Gagan Chinnappa Breakup story . ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ “ಸೀತಾ ರಾಮ” ಧಾರವಾಹಿ ಖ್ಯಾತಿಯ ಗಗನ್ ಚಿನ್ನಪ್ಪ ನಮಗೆಲ್ಲರಿಗೂ ಗೊತ್ತೇ ಇದೆ Gagan Chinnappa . ಈ ಧಾರಾವಾಹಿಯ ಮೂಲಕ ಸಾಕಷ್ಟು ಹೆಸರನ್ನು ಪಡೆದುಕೊಳ್ಳುತ್ತಾರೆ. ಆ ಸೀರಿಯಲ್ ಮುಗಿದ ನಂತರ ಗಗನ್ ಚಿನ್ನಪ್ಪ (Gagan Chinnappa) ಮತ್ತೆ ಸುದ್ದಿಯಾದದ್ದು ಅವರ ಬ್ರೇಕಪ್ ಸ್ಟೋರಿ ಮೂಲಕ.
ಹುಡುಗಿಯೊಬ್ಬಳನ್ನು ಪ್ರೀತಿಸಿ, ಅವಳಿಗೋಸ್ಕರ ಸಾಕಷ್ಟು ಖರ್ಚು ಮಾಡಿ , ತನ್ನ ಮನೆಯಲ್ಲಿಯೇ ಇರಿಸಿಕೊಂಡು ಕೊನೆಗೆ ಅವಳು ಕೈ ಕೊಟ್ಟಳು ಅನ್ನುವಂತಹ ವಿಷಯ ” ರಾಜೇಶ್ ರಿವಿಲ್ಸ್” (Rajesh reveals YouTube channel) ಯೂಟ್ಯೂಬ್ ಚಾನೆಲ್ ನಲ್ಲಿ ನೀಡಿದ ಇಂಟರ್ವ್ಯೂ ಮೂಲಕ ಇಡೀ ಕರ್ನಾಟಕ ಜನತೆಗೆ ವಿಷಯ ಗೊತ್ತಾಗಿತ್ತು.. ಆದರೆ ಬಿಗ್ ಬಾಸ್ ಮನೆಯಲ್ಲಿ ತಾಂಡವ್ (Tandav Ram), ಕಾವ್ಯ ಹಾಗೂ ಗಗನ್ ಬಳಿ ನಿಮಗೆ ಈ ಹಿಂದೆ ಲವ್ ಇದ್ದಿತ್ತ ಎಂದು ಕೇಳಿದಕ್ಕೆ, ಕಾವ್ಯ “ಹೌದು ನಾನು ಈ ಹಿಂದೆ ಮೂವರು ಹುಡುಗರನ್ನ ಪ್ರೀತಿ ಮಾಡಿದ್ದೆ ಅದೆಲ್ಲವೂ ಬ್ರೇಕ್ ಅಪ್ ಆಯ್ತು ಅಂತ ಹೇಳ್ತಾಳೆ”. ಆದರೆ ಗಗನ್ ಮಾತ್ರ “ನನಗೆ ಯಾವುದೇ ಲವ್ ಇರ್ಲಿಲ್ಲ ಅಂತ ತಾಂಡವ ಹಾಗೂ ಕಾವ್ಯಳ ಬಳಿ ಹೇಳ್ತಾರೆ. ಇಡೀ ಕರ್ನಾಟಕ ಜನತೆಗೆ ” ರಾಜೇಶ್ ರಿವಿಲ್ಸ್ ಚಾನಲ್” ನಲ್ಲಿ ಬಂದಂತಹ ಇಂಟರ್ವ್ಯೂ ಮೂಲಕ ಇವರ ಲವ್ ಸ್ಟೋರಿ ಗೊತ್ತಿದೆ ಅಂತ ಗೊತ್ತಿದ್ರೂ ಕೂಡ ಗಗನ್ ಚಿನ್ನಪ್ಪ ಯಾಕೆ ಕಾವ್ಯ ಎದುರಿಗೆ ತಮ್ಮ ಲವ್ ಸ್ಟೋರಿಯನ್ನ ಮುಚ್ಚಿಟ್ಬಿಟ್ರು ಅನ್ನೋ ಪ್ರಶ್ನೆ ಮೂಡಿದೆ. ಯಾಕಂದ್ರೆ ಯಾವಾಗಲೂ ಕೂಡ ಹೆಚ್ಚಾಗಿ ಗಗನ್ ಮತ್ತು ತಾಂಡವ್ ಕಾವ್ಯಳನ್ನ ಇಂಪ್ರೆಸ್ ಮಾಡೋಕೆ ನೋಡುತ್ತಿರುತ್ತಾರೆ.
ಗಗನ್ ಚಿನ್ನಪ್ಪ ಬ್ರೇಕಪ್ ಸ್ಟೋರಿ Gagan Chinnappa
ಅಷ್ಟಕ್ಕೂ ಗಗನ್ (Gagan Chinnappa) ಲೈಫ್ ನಲ್ಲಿ ಹೇಗೆ ಲವ್ ಸ್ಟಾರ್ಟ್ ಆಯ್ತು, ಹೇಗೆ ಬ್ರೇಕ್ ಅಪ್ ಆಯ್ತು ಅಂತ ನೋಡೋದಾದ್ರೆ , ಆಕೆಯ ಹೆಸರು ಪ್ರಾರ್ಥನ ಮೂಲತಹ ಇವರಿಬ್ಬರೂ ಕೂಡ ಕೊಡಗಿನವರೆ. ಆದರೆ ಇವರಿಬ್ಬರಿಗೂ ಕೊಡಗಿನಲ್ಲಿ ಯಾವುದೇ ರೀತಿಯ ಪರಿಚಯ ಇರಲಿಲ್ಲ . ಪರಸ್ಪರ ಭೇಟಿ ಕೂಡ ಆಗಿರಲಿಲ್ಲ. ಇನ್ನೂ ಹೇಳಬೇಕಾದರೆ ಅವರಿಬ್ಬರೂ ಒಬ್ಬರನ್ನೊಬ್ಬರು ಯಾವತ್ತು ನೋಡಿಯೇ ಇರಲಿಲ್ಲ.
ಗಗನ್ ನನ್ನು ಪ್ರೀತಿಸಿದ್ದ ಗಗನಸಖಿ Gagan Chinnappa
ಮೊದಲು ಪರಿಚಯವಾದದ್ದು ಫೇಸ್ಬುಕ್ನಲ್ಲಿ. ಗಗನ್ ಹೀಗೆ ಒಂದು ದಿನ ಫೇಸ್ಬುಕ್ ನೋಡ್ತಾ ಇರಬೇಕಾದ್ರೆ ಇವರ ಅಕೌಂಟ್ನಲ್ಲಿ ಇದ್ದ ಒಂದು ಹುಡುಗಿ ಫೋಟೋ ಅಪ್ಲೋಡ್ ಮಾಡುತ್ತಾಳೆ. ಇವರಿಗೆ ಶಾಕ್ ಆಗುತ್ತೆ ಯಾರು ಇಷ್ಟು ಚೆನ್ನಾಗಿರುವ ಹುಡುಗಿ ನನ್ನ ಅಕೌಂಟ್ ನಲ್ಲಿ , ಅದು ಕೊಡಗಿನವಳು ಅಂತ ಆಶ್ಚರ್ಯ ಆಗುತ್ತೆ. ನಂತರ ಗಗನ್ ಅವಳಿಗೆ ಮೆಸೇಜ್ ಮಾಡುತ್ತಾರೆ. ಅದರ ಮೂಲಕ ಅವರಿಗೆ ಗೊತ್ತಾಗುತ್ತೆ ಆಕೆ ಗಗನಸಖಿ ಅಂತ. ಅಬುದಾಬಿನಲ್ಲಿ ವಿಮಾನದಲ್ಲಿ ಬಿಸಿನೆಸ್ ಕ್ಲಾಸ್ ಸಿಬ್ಬಂದಿಯಾಗಿ ಕೆಲಸ ಮಾಡ್ತಾ ಇರ್ತಾರೆ . ಇಬ್ಬರಿಗೂ ಕೂಡ ಈ ಹಿಂದೆ ಬೇರೆ ಲವ್ ಇರುತ್ತೆ ಅದು ಬ್ರೇಕ್ ಅಪ್ ಆಗಿ ಇಬ್ಬರು ಕೂಡ ಸಿಂಗಲ್ ಆಗಿರುತ್ತಾರೆ.

ಪ್ರತಿನಿತ್ಯ ಇಬ್ಬರು ಕೂಡ ಚಾಟಿಂಗ್ ಮಾಡೋಕೆ ಶುರು ಮಾಡ್ತಾರೆ. ಇದರಿಂದ ಇಬ್ಬರೂ ಕೂಡ ಪರಸ್ಪರ ಇನ್ನಷ್ಟು ಹತ್ತಿರವಾಗುತ್ತಾರೆ. ಈ ಸ್ನೇಹ ಪ್ರೇಮಕ್ಕೆ ತಿರುಗುತ್ತದೆ. ಗಗನ್ ಪ್ರಾರ್ಥನಾಳಿಗೆ ಪ್ರಪೋಸ್ ಮಾಡ್ತಾರೆ. ಸುಮಾರು ಆರು ತಿಂಗಳ ಕಾಲ ಇಬ್ಬರೂ ಮುಖಾಮುಖಿಯಾಗಿ ಭೇಟಿಯಾಗದೇ ವಿಡಿಯೋ ಕಾಲ್, ಮೆಸೇಜ್ ಮೂಲಕನೇ ಇವರ ಲವ್ ಸ್ಟೋರಿ ಮುಂದುವರೆಯುತ್ತೆ.
ಆರು ತಿಂಗಳ ಬಳಿಕ ಒಂದು ದಿನ ಪ್ರಾರ್ಥನಾ ಮೊದಲ ಬಾರಿ ಗಗನ್ (Gagan Chinnappa) ನನ್ನ ಮೀಟ್ ಆಗಲು ಬೆಂಗಳೂರಿಗೆ ಬರ್ತಾಳೆ. ಇದರ ನಂತರ ಇವರ ಪ್ರೀತಿ ಮತ್ತಷ್ಟು ಗಾಢವಾಗುತ್ತದೆ. ಈ ಸಂಬಂಧದ ಆರಂಭಿಕ ವರ್ಷಗಳು ಗಗನ್ ಗೆ ಆಕಾಶದಲ್ಲೇ ತೇಲಾಡುತ್ತಿದ್ದಂತ ಅನುಭವ. ಇಬ್ಬರು ಕೂಡ ಒಬ್ಬರನ್ನೊಬ್ಬರು ತುಂಬಾ ಪ್ರೀತಿಸ್ತಾ ಇದ್ರು. ಪ್ರಾರ್ಥನಾ ಗಗನಸಖಿ ಆಗಿದ್ದರಿಂದ ಬೇರೆ ಬೇರೆ ದೇಶಗಳಿಗೆ ಹೋಗುತ್ತಿದ್ದರು ವಾಪಾಸ್ ಬೆಂಗಳೂರಿಗೆ ಬರುವಾಗ ಗಗನ್ ಗಾಗಿ ಲಂಡನ್ನಿಂದ ಈರುಳ್ಳಿ, ಆ ದೇಶದ ತರಕಾರಿ, ಸಾಮಗ್ರಿಗಳನ್ನೆಲ್ಲ ತಂದು ಗಗನ್ ಗೆ ಕೊಡುತ್ತಿದ್ದರು. ಗಗನ್ ಗೆ ಒಂಥರಾ ಖುಷಿ ಬೇರೆ , ಬೇರೆ ದೇಶದ ವಸ್ತುಗಳನ್ನು ನಾನು ಇಲ್ಲಿ ಕೂತು ಪಡೆದುಕೊಳ್ಳುತ್ತಿದ್ದೇನೆ , ಅದು ನನ್ನ ಗರ್ಲ್ ಫ್ರೆಂಡ್ ಕೊಟ್ಟದ್ದು ಅನ್ನೋ ಹೆಮ್ಮೆ..
ಇವರಿಬ್ಬರಿಗೆ ಹೇಗೆ ಪರಿಚಯ ಆಯ್ತು…!? Gagan Chinnappa
ಸುಮಾರು ಮೂರು ವರ್ಷಗಳ ಕಾಲ ಸಂಬಂಧದಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ಆದರೆ ಒಂದು ದಿನ ಪ್ರಾರ್ಥನಾಳ ಕೆಲಸ ಹೋಗುತ್ತೆ.. ಆಕೆ ಬ್ಯಾಂಕಿನಲ್ಲಿ 50 ಲಕ್ಷ ಸಾಲ ಪಡೆದು ಸ್ಕ್ಯಾಮ್ ಮಾಡಿ ಕೆಲಸ ಕಳೆದುಕೊಂಡಿರುತ್ತಾಳೆ. ಕರೋನ ಟೈಮಲ್ಲಿ ಹಲವಾರು ಜನರ ಕೆಲಸ ಹೋಗುತ್ತೆ. ಪ್ರಾರ್ಥನ ಕೂಡ ಗಗನ್ ಹತ್ತಿರ ನಾನು ಕೆಲಸ ಬಿಟ್ಟು ಬರುತ್ತೇನೆ ಅಂತ ಹೇಳಿ ಬೆಂಗಳೂರಿಗೆ ಬರ್ತಾಳೆ. ಗಗನ್ ಗೆ ಆಕೆ ಸ್ಕ್ಯಾಮ್ ಮಾಡಿ ಬಂದಿರೋದು ಅಂತ ಯಾವ ಐಡಿಯಾ ಕೂಡ ಇರೋದಿಲ್ಲ. ಈ ವಿಷಯ ಮೊದಲು ಗಗನ್ ಗೆ ಗೊತ್ತಿರುವುದಿಲ್ಲ.

ಕೆಲಸ ಇಲ್ಲದೆ ಪರದಾಡುವಂತಹ ಪರಿಸ್ಥಿತಿ ಪ್ರಾರ್ಥನಾಳಿಗೆ ಆಗುತ್ತೆ. ಆಕೆ ಕೆಲಸ ಹುಡುಕಲು ಬೆಂಗಳೂರಿಗೆ ಬರುತ್ತಾಳೆ. ಆಗ ಪ್ರಾರ್ಥನಾಳಿಗೆ ಜೊತೆಯಾಗಿ ನಿಂತದ್ದೇ ಗಗನ್ (Gagan Chinnappa). ಪ್ರಾರ್ಥನಾಳಿಗೆ ಬೆಂಗಳೂರಿನಲ್ಲಿ ಮನೆ ಸಿಗೋದಿಲ್ಲ. ಆಗ ತನ್ನದೇ ಫ್ಲಾಟ್ ನಲ್ಲಿ ಆಕೆಯನ್ನ ಇರಿಸಿಕೊಳ್ಳುತ್ತಾನೆ. ಆಕೆಯ ಪೂರ್ತಿ ಖರ್ಚು ಜವಾಬ್ದಾರಿಯನ್ನ ಸ್ವತಹ ಅವನೇ ನೋಡಿಕೊಳ್ಳುತ್ತಾನೆ. ಗಗನ್ ತನ್ನ ತಂದೆ ತಾಯಿಯ ಬಳಿ ನಾನು ಲೀವ್ ಇನ್ ರಿಲೇಷನ್ಶಿಪ್ ನಲ್ಲಿ ಇರೋದಾಗಿ ಹೇಳುತ್ತಾನೆ. ಅವರು ಗಗನ್ ನ ಮನೆಗೆ ಬರೋದನ್ನೇ ನಿಲ್ಲಿಸ್ತಾರೆ. ಇತ್ತ ಪ್ರಾರ್ಥನಾ ಚಿಕ್ಕ ಪುಟ್ಟ ಕೆಲಸಗಳನ್ನ ಮಾಡಿಕೊಂಡು ಇರುತ್ತಾಳೆ.
ಗಗನಸಖಿ ಜೊತೆ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿ ಗಗನ್ Gagan Chinnappa
ಸ್ವಲ್ಪ ಸಮಯ ಕಳೆದ ಮೇಲೆ ಪ್ರಾರ್ಥನಾಳ ತಾಯಿಗೆ ಡಿವೋರ್ಸ್ ಆಗುತ್ತೆ. ಪ್ರಾರ್ಥನಾಳ ತಾಯಿ ಹಾಗೂ ತಮ್ಮ ಕೂಡ ಗಗನ್ ಮನೆಗೆ ಬಂದು ಉಳ್ಕೊಳ್ತಾರೆ. ಬರ ಬರುತ್ತಾ ಹೇಗಾಗುತ್ತೆ ಅಂತ ಅಂದ್ರೆ. ತನ್ನ ಫ್ಲ್ಯಾಟ್ನಲ್ಲೇ ಗಗನ್ ಅತಿಥಿಯಾಗಿ ಉಳಿದುಕೊಳ್ಳುವಂತಹ ಪರಿಸ್ಥಿತಿ ಎದುರಾಗುತ್ತೆ. ಪ್ರೈವಸಿ ಅನ್ನೋದೇ ಇರೋದಿಲ್ಲ. ಇಡೀ ಮನೆಯಲ್ಲಿ ಗಗನ್ ಗೆ ಒಂದೇ ಒಂದು ರೂಮ್ ಮಾತ್ರ ಮೀಸಲು. ಆದರೆ ಗಗನ್ ಮಾತ್ರ ಪ್ರಾರ್ಥನಾಳನ್ನ ಸಿಕ್ಕಾಪಟ್ಟೆ ಪ್ರೀತಿ ಮಾಡ್ತಾ ಇರ್ತಾನೆ. ಅವಳಿಗೆ ಸರ್ಪ್ರೈಸ್ ಕೊಡಬೇಕಂತ ಸೀರಿಯಲ್ ಮುಗಿಸಿಕೊಂಡು ಬೇಗ ಮನೆಗೆ ಬರ್ತಾ ಇದ್ದ. ಆ ಸಮಯದಲ್ಲಿ ಗಗನ್ “ಮಂಗಳ ಗೌರಿ ಮದುವೆ” ಸೀರಿಯಲ್ ಮಾಡ್ತಾ ಇದ್ರು. ಸೀರಿಯಲ್ ಗಳ ಮೂಲಕ ಗಗನ್ ಗೆ ತಿಂಗಳಿಗೆ ಸುಮಾರು 50 ರಿಂದ 60 ಸಾವಿರ ರೂಪಾಯಿ ಸಿಕ್ತಾ ಇತ್ತು. ಆದರೆ ಇವರ ಜವಾಬ್ದಾರಿಯಲ್ಲ ಗಗನ್ ಮೇಲೆ ಬಿದ್ದಿದ್ದರಿಂದ ಅದು ಸಾಕಾಗ್ತಾನೇ ಇರಲಿಲ್ಲ.

ಆದರೆ ಒಂದು ದಿನ ಸೀರಿಯಲ್ ನಲ್ಲಿ ಪೊಲೀಸ್ ಯೂನಿಫಾರ್ಮ್ ಹಾಕೊಂಡು ಬಾರ್ ನಲ್ಲಿ ಕುಡಿದುಕೊಂಡು ಗಲಾಟೆ ಮಾಡುವಂತಹ ಸೀನ್ ಇರುತ್ತದೆ. ಗಗನ್ ನಾನು ಯೂನಿಫಾರ್ಮ್ ಹಾಕಿಕೊಂಡು ಗಲಾಟೆ ಮಾಡುವುದಿಲ್ಲ ಏನಾದ್ರೂ ಚೇಂಜಸ್ ಮಾಡಿ ಅಂತ ಕೇಳಿಕೊಳ್ಳುತ್ತಾರೆ. ಯಾಕಂದ್ರೆ, ಈ ಹಿಂದೆ ಕೂಡ ಯುನಿಫಾರ್ಮ್ ಹಾಕಿಕೊಂಡು ಮಂಡಿಯೂರಿ ಕೂತು, ಕಾಲ ಮೇಲೆ ಹುಡುಗಿಯ ಪಾದ ಇರಿಸಿ ಗೆಜ್ಜೆ ಕಟ್ಟುವ ಸೀನ್ ಮಾಡಿದ್ದರು. ಅದು ದೊಡ್ಡ ಸುದ್ದಿಯಾಗಿ ಗಗನ್ ಅವರಿಗೆ ಗೌರ್ಮೆಂಟ್ ಇಂದ ವಾರ್ನಿಂಗ್ ಬಂದಿತ್ತು. ಹಾಗಾಗಿ ಈ ಸೀನ್ ನಾನು ಮಾಡುವುದಿಲ್ಲ ಏನಾದರೂ ಚೇಂಜಸ್ ಮಾಡಿ ಅಂತ ಕೇಳಿಕೊಳ್ಳುತ್ತಾರೆ. ಆದರೆ ಸೀರಿಯಲ್ ತಂಡ ಕೇಳುವುದಿಲ್ಲ. ಇದು ಮಾತು ಜಾಸ್ತಿ ಆಗುತ್ತಾ ಹೋಗಿ ಕೊನೆಗೆ ಸೀರಿಯಲ್ ನಿಂದ ಹೊರ ಬರುತ್ತಾರೆ.
ಪ್ರಾರ್ಥನಾಳ ನಿಜ ಬಣ್ಣ ಬಯಲಾಗುವ ಸಮಯ Gagan Chinnappa
ಗಗನ್ ಕೆಲಸ ಇಲ್ಲದೆ ಖಾಲಿ ಕೈಯಲ್ಲಿ ಕೂತಾಗಲೇ ಇವರ ನಿಜವಾದ ಬಣ್ಣ ಹೊರಗೆ ಬರೋಕೆ ಶುರುವಾಗಿದ್ದು. ಕೆಲಸ ಇಲ್ಲದೆ ಗಗನ್ (Gagan Chinnappa) ಒದ್ದಾಡುವ ಪರಿಸ್ಥಿತಿ ಎದುರಾಗುತ್ತೆ. ಸುಮಾರು 9 ತಿಂಗಳ ಕಾಲ ಯಾವುದೇ ಅವಕಾಶಗಳು ಸಿಗುವುದಿಲ್ಲ. ಇವರಿಬ್ಬರನ್ನ ಸಾಕುವ ಜವಾಬ್ದಾರಿ ಕೂಡ ಗಗನ್ ಮೇಲಿತ್ತು. ಆರ್ಥಿಕ ಸಂಕಷ್ಟ ಎದುರಾಗುತ್ತದೆ. ಇದರಿಂದ ಅವರ ಬಳಿ ಇದ್ದ ಕಾರನ್ನೂ ಮಾರಬೇಕಾಯಿತು. ಇದೇ ಸಮಯದಲ್ಲಿ ಪ್ರಾರ್ಥನಾಳ ಬಿಹೇವಿಯರ್ ನಲ್ಲಿ ಸಿಕ್ಕಾಪಟ್ಟೆ ಚೇಂಜಸ್ ಶುರುವಾಗಲು ಪ್ರಾರಂಭವಾಗುತ್ತೆ. ನಿಧಾನವಾಗಿ ಆಕೆಗೆ ಗಗನ್ ಮೇಲೆ ಇದ್ದಂತಹ ಇಂಟರೆಸ್ಟ್ ಕಡಿಮೆಯಾಗಲು ಶುರುವಾಗುತ್ತೆ. ಗಗನ್ ಗೆ ನಿಧಾನವಾಗಿ ಆಕೆಯ ಮೇಲೆ ಅನುಮಾನ ಮೂಡಲು ಆರಂಭವಾಯಿತು.

ಆಕೆ ಕೆಲಸಕ್ಕೆಂದು ಹೋಗ್ತಾಳೆ , ಆದರೆ ಎಲ್ಲಿಗೆ ಹೋಗ್ತಾಳೆ! ಏನ್ ಕೆಲಸ ಮಾಡ್ತಾಳೆ !? ಯಾವುದನ್ನು ಕೂಡ ಗಗನ್ ಹತ್ರ ಹೇಳೋದಿಲ್ಲ. ಕೆಲವೊಮ್ಮೆ ಮನೆಗೆ ಬರ್ತಾಯಿರಲಿಲ್ಲ ಕೇಳಿದರೆ ಬಿಸಿನೆಸ್ ಮೀಟಿಂಗ್ ಅಂತ ಹೇಳ್ತಾ ಇದ್ಲು. ಒಂದು ದಿನ ಬಿಸಿನೆಸ್ ಮೀಟಿಂಗ್ ಅಂತ ಹೇಳಿ ಹೋಗಿರ್ತಾಳೆ. ಗಗನ್ ಲೊಕೇಶನ್ ಕಳಿಸುವ ಅಂತ ಹೇಳಿದ್ದಕ್ಕೆ ಕಾಲ್ ಕಟ್ ಮಾಡ್ಬಿಡ್ತಾಳೆ. ಗಗನ್ ಗೆ ಸಿಕ್ಕಾಪಟ್ಟೆ ಡೌಟ್ ಬರುತ್ತೆ. ಅಂದು ಗಗನ್ ಆಕೆ ವಾಪಸ್ ಬರುವಾಗ ಮನೆಗೆ ಪಿಕಪ್ ಮಾಡಿ ಕರೆದುಕೊಂಡು ಬರ್ತಾರೆ. ಆಕೆಗೆ ಏನು ಹೇಳೋದಿಲ್ಲ ಮನೆಗೆ ಹೋದವನೇ, ಆಕೆ ತೆಗೆದುಕೊಂಡು ಹೋಗಿದ್ದಂತಹ ಬ್ಯಾಗ್ ಚೆಕ್ ಮಾಡ್ತಾನೆ. ಅದರಲ್ಲಿ ಪಾರ್ಟಿಗೆ ಹಾಕುವಂತಹ ಶಾರ್ಟ್ ಡ್ರೆಸ್ ಗಳೇ ಇರುತ್ತೆ. ಆಗ ಗಗನ್ ಬಿಸಿನೆಸ್ ಮೀಟಿಂಗಿಗೆ ಹಾಫ್ ಶೋಲ್ಡರ್ ಇರುವಂತಹ ಪಾರ್ಟಿ ಬಟ್ಟೆ ಯಾಕೆ ತಗೊಂಡ್ ಹೋಗಿದ್ದೀಯಾ ಅಂತ ಕೇಳ್ತಾನೆ. ಅಷ್ಟೇ ಅಲ್ಲದೆ ಆಕೆ ತೆಗೆದುಕೊಂಡು ಹೋಗಿದ್ದ ಬಟ್ಟೆಯಿಂದ ಹುಡುಗರ ಪರ್ಫ್ಯೂಮ್ ವಾಸನೆ ಬರುತ್ತಿತ್ತು. ಗಗನ್ ಗೆ ಪರ್ಫ್ಯೂಮ್ ನಲ್ಲಿ ಸಿಕ್ಕಾಪಟ್ಟೆ ಕ್ರೇಜ್ ಇದ್ದಿದ್ದರಿಂದ ಆತನಿಗೆ ಕನ್ಫರ್ಮ್ ಆಗಿ ಗೊತ್ತಾಗುತ್ತೆ ಆಕೆ ಯಾವುದು ಹುಡುಗನ ಜೊತೆ ಹೋಗಿದ್ದಾಳೆ ಎಂದು. ಕೊನೆಗೂ ಆಕೆ ಬಾಯ್ ಬಿಡ್ತಾಳೆ ತಾನು ಹುಡುಗನ ಜೊತೆ ಹೋಗಿದ್ದು ಎಂದು. ಗಗನ್ ಗೆ ಸಿಕ್ಕಾಪಟ್ಟೆ ಶಾಕ್ ಆಗುತ್ತೆ, ತನ್ನ ಕೋಪನೆಲ್ಲ ಕಂಟ್ರೋಲ್ ಮಾಡಿಕೊಂಡು ಆಕೆಗೆ ಏನು ಹೇಳದೆ, ದುಃಖ ತಡೆದುಕೊಳ್ಳಲಾಗದೆ ಪಕ್ಕದ ಗೆಳೆಯನ ಫ್ಲಾಟ್ ಗೆ ಹೋಗಿ ಕುಳಿತುಕೊಳ್ಳುತ್ತಾನೆ. ಅವರ ಗೆಳೆಯರೆಲ್ಲರೂ ಏನಾಯ್ತು ಎಂದು ಪದೇಪದೇ ಕೇಳಿದಾಗ, ಅವಳ ಮರ್ಯಾದೆ ಹೋಗಬಾರದು ಅಂತ , ತಾನೇ ಬೇರೆ ಹುಡುಗಿಯ ಜೊತೆ ಹೋಗಿದ್ದೆ, ನನ್ನಿಂದ ತಪ್ಪಾಯ್ತು ಅಂತ ಹೇಳಿ ತನ್ನ ಮೇಲೆ ತಪ್ಪನ್ನ ಹಾಕಿಕೊಳ್ಳುತ್ತಾನೆ.
ಒಂದು ದಿನ ಪ್ರಾರ್ಥನಾ ತನ್ನ ಫ್ರೆಂಡ್ಸ್ ಜೊತೆಗೆ ಕಾರ್ ನಲ್ಲಿ ಹೋಗಬೇಕಾದರೆ ಗಗನ್ ಕಾಲ್ ಮಾಡಿರುತ್ತಾನೆ. ಆತನ ಬಳಿ ಮಾತಾಡಿ ಕಾಲ್ ಕಟ್ ಮಾಡದೆ ತನ್ನ ಬ್ಯಾಗ್ ನಲ್ಲಿ ಹಾಕಿಕೊಂಡಿರುತ್ತಾಳೆ. ಆಕೆ ತನ್ನ ಫ್ರೆಂಡ್ಸ್ ಜೊತೆ ಗಗನ್ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿರುವುದನ್ನೆಲ್ಲ ಗಗನ್ ಕೇಳಿಸಿಕೊಳ್ಳುತ್ತಾನೆ. ಗಗನ್ ಗೆ ಶಾಕ್ ಆಗುತ್ತೆ. ಇನ್ನು ಅಮ್ಮ ಮಗಳು ನನ್ನ ಹಿಂದೆ ಯಾವ ರೀತಿ ಮಾತನಾಡುತ್ತಿರಬಹುದು ಅಂತ ಡೌಟ್ ಬರಲು ಶುರುವಾಗುತ್ತೆ.

ಆತನ ಗೆಳೆಯರು ಒಂದು ಐಡಿಯಾ ಕೊಡ್ತಾರೆ. ಮನೆಯೊಳಗೆ ಅವರಿಬ್ಬರಿಗೆ ಗೊತ್ತಾಗದ ಹಾಗೆ ರೆಕಾರ್ಡರ್ ಫಿಕ್ಸ್ ಮಾಡು ಆತ ಹೇಳ್ತಾರೆ, ಅದೇ ರೀತಿ ಗಗನ್ ಮಾಡ್ತಾರೆ. ಅಮ್ಮ ಮಗಳಿಬ್ಬರ ಪಿತೂರಿ ಮಾತುಗಳನ್ನ ಕೇಳಿಸಿಕೊಂಡು ಗಗನ್ ಗೆ ಸಿಕ್ಕಾಪಟ್ಟೆ ಶಾಕ್ ಆಗುತ್ತೆ. ಕೊನೆಗೆ ಗಗನ್ ಗೆ ಕಣ್ಣು ತೆರೆಯುತ್ತೆ. ತಕ್ಷಣ ಪ್ರಾರ್ಥನಾಳಿಂದ ದೂರ ಹೋಗುವ ನಿರ್ಧಾರ ಮಾಡುತ್ತಾರೆ. ಬ್ರೇಕ್ ಅಪ್ ಮಾಡಿಕೊಂಡು ಅಲ್ಲಿರಲು ಆಗದೆ ಗಗನ್ ಸೀದಾ ಮುಂಬೈಗೆ ಹೋಗ್ತಾರೆ. 15 ದಿನಗಳ ಕಾಲ ಸರಿಯಾಗಿ ಊಟ ನಿದ್ರೆ ಇಲ್ಲದೆ ಒದ್ದಾಡ್ತಾರೆ. ಪ್ರಾರ್ಥನಾಳಿಗೆ ಫೋನ್ ಮಾಡಿ, ” ನನಗೆ ಊಟ ಸೇರ್ತಾ ಇಲ್ಲ , ನಿದ್ರೆ ಬರ್ತಾ ಇಲ್ಲ ” ಅಂತ ಹೇಳ್ತಾರೆ. ಆಗ ಪ್ರಾರ್ಥನ “ನನಗೂ ನೋವಾಗ್ತಾ ಇದೆ, ನಾನೇನಾದ್ರೂ ನಿನಗೆ ಫೋನ್ ಮಾಡಿ ಹೇಳಿದ್ನ ..? ನಿನ್ ಲೈಫ್ ನೀನ್ ನೋಡ್ಕೋ” ಅಂತ ಕಟುವಾಗಿ ಮಾತಾಡಿ ಕಾಲ್ ಕಟ್ ಮಾಡ್ತಾರೆ. ಅದೇ ಕ್ಷಣಕ್ಕೆ ಫೋನ್ ಮಾಡಿ ಮನೆಯಿಂದ ಹೊರಟೋಗಿ ಅಂತ ಹೇಳ್ತಾರೆ. ಅವರು ಇದು ನಮ್ಮ ಮನೆ ಹೋಗಲ್ಲ ಅಂತ ಹೇಳಿದ್ದಕ್ಕೆ. ಗಗನ್ ಓನರ್ ಹತ್ತಿರ ಫೋನ್ ಮಾಡಿಸಿ. ಅವರನ್ನು ಮನೆಯಿಂದ ಹೊರಗೆ ಕಳಿಸ್ತಾರೆ. ಹೋಗುವಾಗ ಗಗನ್ ಗೆ ಸಿಕ್ಕಾಪಟ್ಟೆ ಶಾಪ ಹಾಕಿ ಅಲ್ಲಿಂದ ಹೊರಟೋಗ್ತಾರೆ.
ಅದಾದ ನಂತರ ಗಗನ್ (Gagan Chinnappa) ಗೆ “ಸೀತಾರಾಮ” ಸೀರಿಯಲ್ ಸಿಕ್ಕಿದ್ದು. ಈ ಸೀರಿಯಲ್ ಸಿಕ್ಕಾಪಟ್ಟೆ ಹಿಟ್ ಆಗುತ್ತೆ. ಅಷ್ಟೇ ಅಲ್ಲದೆ ಗಗನ್ ಫೇಮಸ್ ಆಗ್ತಾರೆ. ಗಗನ್ ಫೇಮಸ್ ಆಗೋದನ್ನ ನೋಡಿದ ಪ್ರಾರ್ಥನಾ ಮತ್ತೆ ಅವನ ಲೈಫ್ ಗೆ ಬರೋಕೆ ಟ್ರೈ ಮಾಡ್ತಾಳೆ. ಆಗ ಗಗನ್ ನಾನು ಒಂದು ಸಲಿ ಯೂಸ್ ಮಾಡಿದ ಟಾಯ್ (ಆಟಿಕೆ) ಅನ್ನ ಮತ್ತೆ ಯೂಸ್ ಮಾಡಲ್ಲ ಅಂತ ಮುಖಕ್ಕೆ ಹೊಡೆದ ಹಾಗೆ ಹೇಳಿ ಮತ್ತೆ ನನ್ನ ಲೈಫ್ ಗೆ ಬರಬೇಡ ಅಂತ ಸೂಚನೆ ಕೊಡ್ತಾರೆ.