ಘಾಟಿ ಗಾನ್ವಿ ಬಿಗ್ ಬಾಸ್ ಮನೆಯಲ್ಲಿ ಫೇಕ್ ಗಾನ್ವಿ ಆದ್ರ…!

        ಬಿಗ್ ಬಾಸ್ (Bigg Boss) ಸೀಸನ್ 13ರ ಸದಾ ಹಸನ್ಮುಖಿ ಘಾಟಿ ಗಾನ್ವಿ. ಯಾಕೆ ಘಾಟಿ ಗಾನ್ವಿ ಯನ್ನ ಸದಾ ಹಸನ್ಮುಖಿ ಅಂತ ಹೇಳ್ತಾ ಇದ್ದೀವಿ ಅಂತ ಅಂದ್ರೆ. ಬಿಗ್ ಬಾಸ್ ಮನೆಯಲ್ಲಿ ಆಕೆ ಅದೇಷ್ಟೇ ಗಲಾಟೆ ಮಾಡಿ ದೊಂಬಿ ಎಬ್ಬಿಸಿದರು ಕೂಡ, ಆಕೆಯ ಮುಖದಲ್ಲಿ ನಗು ಮಾತ್ರ ಹೋಗೋದಿಲ್ಲ. ತನ್ನ ತಪ್ಪಿದ್ದರೂ ಕೂಡ, ಬೇರೆ ಕಂಟೆಸ್ಟೆಂಟ್ಗಳು ಆಕೆಯ ವಿರುದ್ಧವಾಗಿ ನಿಂತಿದ್ದರೂ ಕೂಡ, ಆಕೆ ನಗಾಡಿಕೊಂಡೆ ಅವರ ಜೊತೆ ಜಗಳ ಆಡ್ತಾಳೆ. ಇದು ಘಾಟಿ ಗಾನ್ವಿ ಅವರ ಸ್ಪೆಷಲ್ ಟ್ಯಾಲೆಂಟ್ ಅಂತಾನೆ ಹೇಳಬಹುದು. ಬಿಗ್ ಬಾಸ್ ನೀಡಿದ ಟಾಸ್ಕ್ ಒಂದರಲ್ಲಿ ನನಗೆ ಅವಕಾಶ ನೀಡಿ ನಾನು ಎಲ್ಲರಿಗೂ ಸಮನಾಗಿ ಕಾಯಿನ್ ಹಂಚುತ್ತೀನಿ ಅಂತ ಹೇಳಿ ತಾನೆ ಹೆಚ್ಚು ಕಾಯಿನ್ ಪಡೆದುಕೊಂಡು ಮತ್ತೆ ಎಲ್ಲರ ಕಣ್ಣಿಗೆ ಕೆಟ್ಟವಳಾಗಿದ್ದಾಳೆ ಘಾಟಿ ಗಾನ್ವಿ. 

ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಘಾಟಿ ಗಾನ್ವಿ Bigg Boss

Bigg Boss

        ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಮೂಲಕ ಘಾಟಿ ಗಾನ್ವಿ ಎಂಟ್ರಿ ಕೊಡ್ತಾರೆ. ಸಖತ್ ರಗಡಾಗಿ ಬಿಗ್ ಬಾಸ್ ಮನೆಗೆ ಘಾಟಿ ಗಾನ್ವಿ ಎಂಟ್ರಿ ಕೊಡ್ತಾರೆ. ಬರ ಬರುತ್ತಲೇ ಸ್ವಿಮ್ಮಿಂಗ್ ಪೂಲ್ ಗೆ ಕಿರಣ್ ಶಾಸ್ತ್ರೀಯ ಫೋಟೋವನ್ನು ಟೈಯರ್ ಗೆ ಅಂಟಿಸಿ, ಅದನ್ನು ಸ್ವಿಮ್ಮಿಂಗ್ ಪೂಲ್ ಗೆ ಎಸೆದು ಶಾಸ್ತ್ರೀಯನ್ನ ನಾಮಿನೇಟ್ ಮಾಡಿ, ಮಾಸ್ ಆಗಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದರು. ಎಂಟ್ರಿ ಕೊಟ್ಟಾಗ ಘಾಟಿ ಗಾನ್ವಿ ಬಿಗ್ ಬಾಸ್ ಮನೆಯಲ್ಲಿ ಈಗಾಗಲೇ ಇದ್ದಂತಹ ಎಲ್ಲರೊಂದಿಗೆ ಚೆನ್ನಾಗಿ ಮಾತನಾಡಿ ಎಲ್ಲರ ಮನಸ್ಸನ್ನು ಗೆದ್ದದಂತು ಅಷ್ಟೇ ಸತ್ಯ. ಅದಕ್ಕೆ ಉದಾಹರಣೆಯಾಗಿ ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮೂರು ಜನ ಎಂಟ್ರಿ ಕೊಡ್ತಾರೆ. ಅದರಲ್ಲಿ ಒಬ್ಬರು ಕಾಮಿಡಿಯನ್ ಪ್ರಶಾಂತ್, ಸೋನಿಕ ಗೌಡ ಹಾಗೂ ಘಾಟಿ ಗಾನ್ವಿ. ಆಗ ಬಿಗ್ ಬಾಸ್ ಮನೆಯ ಸದಸ್ಯರಿಗೆ ಒಂದು ಆಟವನ್ನು ಆಯೋಜಿಸುತ್ತಾರೆ. ಈ ಆಟದಲ್ಲಿ ಬಿಗ್ ಬಾಸ್ ಎರಡು ತಂಡವಾಗಿ ವಿಂಗಡಿಸುತ್ತಾರೆ. ಎರಡು ತಂಡಕ್ಕೆ ನಾಯಕರಾಗುವ ಅದೃಷ್ಟ ವೈಲ್ಡ್ ಕಾರ್ಡ್ ಕೊಟ್ಟಂತಹ ಗಾನ್ವಿ, ಪ್ರಶಾಂತ್ ಹಾಗೂ ಸೋನಿಕಾಗೆ ಸಿಗುತ್ತೆ. 

Bigg Boss

        ಆದರೆ ಅಲ್ಲಿರುವುದು ಎರಡೇ ಟೀಮ್,  ಹಾಗಾಗಿ ಬಿಗ್ ಬಾಸ್  ತಮ್ಮ ತಂಡಕ್ಕೆ ಯಾರು ಟೀಮ್ ಲೀಡರ್ ಆಗಬೇಕು ಅಂತ ಸೆಲೆಕ್ಟ್ ಮಾಡುವ ಅವಕಾಶ ಮನೆಯವರಿಗೆ ನೀಡುತ್ತಾರೆ. ಆಗ ಮನೆಯಲ್ಲಿರುವ ಎಲ್ಲರೂ ಕೂಡ ಒಮ್ಮತದಿಂದ ಘಾಟಿ ಗಾನ್ವಿಯನ್ನ ಆಯ್ಕೆ ಮಾಡ್ತಾರೆ. ಹಾಗೂ ಎರಡನೇ ಹೆಚ್ಚು ವೋಟ್ ಬಂದದ್ದು ಪ್ರಶಾಂತ್ ಗೆ. ಘಾಟಿ ಗಾನ್ವಿಯನ್ನ ಆಯ್ಕೆ ಮಾಡಲು ಎಲ್ಲರೂ ಕೊಟ್ಟಂತಹ ಉತ್ತರವೇ, “ಆಕೆ ಮನೆಗೆ ಬಂದಾಗಿನಿಂದ ಎಲ್ಲರೊಂದಿಗೆ ಚೆನ್ನಾಗಿ ಮಾತನಾಡಿ ನಮ್ಮವರಲ್ಲೇ ಒಬ್ಬರಾಗಿದ್ದಾರೆ. ಅದಕ್ಕೋಸ್ಕರ ನಾವೆಲ್ಲರೂ ಕೂಡ ಘಾಟಿ ಗಾನ್ವಿಯನ್ನ ಲೀಡರ್ ಆಗಿ ಆಯ್ಕೆ ಮಾಡ್ತೀವಿ ಅಂತ ಹೇಳಿದ್ರು. ಅಷ್ಟೇ ಅಲ್ಲದೆ ಘಾಟಿ ಗಾನ್ವಿ ಮನೆಗೆ ಬಂದಾಗ ಸೌಂದರ್ಯ ಶೆಟ್ಟಿಯ ಜೊತೆಗೆ ಶೆಟ್ಟಿ ಡಾನ್, ಶೆಟ್ಟಿ ಡಾನ್ ಎಂದು ತುಂಬಾ ಹತ್ತಿರ ಆಗೋಕೆ ನೋಡ್ತಾಳೆ.

Bigg Boss 

         ಬಿಗ್ ಬಾಸ್ (Bigg Boss) ಮೊದಲ ಗೇಮ್ ಇಡುತ್ತಾರೆ. ಅದೇ ಬ್ಯಾಲೆನ್ಸಿಂಗ್ ಗೇಮ್. ಈ ಗೇಮ್ ನಲ್ಲಿ ಆಪೋಸಿಟ್ ಟೀಮ್ ನವರು, ಬ್ಯಾಲೆನ್ಸ್ ಮಾಡಿ ಹಿಡಿದುಕೊಂಡಿರುವವರ ಮುಖಕ್ಕೆ ನೀರು ಎರಚುವುದು , ಇಂತಹ ಏನೆಲ್ಲ ತಂತ್ರ ಮಾಡಿ ಅವರು ಬ್ಯಾಲೆನ್ಸ್ ತಪ್ಪಿ ಕೈ ಬಿಡುವಂತೆ ಮಾಡುವುದು ಈ ಗೇಮ್ ಆಗಿತ್ತು. ಈ ವೇಳೆ ಗಾನ್ವಿ ಅವರ ತಂಡದಿಂದ ಗಾನ್ವಿಯೇ ಮೊದಲು ಆಟ ಆಡಲು ಹೋಗುತ್ತಾಳೆ. ಈ ವೇಳೆ ಆಕೆ ಎಲ್ಲರಿಗೂ ಚಾನ್ಸ್ ಕೊಡದೆ ತಾನೇ ತುಂಬಾ ಹೊತ್ತು ಅದನ್ನ ಹಿಡಿದುಕೊಂಡು ನಿಂತಿರುತ್ತಾಳೆ. ಕೊನೆಗೆ ಎಲ್ಲರೂ ಆಕೆಯ ವಿರುದ್ಧ ಕೂಗಾಡಲು ಶುರು ಮಾಡಿದಾಗ ಆಕೆ ಕೈಬಿಡುತ್ತಾಳೆ. ಅದು ಅಲ್ಲದೆ ಆಕೆ ಹಿಡಿದುಕೊಂಡು ನಿಂತಿದ್ದಂತಹ ರೀತಿ ಕೂಡ ತಪ್ಪಾಗಿತ್ತು.  ಈ ಬಗ್ಗೆ ಸುದೀಪ್ ಅವರು ವೀಕೆಂಡ್ ಶೋ ಆದಂತಹ ವಾರದ ಕಿಚ್ಚನ ಪಂಚಾಯಿತಿಯಲ್ಲಿ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದರು. ಈ ಒಂದು ಗೇಮ್ ಆದ ನಂತರ ಇಡೀ ಮನೆಯವರಿಗೆ ಗಾನ್ವಿಯ  ಮೇಲಿದ್ದ ಅಭಿಪ್ರಾಯವೇ ಬದಲಾಗುತ್ತೆ. 

        ಇದಾದ ನಂತರ ಒಂದು ಮಟ್ಟಿಗೆ ನಾರ್ಮಲ್ ಆಗಿದ್ದ ಮನೆ ಮತ್ತೆ ಘಾಟಿ ಗಾನ್ವಿಯ ಎಂಟ್ರಿ ಮೂಲಕ ಮತ್ತೆ ಕಾವೇರುತ್ತೆ.  ಘಾಟಿ ಗಾನ್ವಿಯ ಈ ಬಿಹೇವಿಯರ್ ನೋಡಿ ಮನೆಯವರೆಲ್ಲ ಸುಸ್ತಾಗಿದ್ದರು. ಬಾಯಿ ಬಿಟ್ಟರೆ ಆಕೆ ಜಗಳ ಮಾಡುತ್ತಿದ್ದಳು.  ಆಕೆ ಬಿಗ್ ಬಾಸ್ ಮನೆಯಲ್ಲಿ ತುಂಬ ಕ್ಲೋಸ್ ಆಗಿದ್ದೆ ಮಾಡ್ರನ್ ಕವಿ ಮಂಜನ ಜೊತೆ. ಆತ ಕೂಡ ಈಗ ಬಿಗ್ ಬಾಸ್ ಮನೆಯಲ್ಲಿ ಬಾಯಿಯ ಕಂಟ್ರೋಲ್ ತಪ್ಪಿ , ರಾಕ್ಷಸ ಗಂಧರ್ವ ಟಾಸ್ಕ್ ನಲ್ಲಿ ಬಾಯಿ ಬಂದಾಗೆ ಸಹ ಕಂಟೆಸ್ಟೆಂಟ್ ಗಳಿಗೆ ಬೈದು ಮನೆಯಿಂದ ಆಚೆ ಬರ್ತಾನೆ. ಇದಾದ ನಂತರ ಘಾಟಿ ಗಾನ್ವಿ ಬಿಗ್ ಬಾಸ್ ಮನೆಯಲ್ಲಿ ಒಂಟಿ ಆಗ್ತಾರೆ. 

ಮತ್ತೆ ಗಾನ್ವಿಯನ್ನ ನಂಬಿ ಕೆಟ್ಟ ತಂಡ Bigg Boss 

Bigg Boss 

         ಬಿಗ್ ಬಾಸ್ ಮನೆಯಲ್ಲಿ ಈ ವಾರ ಒಂದು ಟಾಸ್ಕ್ ನೀಡುತ್ತಾರೆ. ಈ ಟಾಸ್ಕ್ ಆಡಲು ಎರಡು ತಂಡಗಳನ್ನು ಮಾಡುವ ಜವಾಬ್ದಾರಿಯನ್ನ ಮನೆಯ ಕ್ಯಾಪ್ಟನ್ ಆಗಿದ್ದಂತಹ ಧನುಷ್ ಅವರಿಗೆ ನೀಡುತ್ತಾರೆ. ಈ ವೇಳೆ ಬಿಗ್ ಬಾಸ್  ಧನುಷ್ ಬಳಿ, ಈ ಮನೆಯಲ್ಲಿ ಯಾರಿಗೆ, ಯಾರದ್ದೇ ಸಹಾಯವಿಲ್ಲದೆ ಒಂಟಿಯಾಗಿ ಆಡಲು ಸಶಕ್ತರಿರುತ್ತಾರೋ ಅವರನ್ನು ಒಂದು ಗುಂಪಾಗಿ ಮಾಡಬೇಕು. ಹಾಗೂ ಈ ಮನೆಯಲ್ಲಿ ಯಾರಿಗೆ ಇನ್ನೊಬ್ಬರ ಸಹಾಯವಿಲ್ಲದೆ ಇರಲು ಸಾಧ್ಯವಿಲ್ಲವೋ ಅಂತವರನ್ನು ಇನ್ನೊಂದು ಗುಂಪಾಗಿ ಮಾಡಬೇಕು ಎಂದು ಹೇಳುತ್ತಾರೆ. ಆಗ ಧನುಷ್ ಒಂಟಿಯಾಗಿ ಆಡಬಲ್ಲ ಗುಂಪಿಗೆ ಮೊದಲನೆಯದಾಗಿ ತೆಗೆದುಕೊಂಡ ಹೆಸರೇ ಘಾಟಿ ಗಾನ್ವಿ, ನಂತರ ಒಂಟಿ ತಂಡದಲ್ಲಿ ಧನುಷ್, ಗಗನ್ , ಆಸಿಯ, ಪ್ರಶಾಂತ್ ಇರುತ್ತಾರೆ ಹಾಗೂ ಜಂಟಿ ತಂಡದಲ್ಲಿ ಸೌಂದರ್ಯ ಶೆಟ್ಟಿ, ಯಶಸ್, ಕಿರಣ್ ಶಾಸ್ತ್ರಿ, ಕಾವ್ಯ, ತಾಂಡವ್ ರಾಮ್ ಹಾಗೂ ಕುಮಾರಿ ಜಂಟಿ ತಂಡದಲ್ಲಿ ಇರುತ್ತಾರೆ. ಈ ಆಟದಲ್ಲಿ ಬಿಗ್ ಬಾಸ್ ಪ್ರತಿ ತಂಡಕ್ಕೂ 50 ಕಾಯಿನ್ ಗಳನ್ನು ನೀಡಿ ಈ ಬಿಗ್ ಬಾಸ್ ಮನೆಯಲ್ಲಿ ಯಾರಿಗೆ ಎಷ್ಟು ಸಾಮರ್ಥ್ಯವಿದೆಯೋ ಅವರು ಅಷ್ಟು ಕಾಯಿನನ್ನ ತೆಗೆದುಕೊಳ್ಳಬೇಕು ಅಂತ ಹೇಳುತ್ತಾರೆ.

Bigg Boss

      ಮೊದಲಿಗೆ ಜಂಟಿ ತಂಡದಲ್ಲಿ ಯಾರಾದರೂ ಒಬ್ಬ ಸದಸ್ಯನನ್ನ ಆಯ್ಕೆ ಮಾಡಬೇಕು. ಅವರು ಮನೆಯ ಸದಸ್ಯರೆಲ್ಲರಿಗೂ ತಮಗೆ ಯಾರಿಗೆ ಎಷ್ಟು ಕೊಟ್ಟರೆ ಸೂಕ್ತ ಎಂದು ನಿರ್ಧರಿಸಿ, ತಾವೇ ಎಲ್ಲರಿಗೂ ಕಾಯಿನ್ ಹಂಚಬೇಕು. ಹಾಗೂ ಜಂಟಿ ತಂಡದಲ್ಲಿರುವವರ ಒಮ್ಮತದ ಮೇರೆಗೆ ಕಾಯಿನನ್ನ ಹಂಚಿಕೊಳ್ಳಬೇಕಿತ್ತು. ಈ ವೇಳೆ ಒಂಟಿ ತಂಡದಲ್ಲಿ ಕಾಯಿನ್ ಹಂಚಲು ಗಗನ್ ಚಿನ್ನಪ್ಪ ಅಧಿಕ ಮತದೊಂದಿಗೆ ಆಯ್ಕೆಯಾಗುತ್ತಾರೆ. ಈ ವೇಳೆ ಮೊದಲಿಗೆ ಗಗನ್ ಚಿನ್ನಪ್ಪ ತನಗೆ 15 ಕಾಯಿನ್ ಇಟ್ಟುಕೊಂಡು ಮನೆಯವರಿಗೆ ಹಂಚುತ್ತಾರೆ. ಆಗ ಮನೆಯವರಲ್ಲಿ ಜಗಳ ಶುರುವಾಗುತ್ತೆ. ಆಗ ಮತ್ತೆ ಗಗನ್ ಈ ತಂಡದಲ್ಲಿ 15 ಕಾಯಿನ್ ಪಡೆದುಕೊಳ್ಳಲು ಧನುಷಕ್ಕೆ ಅರ್ಹತೆ ಇದೆ, ಹಾಗಾಗಿ ಧನುಷ್ ಬಳಿ ಇರುವ 10 ಕಾಯಿನ್ ಅನ್ನು ನಾನು ಪಡೆದುಕೊಳ್ಳುತ್ತೇನೆ ಎಂದು ಗಗನ್ ಚಿನ್ನಪ್ಪ  ಎಕ್ಸ್ಚೇಂಜ್ ಮಾಡಿಕೊಳ್ಳುತ್ತಾನೆ. ಈ ವೇಳೆ ಘಾಟಿ ಗಾನ್ವಿಗೆ 5 ಕಾಯಿನ್  ಗಗನ್ ಚಿನ್ನಪ್ಪ ನೀಡುತ್ತಾನೆ. ಗಾನ್ವಿ ಸಿಕ್ಕಾಪಟ್ಟೆ ಜಗಳ ಆಡ್ತಾಳೆ. ಮುಂದಿನ ಸುತ್ತಿನಲ್ಲಿ ಮತ್ತೆ ಬಿಗ್ ಬಾಸ್ ಕನ್ಫೆಷನ್ ರೂಮ್ ಗೆ ಕಾಯಿನ್ ಹಂಚಲು ಮೊದಲು ಯಾರನ್ನಾದರೂ ಒಬ್ಬರನ್ನ ಕಳಿಸಿ ಎಂದು ಹೇಳುತ್ತಾರೆ. ಆಗ ಗಗನ್ ಚಿನ್ನಪ್ಪ ಹೇಳ್ತಾನೆ ಟ್ರಸ್ಟ್ ಮೀ ನಾನು ಎಲ್ಲರಿಗೂ ಸಮನಾಗಿ ಹಂಚುತ್ತೇನೆ ಪ್ರಾಮಿಸ್ ಎಂದು ಹೇಳ್ತಾನೆ. ಆಗ ಘಾಟಿ ಗಾನ್ವಿ ಈ ಸಲಿ ನನಗೆ ಒಂದು ಅವಕಾಶ ಕೊಟ್ಟು ನೋಡಿ ಪ್ರಾಮಿಸ್ ನಾನು ಎಲ್ಲರಿಗೂ ಸಮನಾಗಿ ಹಂಚುತ್ತೇನೆ ಅಂತ ಹೇಳ್ತಾಳೆ. ಆಗ ಮನೆಯವರೆಲ್ಲರೂ ಓಕೆ ಒಂದು ಚಾನ್ಸ್ ಕೊಟ್ಟು ನೋಡೋಣ ಅಂತ ಹೇಳಿ ಘಾಟಿ ಗಾನ್ವಿಯನ್ನೇ ಕನ್ಫೆಷನ್ ರೂಮ್ಗೆ ಮೊದಲು ಕಳಿಸುತ್ತಾರೆ. ಆಗ ಕನ್ಫೆಷನ್ ರೂಮ್ನಲ್ಲಿ ಬಿಗ್ ಬಾಸ್ ಗಾನ್ವಿಗೆ ನಿಮ್ಮ ಎದುರು ಕಾಯಿನ್ಗಳಿವೆ. ನಿಮ್ಮ ಅರ್ಹತೆಗೆ ಎಷ್ಟು ಮೌಲ್ಯ ಸೂಕ್ತವಾಗಿದೆ ಎಂದು ತಿಳಿಸಿ ಅಷ್ಟು ಕಾಯಿನ್  ನೀವು ತೆಗೆದುಕೊಳ್ಳಿ ಎಂದು ಹೇಳುತ್ತಾರೆ. ಆಗ ಘಾಟಿ ಗಾನ್ವಿ ಅವರು ನಾನು ಆಡುತ್ತಿರುವ ರೀತಿಗೆ ನನಗೆ 15 ಕಾಯಿನ್ ಪಡೆದುಕೊಳ್ಳುವಷ್ಟು ಅರ್ಹತೆ ಇದೆ ಎಂದು ಹೇಳಿ ಅಷ್ಟು ಕಾಯಿನ್ ಪಡೆದುಕೊಳ್ಳುತ್ತಾರೆ. 

Bigg Boss

      ಇದಾದ ನಂತರ ನಿಮ್ಮ ನಂತರ ಯಾರು ಒಳಗೆ ಬರಬೇಕೆಂದು ಆಕೆ ಬಳಿ ಕೇಳ್ತಾರೆ.  ಆಕೆ ಲಕ್ಷ್ಮಿಯನ್ನ ಆಯ್ಕೆ ಮಾಡ್ತಾಳೆ.. ಕೊನೆಯಲ್ಲಿ ಬಂದಂತಹ ಧನುಷ್ಗೆ ಯಾವುದೇ ಕಾಯಿನ್ ಸಿಗೋದಿಲ್ಲ. ಈ ವೇಳೆ ಮತ್ತೆ ಘಾಟಿ ಗಾನ್ವಿ ಎಲ್ಲರ ಕಣ್ಣೆದುರಿಗೆ ಫೇಕ್ ಆಗ್ತಾರೆ. ಗಗನ್ ನಾನು ಮೊದಲೇ ಹೇಳಿಲ್ಲವಾ ಆಕೆ ಮೋಸ ಮಾಡ್ತಾಳೆ ಅಂತ ಹೇಳ್ತಾನೆ. ಆಗ ಗಾನ್ವಿ ನಾನಿಲ್ಲಿ ಯಾರನ್ನು ಕೂಡ ಮೆಚ್ಚಿಸೋಕೆ ಬಂದಿದ್ದಲ್ಲ.  ನನ್ನ ಆಟವನ್ನು ನಾನು ಆಡೋಕೆ ಬಂದದ್ದು ಎಂದು ಹೇಳಿ ಆಕೆ ತನ್ನನ್ನು ತಾನು ಬಿಟ್ಟುಕೊಡೋದೇ ಇಲ್ಲ. ಇದೇ ರೀತಿ ಬಿಗ್ ಬಾಸ್ ಮನೆಯಲ್ಲಿ ಎಲ್ಲರನ್ನ ಎದುರು ಹಾಕಿಕೊಂಡು ಘಾಟಿ ಗಾನ್ವಿ ಫೈನಲ್ ಗೆ ಹೋಗಿ ಕಪ್ ಗೆಲ್ತಾರಾ ಅನ್ನೋದೇ ಇಲ್ಲಿರುವಂತಹ ಕೊನೆ ಪ್ರಶ್ನೆ…!!

1 thought on “ಘಾಟಿ ಗಾನ್ವಿ ಬಿಗ್ ಬಾಸ್ ಮನೆಯಲ್ಲಿ ಫೇಕ್ ಗಾನ್ವಿ ಆದ್ರ…!”

Leave a Comment