ವಿಜಯ್ ದೇವರಕೊಂಡ ( Vijay Devarakonda) ದೊಡ್ಡ ರೆಡ್ ಫ್ಲ್ಯಾಗ್. ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡನನ್ನ ತುಂಬಾ ಪ್ರೀತಿ ಮಾಡ್ತಾಳೆ , ಆದರೆ ವಿಜಯ ದೇವರಕೊಂಡ, ರಶ್ಮಿಕ ಮಂದಣ್ಣ ಅವನನ್ನ ಇಷ್ಟಪಡುತ್ತಿದ್ದಾಳೆ ಅನ್ನೋ ಕಾರಣಕ್ಕೆ ಅವಳ ಜೊತೆ ಇದ್ದಾನೆ. ವಿಜಯ ದೇವರಕೊಂಡನಿಗೆ ರಶ್ಮಿಕಾ ಮಂದಣ್ಣ ಮೇಲೆ ಅಷ್ಟೊಂದು ಪ್ರೀತಿ ಇಲ್ಲ. ಇದು ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಓಡಾಡ್ತಾ ಇರುವ ವಿಷಯ .
ಈ ವಿಷಯ ಯಾಕೆ ವೈರಲ್ ಆಯ್ತು ಅನ್ನೋದಕ್ಕೆ ಕಾರಣ, ರಶ್ಮಿಕಾ ಮಂದಣ್ಣ ಹಾಗೂ ವಿಜಯ ದೇವರಕೊಂಡ ಹಿಂದಿ ರಿಯಾಲಿಟಿ ಶೋ ಆದಂತಹ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಭಾಗವಹಿಸಿರುತ್ತಾರೆ. ಈ ಸಂದರ್ಭದಲ್ಲಿ ವಿಜಯ್ ದೇವರಕೊಂಡ ರಶ್ಮಿಕ ಮಂದಣ್ಣ ಬಗ್ಗೆ ಆಡಿದ ಮಾತುಗಳು ಇದೀಗ ಆತನನ್ನ ಒಬ್ಬ ರೆಡ್ ಫ್ಲ್ಯಾಗ್ ಎಂದು ಜನರ ಕಣ್ಣಿಗೆ ಕಾಣಿಸುವಂತೆ ಮಾಡಿದೆ.

ಈ ಕಾರ್ಯಕ್ರಮದ ಮೂಲಕ ರಶ್ಮಿಕ ಮಂದಣ್ಣ ಹಾಗೂ ವಿಜಯದೇವರಕೊಂಡ ಮದುವೆಯ ವಿಷಯವಾಗಿ ದೊಡ್ಡ ವಿಷಯ ಹೊರಗೆ ಬಿದ್ದಿದೆ. ಅದೇನು ಅಂತ ಅಂದ್ರೆ ತೆಲುಗು ನಟ ವಿಜಯ್ ದೇವರಕೊಂಡ ರಶ್ಮಿಕಾಳ ಹಿಂದೆ ಹೋಗಿಲ್ಲ, ರಶ್ಮಿಕಾನೆ ವಿಜಯ ದೇವರಕೊಂಡನನ್ನ ವರ್ಷವಿಡಿ ನನ್ನನ್ನ ಮದುವೆಯಾಗುವ, ಮದುವೆಯಾಗು ಅಂತ ಕಾಡಿ ಬೇಡಿ ಮದುವೆಯಾದಳು ಎನ್ನುವಂತಹ ವಿಷಯ. ಇದು ಸ್ವತಹ ಅವರಿಬ್ಬರ ಬಾಯಿಂದಲೇ ಹೊರ ಬಿದ್ದಿದೆ. ಈ ಕಾರ್ಯಕ್ರಮದಲ್ಲಿ ಕಾರಣ್ ಇವರಿಬ್ಬರ ಮದುವೆ ಹಾಗೂ ರಿಲೇಷನ್ಶಿಪ್ ಬಗ್ಗೆ ಪ್ರಶ್ನೆ ಕೇಳ್ತಾರೆ, ಯಾರು ಫಸ್ಟ್ ಪ್ರಪೋಸ್ ಮಾಡಿದ್ದು ಅಂತ. ಆಗ ವಿಜಯ್ ದೇವರಕೊಂಡಾನೇ “ನನಗೆ ಮದುವೆಯಾಗುವ ಯಾವುದೇ ಉದ್ದೇಶ ಇರಲಿಲ್ಲ,

ರಶ್ಮಿಕಾ ಮಂದಣ್ಣನೇ ವಿಜಯ್ ದೇವರಕೊಂಡನನ್ನು ( Vijay Devarakonda) ನೂರು ಬಾರಿ ಮದುವೆಯಾಗೋಣ ಅಂತ ಕೇಳಿಕೊಂಡಳು, ನಾನು ಪ್ರತಿ ಬಾರಿ ಯಾಕೆ ಅಂತ ಕೇಳುತ್ತಿದ್ದೆ. ನಂತರ ನೂರು ಬಾರಿ ಕೇಳಿಕೊಂಡಳಲ್ಲ ಅಂತ ಕೊನೆಗೆ ಮದುವೆಯಾದೆ ಅಂತ ಸ್ವತಹ ವಿಜಯ ದೇವರಕೊಂಡ ಇಂಟರ್ವ್ಯೂ ಒಂದರಲ್ಲಿ ಕರಣ್ ಜೊತೆ ಹಂಚಿಕೊಂಡಿದ್ದಾರೆ.
ರಕ್ಷಿತ್ ಶೆಟ್ಟಿ ಜೊತೆ ಎಂಗೇಜ್ಮೆಂಟ್ ಮುರಿದುಕೊಂಡಿದ್ದ ರಶ್ಮಿಕ

ನಾವೆಲ್ಲರೂ ಕೂಡ ಅನ್ಕೊಂಡಿದ್ವಿ ರಕ್ಷಿತ್ ಶೆಟ್ಟಿ ಜೊತೆ ರಶ್ಮಿಕ ಮಂದಣ್ಣ ಬ್ರೇಕ್ ಅಪ್ ಮಾಡಿಕೊಳ್ಳಲು ಕಾರಣ, ಆಕೆ ವಿಜಯ್ ದೇವರಕೊಂಡನ ಜೊತೆ ರಿಲೇಶನ್ ಶಿಪ್ ನಲ್ಲಿದ್ದಳು. ಅದಕ್ಕಾಗಿ ಆಕೆ ರಕ್ಷಿತ್ ಶೆಟ್ಟಿ ಜೊತೆಗೆ ಎಂಗೇಜ್ಮೆಂಟ್ ಮುರಿದುಕೊಂಡಿದ್ದಳು ಎಂದು ಹೇಳಲಾಗುತ್ತಿತ್ತು. ಆದರೆ ವಿಜಯ ದೇವರಕೊಂಡ ಯಾವುದೇ ರೀತಿ ರಶ್ಮಿಕ ಮಂದಣ್ಣನನ್ನ ಪ್ರೀತಿಸಿರಲಿಲ್ಲ ಅನ್ನೋದು ಈಗ ಹೊರಗೆ ಬಿದ್ದಿದೆ. 2016 ರಲ್ಲಿ ತೆರೆಕಂಡ “ಕಿರಿಕ್ ಪಾರ್ಟಿ” ಸಿನಿಮಾ ಮೂಲಕ ರಕ್ಷಿತ್ ಶೆಟ್ಟಿಗೆ ರಶ್ಮಿಕಾ ಮಂದಣ್ಣ ಪರಿಚಯವಾಗುತ್ತೆ. ಈ ಸಿನಿಮಾದ ನಾಯಕನಾಗಿ ರಕ್ಷಿತ್ ಶೆಟ್ಟಿ ಇದ್ದರೆ, ನಾಯಕಿಯಾಗಿ ರಶ್ಮಿಕ ಮಂದಣ್ಣ ನಟಿಸುತ್ತಾರೆ. ಈ ಸಿನಿಮಾ ಸೂಪರ್ ಹಿಟ್ ಆಗುವ ಮೂಲಕ ರಶ್ಮಿಕ ಮಂದಣ್ಣಗೆ ಸಿನಿಮಾ ಜಗತ್ತಿಗೆ ದಾರಿ ಮಾಡಿ ಕೊಡುತ್ತೆ. ಇದಾದ ನಂತರ ರಶ್ಮಿಕಾ ಮಂದಣ್ಣ ಮುಟ್ಟಿದ್ದೆಲ್ಲವು ಚಿನ್ನವೆ.

ಈ ನಡುವೆ ಈ ಸಿನಿಮಾ ಶೂಟಿಂಗ್ ಮಾಡುತ್ತಾ… ಮಾಡುತ್ತಾ… ರಕ್ಷತ್ ಶೆಟ್ಟಿಗೆ, ರಶ್ಮಿಕಾ ಮಂದಣ್ಣ ಮೇಲೆ ಲವ್ ಆಗುತ್ತೆ. ರಕ್ಷಿತ್ ಶೆಟ್ಟಿ ರಶ್ಮಿಕ ಮಂದಣ್ಣ ಗೆ ಪ್ರಪೋಸ್ ಮಾಡ್ತಾನೆ, ಆಕೆ ಕೂಡ ಒಪ್ಪಿ ಅವರಿಬ್ಬರೂ ಕೂಡ ರಿಲೇಷನ್ಶಿಪ್ ಗೆ ಬರುತ್ತಾರೆ. ಇದಾದ ನಂತರ ಬರೇ ಒಂದೇ ವರ್ಷದಲ್ಲಿ ಇವರಿಬ್ಬರು ಮದುವೆಯಾಗಬೇಕೆಂದು ನಿರ್ಧರಿಸುತ್ತಾರೆ. ಇಬ್ಬರು ಮನೆಯವರ ಒಪ್ಪಿಗೆಯ ಮೇರೆಗೆ 2017 ರ ಜುಲೈ 3 ರಂದು ರಶ್ಮಿಕಾ ಮಂದಣ್ಣ ಹಾಗೂ ರಕ್ಷಿತ್ ಶೆಟ್ಟಿ ಗ್ರಾಂಡ್ ಆಗಿ ಎಂಗೇಜ್ಮೆಂಟ್ ಮಾಡಿಕೊಳ್ಳುತ್ತಾರೆ. ಇದಾದ ನಂತರ ರಶ್ಮಿಕಾಗೆ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಆಫರ್ ಬರಲು ಶುರುವಾಗುತ್ತೆ. ತೆಲುಗುನಲ್ಲಿ ಆಕೆಗೆ ಬಂದ ಮೊದಲ ಆಫರ್ ವಿಜಯದೇವರಕೊಂಡ ನಾಯಕನಾಗಿ ನಟಿಸಿರುವ ಸಿನಿಮಾ ಗೀತ ಗೋವಿಂದಂ. ಇದಾದ ನಂತರ ಚಲೋ ಅನ್ನುವ ತೆಲುಗು ಸಿನಿಮಾದ ಆಫರ್ ಬರುತ್ತೆ. ಆಕೆ ಅದರಲ್ಲೂ ಕೂಡ ನಟಿಸುತ್ತಾಳೆ ಆದರೆ ಚಲೋ ಸಿನಿಮಾ, ಗೀತ ಗೋವಿಂದಂ ಸಿನಿಮಾಗಿಂತ ಮೊದಲೇ ರಿಲೀಸ್ ಆಗುತ್ತೆ. ನಂತರ ಗೀತ ಗೋವಿಂದ ಸಿನಿಮಾ ರಿಲೀಸ್ ಆಗುತ್ತೆ. ಈ ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡುತ್ತೆ. ಈ ಸಿನಿಮಾದ ರೋಮ್ಯಾಂಟಿಕ್ ಸೀನ್ ಸಿಕ್ಕಾಪಟ್ಟೆ ಸದ್ದು ಮಾಡುತ್ತದೆ. ಇದಾದ ನಂತರವೇ 2018 ರಲ್ಲಿ ರಶ್ಮಿಕ ಮಂದಣ್ಣ ಹಾಗೂ ರಕ್ಷಿತ್ ಶೆಟ್ಟಿ ಎಂಗೇಜ್ಮೆಂಟ್ ಮುರಿದು ಬಿದ್ದು ಬ್ರೇಕ್ ಅಪ್ ಆಗುತ್ತೆ. ಆ ಸಮಯದಲ್ಲಿ ಬ್ರೇಕ್ ಅಪ್ ಆಗಲು ಕಾರಣ ರಶ್ಮಿಕಾ ಮಂದಣ್ಣಾಳೆ. ಆಕೆ ಗೀತ ಗೋವಿಂದಂ ಸಿನಿಮಾದಲ್ಲಿ ಕಿಸ್ಸಿಂಗ್ ಸೀನ್ ಮಾಡಿರುವುದರಿಂದ ರಕ್ಷಿತ್ ಶೆಟ್ಟಿಗೆ ಬೇಜಾರಾಗಿದೆ. ಈ ಬಗ್ಗೆ ರಕ್ಷಿತ್ ಶೆಟ್ಟಿ, ರಶ್ಮಿಕ ಮಂದಣ್ಣ ಬಳಿ ಕೇಳಿದಾಗ ಇವರಿಬ್ಬರ ಮಧ್ಯೆ ಗಲಾಟೆಯಾಗಿದೆ. ಹಾಗಾಗಿ ಬ್ರೇಕ್ ಅಪ್ ಆಯ್ತು ಅನ್ನೋ ವಿಷಯ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತೆ.
ಪಾಸಿಟಿವ್ ಇಂದ ನೆಗೆಟಿವ್ ಆಗಿ ಟ್ರೋಲ್ ಆಗಲು ಶುರುವಾದ ರಶ್ಮಿಕ

ರಶ್ಮಿಕಾ ಮಂದಣ್ಣ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಫೇಮಸ್ ಆದಾಗ, ರಶ್ಮಿಕ ಮಂದಣ್ಣಗೆ ಸಿಕ್ಕಾಪಟ್ಟೆ ಫ್ಯಾನ್ ಫಾಲೋಯಿಂಗ್ ಶುರುವಾಗುತ್ತೆ. ಅದಾದ ನಂತರ ಆಕೆ ರಕ್ಷಿತ್ ಶೆಟ್ಟಿ ಯನ್ನು ಮದುವೆಯಾಗುತ್ತಿದ್ದಾಳೆ ಅನ್ನೋ ವಿಷಯ ಗೊತ್ತಾದ ಅಭಿಮಾನಿಗಳೆಲ್ಲ ತುಂಬಾ ಖುಷಿಪಟ್ಟಿದ್ದರು. ಇನ್ನೊಂದೆಡೆ ರಶ್ಮಿಕ ಮಂದಣ್ಣ ಹಾಗೂ ರಕ್ಷಿತ್ ಶೆಟ್ಟಿ ನಡುವೆ ಬರೋಬ್ಬರಿ 10 ವರ್ಷ ವಯಸ್ಸಿನ ಅಂತರ ಇದ್ದಿತ್ತು. ಈ ವಿಷಯವಾಗಿ ಸ್ವಲ್ಪ ಕಾಮಿಡಿಯಾಗಿ ಟ್ರೋಲ್ ಆಗಿದ್ದರು. ಆದರೆ ರಶ್ಮಿಕಾ ಮಂದಣ್ಣ ಬಗ್ಗೆ ಸಿಕ್ಕಾಪಟ್ಟೆ ಪಾಸಿಟಿವ್ ಒಪೀನಿಯನ್ ಜನರಲ್ಲಿ ಇದ್ದಿತ್ತು. ಆದರೆ ಯಾವಾಗ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಎಂಗೇಜ್ಮೆಂಟ್ ಮುರಿದು ಬಿದ್ದಿತ್ತೋ ಆ ಕ್ಷಣದಿಂದ ರಶ್ಮಿಕಾ ಮಂದಣ್ಣ ನೆಗೆಟಿವ್ ಆಗಿ, ಸಿಕ್ಕಾಪಟ್ಟೆ ಟ್ರೂಲ್ ಆಗಲು ಶುರುವಾಗುತ್ತಾಳೆ. ಎಲ್ಲಿಯವರೆಗೂ ಅಂತ ಅಂದ್ರೆ ಆಕೆಯೇ ಒಂದು ಇಂಟರ್ವ್ಯೂನಲ್ಲಿ ಹೇಳುತ್ತಾಳೆ, ಹೊರಗಡೆ ನಾವು ಎಷ್ಟೇ ನಗ್ತಾ ಇದ್ರು ಮನೆಯ ಒಳಗೆ ಹೋದ ಮೇಲೆ, ನಾಲ್ಕು ಗೋಡೆಯ ಮಧ್ಯೆ ಕೂತಾಗ ನಿಜವಾದ ಫೀಲಿಂಗ್ಸ್ ಹೊರಗೆ ಬರುವುದು, ಎಷ್ಟು ಡಿಪ್ರೆಶನ್ ಗೆ ಹೋಗಿದ್ದೇವೆ ಅಂತ ಗೊತ್ತಾಗುತ್ತೆ ಅಂತ ಹೇಳಿಕೊಂಡಿದ್ದಳು.
ವಿಜಯ್ ನನ್ನ ಮದುವೆಯಾಗು ಎಂದು ಒತ್ತಾಯಿಸಿದ ರಶ್ಮಿಕ

ವಿಜಯ ದೇವರಕೊಂಡ ( Vijay Devarakonda) ಈ ಹಿಂದೆ ರಿಲೇಶನ್ಶಿಪ್ ನಲ್ಲಿ ಇದ್ದಿದ್ದರು. ಅದು ಬ್ರೇಕ್ ಅಪ್ ಆದ ಮೇಲೆ ಅವರಿಗೆ ಪ್ರೀತಿಯ ಮೇಲೆ ಯಾವುದೇ ನಂಬಿಕೆ ಇರಲಿಲ್ಲ. ಅವರು ಬರಿ ಸಿನಿಮಾ ಮಾಡುವುದು, ದೊಡ್ಡ ಸ್ಟಾರ್ ನಟನಾಗಬೇಕೆಂಬ ಆಸೆಯ ಬೆನ್ನತ್ತಿ, ಪ್ರೀತಿ ಪ್ರೇಮಕ್ಕೆಲ್ಲ ಬ್ರೇಕ್ ಹಾಕಿದ್ದರು. ಇದಾದ ನಂತರ ವಿಜಯ್ ದೇವರಕೊಂಡಾಗೆ ರಶ್ಮಿಕ ಮಂದಣ್ಣ ಸಿನಿಮಾ ಮೂಲಕ ಪರಿಚಯವಾಗುತ್ತಾರೆ. ಇವರಿಬ್ಬರು ರಿಲೇಷನ್ಶಿಪ್ ನಲ್ಲಿ ಇದ್ದಾರೆಂದು ಮೊದಲು ಗಾಸಿಪ್ ಶುರುವಾಗುತ್ತೆ. ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಹಲವಾರು ಕಡೆ ತಿರುಗಾಡಲು ಹೋಗಿದ್ದ ಫೋಟೋಗಳನ್ನ ಅಪ್ಲೋಡ್ ಮಾಡುತ್ತಿದ್ದರು. ಆದರೆ ಅವರಿಬ್ಬರೂ ಒಟ್ಟಿಗೆ ಇರುವ ಫೋಟೋವನ್ನು ಅಪ್ಲೋಡ್ ಮಾಡುತ್ತಿರಲಿಲ್ಲ. ಆದರೆ ಜನರು ಅವರಿಬ್ಬರು ಫೋಟೋದಲ್ಲಿ ಇದ್ದ ಪ್ಲೇಸ್ ಅನ್ನು ಕಂಡುಹಿಡಿದು, ಇಬ್ಬರು ಅಪ್ಲೋಡ್ ಮಾಡಿದಂತಹ ಫೋಟೋವನ್ನು ನೋಡಿ, ಇವರಿಬ್ಬರೂ ಒಟ್ಟಿಗೆ ಹೋಗಿದ್ದಾರೆ ಎಂದು ಗುಸು-ಗುಸು ಮಾತಾಡಲು ಶುರುವಾಗುತ್ತೆ. ಇದಾದ ನಂತರ ಇವರಿಬ್ಬರೂ ರಿಲೇಷನ್ಶಿಪ್ ನಲ್ಲಿದ್ದದ್ದು ಹೌದು ಎನ್ನುವುದಕ್ಕೆ ಸಾಕ್ಷಿಯಾಗಿ, ಅವರಿಬ್ಬರು ಮದುವೆಯಾಗುತ್ತಿರುವ ವಿಷಯ ಹೊರ ಬೀಳುತ್ತೆ. ಆದರೆ ಇದರ ಹಿಂದಿನ ನಿಜಾಂಶ ಏನು ಅಂತ ಅಂದ್ರೆ. ವಿಜಯ್ ದೇವರಕೊಂಡ ರಶ್ಮಿಕಾಳಣ್ಣ ಮದುವೆಯಾಗು ಎಂದು ಕೇಳಿಕೊಂಡಿಲ್ಲ. ಸ್ವತಹ ರಶ್ಮಿಕಾ ಮಂದಣ್ಣಾಳೆ ವಿಜಯ್ ದೇವರಕೊಂಡನನ್ನು ಮದುವೆಯಾಗು ಎಂದು ಒತ್ತಾಯಿಸಿ ಮದುವೆಯಾಗಿದ್ದಾಳೆ ಎನ್ನುವ ವಿಷಯ.
ಇಂಟರ್ವ್ಯೂನಲ್ಲಿ ವಿಜಯ್ ದೇವರಕೊಂಡ ಹೇಳಿದ ಪ್ರಕಾರ, ರಶ್ಮಿಕಾ ನನ್ನನ್ನ ನೂರು ಬಾರಿ ಮದುವೆಯಾಗೋಣ..! ಮದುವೆಯಾಗೋಣ..! ಅಂತ ಹೇಳಿದ ಮೇಲೆ, ಆಕೆ ನೂರು ಬಾರಿ ಕೇಳಿದಳಲ್ಲ ಅಂತ ನಾನು ಮದುವೆಯಾದೆ ಅಂತ ಹೇಳ್ತಾನೆ. ಹಾಗೂ ರಶ್ಮಿಕಾ ಮಂದಣ್ಣ ಕೂಡ ನೂರು ದಿನ ಅಲ್ಲ , ವರ್ಷ ವಿಡಿ ನಾನು ಮದುವೆಯಾಗೋಣ.. ಮದುವೆಯಾಗೋಣ… ಅಂತ ತುಂಬಾ ಕೇಳಿಕೊಂಡೆ ಅದಾದ ನಂತರ ವಿಜಯ ದೇವರಕೊಂಡ ಒಪ್ಪಿಕೊಂಡರು. ನಾವಿಬ್ಬರು ಮದುವೆಯಾದೆವು ಎಂದು ಆಕೆ ಹೇಳ್ತಾಳೆ. ಈಗಲೂ ಕೂಡ ರಶ್ಮಿಕ ಮಂದಣ್ಣಾಳೆ ವಿಜಯ್ ದೇವರಕೊಂಡನಾ ತುಂಬಾ ಪ್ರೀತಿಸುತ್ತಾಳೆ ಎನ್ನುವ ವಿಷಯ ಸಿಕ್ಕಾಪಟ್ಟೆ ಸದ್ದು ಮಾಡ್ತಾ ಇದೆ.
1 thought on “ವಿಜಯ್ ದೇವರಕೊಂಡನನ್ನ 100 ಬಾರಿ ಕಾಡಿಬೇಡಿ ಮದುವೆಯಾದಾಳು ರಶ್ಮಿಕ ಮಂದಣ್ಣ…!”