ಗಿಲ್ಲಿ ಆಗೋಕೆ ಟ್ರೈ ಮಾಡ್ತಿದ್ದಾರಾ ಪ್ರಶಾಂತ್..!?

        ಬಿಗ್ ಬಾಸ್ (Bigg Boss) ಮನೆಗೆ ಈಗ ವೈಟ್ ಕಾರ್ಡ್ ಎಂಟ್ರಿ ಮೂಲಕ ಎಂಟ್ರಿ ಕೊಟ್ಟ ಸ್ಪರ್ಧಿಗಳು ಅಂದ್ರೆ ಅದು ಘಾಟಿ ಗಾನವಿ, ಸೋನಾಲಿ ಗೌಡ ಹಾಗೂ ಕಾಮಿಡಿಯನ್ ಪ್ರಶಾಂತ್. ಮೂರು ಜನ ಕೂಡ ಬರ್ತಾ ಬರ್ತಾನೆ ಸಿಕ್ಕಾಪಟ್ಟೆ ಬಿಗ್ ಬಾಸ್ ಮನೆಯಲ್ಲಿ ಸಂಚಲನ ಮೂಡಿಸ್ತಾರೆ. ಬಿಗ್ ಬಾಸ್ ನೀಡಿದ ಸೂಪರ್ ಪವರ್ ಮೂಲಕ ಮನೆಯವರನ್ನ ಹೈ ಜಾಕ್ ಮಾಡುವ ಮೂಲಕ ನಾಮಿನೇಟ್ ಮಾಡಿ ಕೆಲವರ ದ್ವೇಷ ಕೂಡ ಕಟ್ಟಿಕೊಂಡರು. ಅದರಲ್ಲಿ ಸಿಕ್ಕಾಪಟ್ಟೆ ಹೈಲೈಟ್ ಆದದ್ದೆ ಕಾಮಿಡಿಯನ್ ಪ್ರಶಾಂತ್. ಉದ್ದೇಶ ಪೂರ್ವಕವಾಗಿಯೇ ಮಾಡ್ರನ್ ಕವಿ ಮಂಜನನ್ನ ಟಾರ್ಗೆಟ್ ಮಾಡಿ “ಹೊರಗಿಂದ ನೋಡುವಾಗ ಮಂಜ ಸಿಕ್ಕಾಪಟ್ಟೆ ಕಿರಿಕಿರಿ ಅನ್ಸಿತ್ತು ಆದರೆ ಒಳಗೆ ಬಂದ್ಮೇಲೆ ಗೊತ್ತಾಯ್ತು ಇವನು ಅದಕ್ಕಿಂತ ಜಾಸ್ತಿ ಕಿರಿಕಿರಿ ಎಂದು” ಅಂತ ಹೇಳಿ ಪದೇ ಪದೇ ಮಂಜನನ್ನೇ ಟಾರ್ಗೆಟ್ ಮಾಡ್ತಾ ಇದ್ದಾರೆ ವೈಲ್ಡ್ ಕಾರ್ಡ್ ಎಂಟ್ರಿ ಪ್ರಶಾಂತ್. 

 ನಿಜವಾದ ಕಿರಿಕಿರಿ ಮಂಜಾನಾ..! ಅಥವಾ ಪ್ರಶಾಂತ್ ನಾ..! Bigg Boss

Bigg Boss)

            ಮಾಡ್ರನ್ ಕವಿ ಮಂಜನ ಅಭಿಮಾನಿಗಳು ಮಾತ್ರ “ನಿಜವಾಗ್ಲೂ ಇರಿಟೇಟ್ ಆಗ್ತಾ ಇರೋದೇ ಈ ಪ್ರಶಾಂತ್ ಇಂದ” ಅಂತ ಹೇಳುತ್ತಿದ್ದಾರೆ . ಪ್ರಶಾಂತ್ ವರ್ತನೆ ಹೇಗಿದೆ ಅಂತ ಅಂದ್ರೆ ಹೊರಗಿಂದ ಬರುವಾಗ ತಯಾರಾಗಿ ಬಂದಿದ್ದಾರೆ, ಮಾಡ್ರನ್ ಕವಿ ಮಂಜನನ್ನ ಟಾರ್ಗೆಟ್ ಮಾಡಿದ್ರೆ ನಾನು ಹೈಲೈಟ್ ಆಗ್ತೀನಿ ಅಂತ. 

            ಯಾಕಂತ ಅಂದ್ರೆ ಕಾಮಿಡಿಯನ್ ಪ್ರಶಾಂತ್ ಬಿಗ್ ಬಾಸ್ (Bigg Boss) ಮನೆಗೆ ಎಂಟ್ರಿ ಕೊಡುವಾಗ ಸುದೀಪ್ ಅವರು, “ಬಿಗ್ ಬಾಸ್ ಮನೆಯಲ್ಲಿ ಯಾರು ನಿಮಗೆ ಫ್ರೆಂಡ್ ಆಗಬಹುದು..! ಯಾರು ನಿಮಗೆ ಟಾರ್ಗೆಟ್ ಆಗಬಹುದು…!? ಅಂದ್ರೆ ವಿಲನ್ ಆಗಬಹುದು” ಅಂತ ಕೇಳಿದಾಗ, ” ಗಗನ್ ಅವರು ನನಗೆ ಒಳ್ಳೆ ಫ್ರೆಂಡ್ ಆಗಬಹುದು ಹಾಗೆ ಶತ್ರು ಮಾಡ್ರನ್ ಮಹಾ ಕವಿ ಮಂಜ ಆಗಬಹುದು” ಅಂತ ಹೇಳ್ತಾರೆ. ಇದರಲ್ಲೇ ಗೊತ್ತಾಗುತ್ತೆ ಪ್ರಶಾಂತ್ ಅವರು ಕ್ಲಿಯರ್ ಆಗಿದ್ದಾರೆ, ನಾನು ಟಾರ್ಗೆಟ್ ಮಾಡಬೇಕಾದದ್ದು ಮಾಡ್ರನ್ ಕವಿ ಮಂಜನನ್ನ. ಆಗ ಖಂಡಿತವಾಗಲೂ ನಾನು ಹೈಲೈಟ್ ಆಗ್ತೀನಿ ಅಂತ. 

Bigg Boss)

        ಮಂಜ ಈಗ ಮೊದಲಿದ್ದಾಗೆ ಇಲ್ಲ, ಮೊದಲ ವಾರದಲ್ಲಿ ಇದ್ದ ಹಾಗೆ ಎಲ್ಲಿಯೂ ಕೂಡ ಹೆಚ್ಚಾಗಿ ಕಿರುಚಾಡುತಿಲ್ಲ. ಅದು ಅಲ್ಲದೆ ಬಂದ ಒಂದು ದಿನಕ್ಕೆ ಅಷ್ಟೊಂದು ಇರಿಟೇಶನ್ ಆಗಿ ಕೂಡ ಮಂಜ ಪ್ರಶಾಂತ್ ಹತ್ರ ಮಾತಾಡಿಲ್ಲ. ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಾಗ ರೋಸ್ಟ್ ಹೆಸರಿನಲ್ಲಿ ಮಂಜನನ್ನ ಟಾರ್ಗೆಟ್ ಮಾಡ್ತಾರೆ. ಮಂಜ ಅದಕ್ಕೆ ಸರಿಯಾದ ಕೌಂಟರ್ ಕೊಡ್ತಾರೆ. ಆಮೇಲೆ ಮಂಜು ಅವರ ಸುದ್ದಿಗೆ ಹೋಗಿರಲ್ಲ ಆದರೂ ಕೂಡ ಕೆರ್ಕೊಂಡ್, ಕರ್ಕೊಂಡ್ ಪ್ರಶಾಂತ್ ಅವರು ತಾವು ಹೈಲೈಟ್ ಆಗೋದಕ್ಕೆ , ಮಂಜನ ಡಮ್ಮಿ ಮಾಡೋಕೆ ನೋಡ್ತಾ ಇದ್ದಾರೆ ಅನಿಸ್ತಾ ಇದೆ ಅಂತಿದ್ದಾರೆ ಮಂಜನ ಅಭಿಮಾನಿಗಳು. 

ಗಿಲ್ಲಿ ಆಗೋಕೆ ಟ್ರೈ ಮಾಡ್ತಿದ್ದಾರಾ ಪ್ರಶಾಂತ್..! 

Bigg Boss)

ಬಿಗ್ ಬಾಸ್ ಮನೆಯ ಆಲ್ಗರಿದಮ್ ಪ್ರತಿ ಸೀಸನ್ನಲ್ಲೂ ಬೇರೆ ಬೇರೆ ರೀತಿ ಇರುತ್ತೆ. ಅದೆಲ್ಲವೂ ಕೂಡ ಅಲ್ಲಿರುವ ಸ್ಪರ್ಧಿಗಳ ಮೇಲೆ ಡಿಪೆಂಡ್ ಆಗಿರುತ್ತೆ. ಉದಾಹರಣೆಗೆ ಒಂದು ಸೀಸನ್ ನಲ್ಲಿ ತುಂಬಾ ಹೈಪರ್ ಆಗಿರೋರು ಬಿಗ್ ಬಾಸ್ ವೀಕ್ಷಕರಿಗೆ ಕಿರಿಕಿರಿ ಅನ್ಸಿದ್ರೆ. ಇನ್ನೊಂದು ಸೀಸನ್ ನಲ್ಲಿ ಅಂತವ್ರೆ ಇಷ್ಟ ಆಗ್ತಾರೆ. ಒಂದು ಸೀಸನ್ ನಲ್ಲಿ ತುಂಬಾ ಕಾಮಿಡಿ ಮಾಡಿಕೊಂಡು ಕಾಲು ಎಳೆಯೋರು ಇಷ್ಟ ಆದ್ರೆ ಇನ್ನೊಂದು ಸೀಸನ್ ನಲ್ಲಿ ಅಂತವರೆ ಇರಿಟೇಶನ್ ಆಗ್ತಾರೆ. 

      ಬಹುಶಃ ಪ್ರಶಾಂತ್ ಅವರು ಹಿಂದಿನ ಸೀಸನ್ ನ ಗಿಲ್ಲಿಯನ್ನ ಇನ್ಸ್ಪಿರೇಷನ್ ಆಗಿ ತೆಗೆದುಕೊಂಡು ಬಂದಿರೋ ಹಾಗಿದೆ. ಬಿಗ್ ಬಾಸ್ ಮನೆಯಲ್ಲಿ ಸಿಕ್ಕಾಪಟ್ಟೆ ಕೂಗಾಟ , ಕಿರುಚಾಟ, ಜಗಳ ಮಾಡೋರು , ಅಂದರೆ ಗಿಲ್ಲಿ ಇದ್ದ ಸೀಸನ್ನಲ್ಲಿ ಅಂದರೆ ಸೀಸನ್ 12 ರಲ್ಲಿ ಸಿಕ್ಕಾಪಟ್ಟೆ ಕಿರುಚಾಡುತ್ತಿದ್ದದ್ದು ಅಶ್ವಿನಿ ಗೌಡ ಅವರು. ಅವರಿಗೆ ಅಪೋಸಿಟ್ ಆಗಿ ನಿಂತದ್ದೇ ಗಿಲ್ಲಿ ಹಾಗೂ ರಕ್ಷಿತಾ. ಸಿಕ್ಕಾಪಟ್ಟೆ ಹೈಲೈಟ್ ಆಗಿದ್ದರು. ಅಲ್ಲಿನ ಪರಿಸ್ಥಿತಿನೇ ಬೇರೆ ಇತ್ತು. ಅಶ್ವಿನಿ ಗೌಡ ಅವರು ರಕ್ಷಿತಾ ಶೆಟ್ಟಿ ಯನ್ನ ಟಾರ್ಗೆಟ್ ಮಾಡಿ ಸಿಕ್ಕಾಪಟ್ಟೆ ಕಿರುಚಾಡಿದ್ದರು. ಅವಳು ಮಾಡದ ತಪ್ಪಿಗೆ ಅವಳನ್ನ ಗುರಿ ಮಾಡಿ ಎಂಟರ್ಟೈನ್ಮೆಂಟ್ ತಗೊಳ್ಳೋಕೆ ಹೋಗಿ, ತಾವು ತೋಡಿದ ಹಳ್ಳಕ್ಕೆ ತಾವೇ ಬಿದ್ದು. ಕೊನೆವರೆಗೂ ವಿಲನ್ ಆಗಿ ವೀಕ್ಷಕರಿಗೆ ಕಾಣಿಸಿಕೊಂಡರು. ಹಾಗಾಗಿ ಇಲ್ಲಿ ಕಿರುಚಾಡುತ್ತಿದ್ದ ಅಶ್ವಿನಿ ಗೌಡ ಅವರ ಅಪೋಸಿಟ್ ನಿಂತು ಹೀರೋ ಆದದ್ದು ಗಿಲ್ಲಿ. ಆದರೆ ಈ ಬಾರಿಯ ಬಿಗ್ ಬಾಸ್ ಮನೆಯಲ್ಲಿರುವಂತಹ ಕಂಟೆಸ್ಟೆಂಟ್ಗಳ ವ್ಯಕ್ತಿತ್ವಗಳು ಬೇರೆ. 

Bigg Boss)

    ಮಾಡ್ರನ್ ಮಹಾ ಕವಿ ಮಂಜ ಎಷ್ಟೇ ಕಿರುಚಾಡುತ್ತಿದ್ದರು. ಅವನಲ್ಲಿ ಒಂದು ಸಾಫ್ಟ್ ಕಾರ್ನರ್ ಕೂಡ ಇದೆ. ಹಾಗೂ ಆತ ಕನ್ನಿಂಗ್ ಅಂದ್ರೆ ಕುತಂತ್ರಿ ರೀತಿ ಆಟ ಆಡಲ್ಲ. ಏನಿದ್ರೂ ಕೂಡ ಆತ ಎದುರಿಗೆ ಹೇಳ್ತಾನೆ. ಅವನೇ ಯಾವಾಗಲೂ ಹೇಳುತ್ತಿರುತ್ತಾನೆ ಕಳ್ಳಾಟ ಆಡಬಾರದು ಅಂತ. ಅದೇ ರೀತಿ ಮಾಡ್ರನ್ ಕವಿ ಮಂಜ ಯಾವತ್ತೂ ಕೂಡ ಹಿಂದಿಂದ ಚೂರಿ ಹಾಕುವುದು , ಇನ್ನೊಬ್ಬರ ಬಗ್ಗೆ ಹಿಂದಿಂದ ತೀರ ಕೆಟ್ಟದಾಗಿ ಮಾತಾಡೋದು, ಇವೆಲ್ಲ ಹೆಚ್ಚಾಗಿ ಮಾಡೋದಿಲ್ಲ. ಆತನ ಬಾಯಿಗೆ ಸ್ವಲ್ಪ ಕಂಟ್ರೋಲ್ ಕಮ್ಮಿ. ಏನಿದ್ರೂ ಎದುರಿಗೆ ಡೈರೆಕ್ಟ್ ಆಗಿ ಹೇಳ್ತಾನೆ. ಅದು ಬಿಟ್ಟರೆ ಮಂಜ ಬಿಗ್ ಬಾಸ್ (Bigg Boss) ಮನೆಯಲ್ಲಿ ಒಬ್ಬ ಸ್ಟ್ರಾಂಗ್ ಕಂಟೆಸ್ಟೆಂಟ್. ಆತ ಯಾವುದೇ ಕನ್ನಿಂಗ್ ಇಲ್ದೆ, ತನ್ನ ಮನಸ್ಸಿನಲ್ಲಿ ಇದ್ದದನ್ನೇ ಹೊರಗೆ ಹಾಕಿ ಆಟ ಆಡ್ತಾ ಇದ್ದಾನೆ . ಮಂಜನ ಈ ಗುಣಕ್ಕೆ ಆತ ಅಬಿಮಾನಿಗಳನ್ನು ಗಳಿಸಿಕೊಂಡಿದ್ದಾನೆ. ಆತನ ಆಟ ಕೂಡ ಇಷ್ಟ ಆಗ್ತಾ ಇದೆ. 

Bigg Boss

ಬಿಗ್ ಬಾಸ್ (Bigg Boss) ಪ್ರಾರಂಭದ ದಿನಗಳಲ್ಲಿ ಆತ ಹೈ ಬಿಪಿ ಬಂದವರಂತೆ ಮಾಡುತ್ತಿದ್ದು,ಕಿರುಚಾಡುತ್ತಿದ್ದದ್ದು ಹೆಚ್ಚಿನವರಿಗೆ ಕಿರಿ ಕಿರಿ ಅನಿಸಿದ್ದಂತು ನಿಜ. ಆತ ತನ್ನ ಕೋಪವನ್ನು ಕಂಟ್ರೋಲ್ ನಲ್ಲಿಟ್ಟುಕೊಂಡು, ಈಗ ಒಂದು ಟ್ರ್ಯಾಕ್ ಗೆ ಬಂದು ಆಟ ಆಡ್ತಾ ಇದ್ದಾನೆ. ಅಷ್ಟೇ ಅಲ್ಲದೆ ಮಾಡ್ರನ್ ಕವಿ ಮಂಜ ಈಗಾಗಲೇ ಹೊರಗಡೆ ಸಿಕ್ಕಾಪಟ್ಟೆ ಫ್ಯಾನ್ ಬೇಸ್ ಕ್ರಿಯೆಟ್ ಮಾಡಿದ್ದಾರೆ. ಈಗಲೂ ಕೂಡ ಹೆಚ್ಚಿನವರು ಈ ಬಾರಿಯ ಬಿಗ್ ಬಾಸ್ ಸೀಸನ್ 13 ರ ವಿನ್ನರ್ ಮಾಡ್ರನ್ ಮಹಾ ಕವಿ ಮಂಜನೇ ಆಗಬೇಕು ಅಂತ ಮಂಜನ ಅಭಿಮಾನಿಗಳು ಹೇಳ್ತಾ ಇದ್ದಾರೆ. 

ಇರಲಾರದೆ ಇರುವೆ ಬಿಟ್ಕೊಳ್ತಾರಾ ಪ್ರಶಾಂತ್..! 

Bigg Boss

ಬಿಗ್ ಬಾಸ್ ಸೀಸನ್ 13 ರ ವೈಲ್ಡ್ ಕಾರ್ಡ್ ಎಂಟ್ರಿಯಲ್ಲಿ ಈ ಬಾರಿ ಮೂರು ಜನ ಕಂಟೆಸ್ಟೆಂಟ್ಗಳು ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟಿದ್ದಾರೆ. ಇದರಲ್ಲಿ ಒಬ್ಬರು ಘಾಟಿ ಗಾನವಿ ಎಂದೇ ಫೇಮಸ್ ಆದ ಗಾನವಿ ಗೌಡ, ಸೋನಿಕ ಗೌಡ ಹಾಗೂ ಕಾಮಿಡಿ ಶೋ ಆದಂತಹ ಗಿಚ್ಚಿ ಗಿಲಿ ಗಿಲಿ ಹಾಗೂ ಕ್ವಾಟ್ಲೆ ಕಿಚನ್ ನಲ್ಲಿ ಕ್ವಾಟ್ಲೆಯಾಗಿ ಭಾಗವಹಿಸಿ ಹೆಸರು ಮಾಡಿದಂತಹ ಕಾಮಿಡಿಯನ್ ಪ್ರಶಾಂತ್ ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ನೀಡಿದ್ದಾರೆ. 

   ಬಿಗ್ ಬಾಸ್ ನಲ್ಲಿ ಈ ಬಾರಿ ಫ್ಲೈಟ್ ಕಾನ್ಸೆಪ್ಟ್ ಆಗಿದ್ದರಿಂದ ಇವರನ್ನ ಹೈಜಾಕರ್ಸ್ ಎಂದು ಬಿಗ್ ಬಾಸ್ ಮನೆಯ ಒಳಗೆ ಎಂಟ್ರಿ ಕೊಟ್ಟಿದ್ದಾರೆ.ಹೈಜಾಕರ್ಸ್ ಆಗಿ ಮನೆಗೆ ಎಂಟ್ರಿ ಕೊಡ್ತಾ ಇದ್ದ ಹಾಗೆ ಈ ಮೂರು ಜನಕ್ಕೆ ಒಂದು ಟಾಸ್ಕ್ ನೀಡಲಾಗಿತ್ತು. ಅದೇನೆಂದರೆ ಮನೆಯಲ್ಲಿರುವ ಕೆಲವೊಂದು ಸದಸ್ಯರನ್ನ ಆಯ್ಕೆ ಮಾಡಿ , ಅವರಿಗೆ ಬಿಗ್ ಬಾಸ್ ನಿಂದ ಕೆಲವೊಂದು ಸವಲತ್ತುಗಳು ಸಿಗದ ಹಾಗೆ ಹೈಜಾಕ್ ಮಾಡುವುದು. ಈ ಟಾಸ್ಕ್ ನಲ್ಲಿ ಘಾಟಿ ಗಾನವಿ , ಯಶ್ವಂತ್ ಹಾಗೂ ಕಿರಣ್ ಶಾಸ್ತ್ರಿ ಯನ್ನ ಹೈಜಾಕ್ ಮಾಡಿದರೆ. ಸೋನಿಕ ಗೌಡ ಅವರು ಮತ್ತೆ ಕಿರಣ್ ಶಾಸ್ತ್ರೀಯನೇ ಹೈಜಾಕ್ ಮಾಡ್ತಾರೆ. ಹಾಗೂ ಪ್ರಶಾಂತ್ ಅವರು ಮಾಡ್ರನ್ ಮಹಾಕವಿ ಮಂಜ ಹಾಗೂ ಲಿಖಿತ್ ನನ್ನು ಹೈಜಾಕ್ ಮಾಡ್ತಾರೆ. 

Bigg Boss)

     ಪ್ರಶಾಂತ್ ಆಡಿದ ರೀತಿ ಬಗ್ಗೆ ಹೇಳಬೇಕಾದರೆ, ಇವರು ಬಿಗ್ ಬಾಸ್ ಮನೆಗೆ ಬರುವಾಗ ಸ್ಟ್ರಾಂಗ್ ಆಗಿ, ಮೆಂಟಲಿ ಡಿಸೈಡ್ ಮಾಡಿದ್ದಾರೆ. ನಾನು ಮಂಜನನ್ನೇ ಟಾರ್ಗೆಟ್ ಮಾಡಬೇಕು ಆಗಲೇ ನಾನು ಬಿಗ್ ಬಾಸ್ ಮನೆಯಲ್ಲಿ ಕಾಣಿಸಿಕೊಳ್ಳೋಕೆ ಸಾಧ್ಯ ಅಂತ. 

      ಈಗಾಗಲೇ ಮಂಜು ಹೊರಗಡೆ ಒಂದು ಹೈಪ್ ಕ್ರಿಯೇಟ್ ಮಾಡಿದ್ದಾರೆ. ಸೂಕ್ತವಾದ ಕಾರಣವಿಲ್ಲದೆ, ಮಂಜನನ್ನ ಟಾರ್ಗೆಟ್ ಮಾಡಲೇಬೇಕು ಅನ್ನೋ ಇಂಟೆನ್ಶನ್ ನಿಂದ, ಇದೇ ರೀತಿ ಪ್ರಶಾಂತ್ ಅವರು ಟಾರ್ಗೆಟ್ ಮಾಡುತ್ತಾ ಹೋದರೆ , ಇರ್ಲಾರ್ದೆ ಇರುವೆ ಬಿಟ್ಟುಕೊಂಡ ಎನ್ನುವ ಪರಿಸ್ಥಿತಿಯೇ ಬರುತ್ತದೆ. ಇದು ಮೊದಲನೇ ವಾರ. ಮುಂದಿನ ಆಟವನ್ನು ಪ್ರಶಾಂತ್ ಅವರು ಯಾವ ರೀತಿ ತೆಗೆದುಕೊಂಡು ಹೋಗ್ತಾರೆ ಅನ್ನೋದೇ ಕುತೂಹಲ ಕಾರಿಯಾದ ವಿಷಯ ಆಗಿದೆ. 

Leave a Comment