಡ್ತಾ ಇದ್ರು. ಅವರನ್ನ ಈ ರೀತಿ ಎಲಿಮಿನೇಟ್ ಮಾಡಿದ್ದು ಫೇರ್ ಗೇಮ್ ಅಲ್ಲ ಅಂತ ಬಿಗ್ ಬಾಸ್ ಅಭಿಮಾನಿಗಳು ಬೇಸರವನ್ನು ವ್ಯಕ್ತಪಡಿಸುತ್ತಿದ್ದಾರೆ. ತಾಂಡವ್ ತುಂಬಾ ಸ್ಟ್ರಾಂಗ್ ಕಂಟೆಸ್ಟೆಂಟ್, ಆದರೆ ಬಿಗ್ ಬಾಸ್ ಮನೆಯಲ್ಲಿ ತುಂಬಾ ಜನ ವೀಕ್ ಕಂಟೆಸ್ಟೆಂಟ್ಗಳು ಮನೆಯಲ್ಲೇ ಉಳಿದುಕೊಂಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಸ್ಟ್ರಾಂಗ್ ಇರುವ ತಾಂಡವ್ ರಾಮ್ ನನ್ನು ಹೊರಗೆ ಕಳಿಸಿದ್ದು ನಿಜವಾಗಲೂ ಒಳ್ಳೆಯ ಡಿಸಿಷನ್ ಅಲ್ಲ ಅಂತ ಹೇಳ್ತಾ ಇದ್ದಾರೆ ಬಿಗ್ ಬಾಸ್ ಅಭಿಮಾನಿಗಳು.
ಗೆಳೆಯನ ನಿರ್ಗಮನದಿಂದ ಬಿಕ್ಕಿಬಿಕ್ಕಿ ಅತ್ತ ಗಗನ್ ..! Bigg Boss

ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಾಗಿನಿಂದ. ಸಿಕ್ಕಾಪಟ್ಟೆ ಕ್ಲೋಸ್ ಆಗಿರುವ ಕುಚುಕುಗಳಂದರೆ ಅದು ತಾಂಡವ್ ರಾಮ್ ಹಾಗೂ ಗಗನ್ ಚಿನ್ನಪ್ಪ. ಇಬ್ಬರು ಕೂಡ ಸಿಕ್ಕಾಪಟ್ಟೆ ಕ್ಲೋಸ್ ಆಗಿದ್ರು. ಒಳಗೊಳಗೆ ಗೇಮ್ ಪ್ಲಾನ್ ಮಾಡಿ ಸುದೀಪ್ ಸರ್ ಹತ್ರ ಕೂಡ ಬೈಸ್ಕೊಂಡಿದ್ರು. ಆದ್ರೂ ಕೂಡ ಇವರಿಬ್ಬರ ಫ್ರೆಂಡ್ಶಿಪ್ ಸಿಕ್ಕಾಪಟ್ಟೆ ಸ್ಟ್ರಾಂಗ್ ಆಗಿ ಇತ್ತು. ಯಾರೋ ಮಾಡಿದ ತಪ್ಪು ನಿರ್ಧಾರಕ್ಕೆ ತನ್ನ ಗೆಳೆಯನಾದ ತಾಂಡವ್ ರಾಮ್ ಇಷ್ಟು ಬೇಗ ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗುತ್ತಿರುವುದು ಗಗನ್ ಗೆ ನುಂಗಲಾರದ ತುತ್ತಾಗಿದೆ. ಅಳುತ್ತಲೇ ಗಗನವರು ಪ್ಲೀಸ್ ಬಿಗ್ ಬಾಸ್ ಕಳಿಸಬೇಡಿ ಅಂತಾನೆ ಅಳುತ್ತಲೇ ಬಿಗ್ ಬಾಸ್ ಹತ್ರ ಕೇಳ್ಕೊತಾರೆ. ಮೊದಲಿಗೆ ಲಿಖಿತ್ ಸೇಫ್ ಆಗ್ತಾರೆ, ನಂತರ ಜಗದೀಶ್ ಸೇಫ್ ಆಗ್ತಾರೆ, ಅದಾದ ನಂತರ ತಾಂಡವ್ ರಾಮ್ ಹಾಗೂ ಸೌಂದರ್ಯಾಗೆ ಒಟ್ಟಿಗೆ ತಮಗೆ ನೀಡಿದಂತಹ ಲಕೋಟೆಯನ್ನು ಓಪನ್ ಮಾಡಲು ಹೇಳುತ್ತಾರೆ. ಆಗ ಸೌಂದರ್ಯ ಸೇಫ್ ಅನ್ನುವ ಕಾರ್ಡ್ ತೋರಿಸುತ್ತಾರೆ, ತಾಂಡವ್ ರಾಮ್ ಬಿಗ್ ಬಾಸ್ ಮನೆಯಿಂದ ಎಕ್ಸಿಟ್ ಪಡಿತಾರೆ.
1 thought on “” ಸ್ಟ್ರಾಂಗ್” ಎನ್ನುವುದೇ ಬಿಗ್ ಬಾಸ್ ಮನೆಯಲ್ಲಿ ಮುಳುವಾಯಿತು ತಾಂಡವ್ ಗೆ …!”